7 ಸಲ ಸಂಸದನಾದ್ರೂ ಸಚಿವ ಸ್ಥಾನ ಇಲ್ಲ, ದಲಿತರೇನು ಬಿಜೆಪಿಗೆ ವೋಟ್ ಹಾಕಿಲ್ಲವೇ?: ಜಿಗಜಿಣಗಿ ಕಿಡಿ

By Kannadaprabha News  |  First Published Jul 10, 2024, 12:06 PM IST

ಕ್ಯಾಬಿನೆಟ್ ಪೋಸ್ಟ್‌ಗಾಗಿ ಜನರಿಂದ ನನ್ನ ಮೇಲೆ ಒತ್ತಡ ಇದೆ. ಇಡೀ ದಕ್ಷಿಣ ಭಾರತದಲ್ಲಿ ಏಳು ಬಾರಿ ಸಂಸದನಾಗಿ ಆಯ್ಕೆಯಾದ ದಲಿತ ನಾಯಕ ನಾನೊಬ್ಬನೆ ಇದ್ದೇನೆ ಎಂದು ಹೇಳಿದ್ದಾರೆ. ಮೇಲ್ವರ್ಗದ ಪ್ರತಿ ಯೊಬ್ಬರೂ ಸಚಿವರಾದರು. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ? ಇದೆಂಥ ಅನ್ಯಾಯ? ಈ ಕುರಿತು ನನಗೆ ತೀವ್ರ ನೋವಿದೆ ಎಂದು ಅಸಮಾಧಾನ ಹೊರಹಾಕಿದ ಸಂಸದ ರಮೇಶ್ ಜಿಗಜಿಣಗಿ 


ವಿಜಯಪುರ(ಜು.10):  ಮೇಲ್ವರ್ಗದ ಎಲ್ಲರೂ ಕೇಂದ್ರದಲ್ಲಿ ಸಚಿವರಾದರು. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ? ನನಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಪೋಸ್ಟ್ ಬೇಕಿಲ್ಲ, ನನಗೆ ಜನ ಮುಖ್ಯ. ಅವರಿಂದ ನನಗೆ ತೀವ್ರ ಒತ್ತಡ ಬರುತ್ತಿದೆ. ಕ್ಷೇತ್ರದ ಜನರೀಗ ನನಗೆ ಬೈಯುತ್ತಿದ್ದಾರೆ, ಬಿಜೆಪಿ ದಲಿತ ವಿರೋಧಿ ಎಂದು ನಾವು ಮೊದಲೇ ಹೇಳಿಲ್ವಾ ಎಂದು ಕೆಲವರು ವಾದ ಮಾಡುತ್ತಿದ್ದಾರೆ ಎಂದು ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ ಹೊರಹಾಕಿದರು.

ನಗರದ ಹಳೆ ಪ್ರವಾಸಿ ಮಂದಿರದ ಆವರಣದಲ್ಲಿ  ಮಂಗಳವಾರ ತಮ್ಮ ಸಾರ್ವಜನಿಕ ಸಂಪರ್ಕ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಪೋಸ್ಟ್‌ಗಾಗಿ ಜನರಿಂದ ನನ್ನ ಮೇಲೆ ಒತ್ತಡ ಇದೆ. ಇಡೀ ದಕ್ಷಿಣ ಭಾರತದಲ್ಲಿ ಏಳು ಬಾರಿ ಸಂಸದನಾಗಿ ಆಯ್ಕೆಯಾದ ದಲಿತ ನಾಯಕ ನಾನೊಬ್ಬನೆ ಇದ್ದೇನೆ ಎಂದು ಹೇಳಿದ್ದಾರೆ. 

Tap to resize

Latest Videos

ನನ್ನ ಅನುಭವ ಪಕ್ಷ ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ: ಸ್ವಪಕ್ಷದ ವಿರುದ್ಧ ಸಂಸದ ಜಿಗಜಿಣಗಿ ಅಸಮಾಧಾನ

ಮೇಲ್ವರ್ಗದ ಪ್ರತಿ ಯೊಬ್ಬರೂ ಸಚಿವರಾದರು. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ? ಇದೆಂಥ ಅನ್ಯಾಯ? ಈ ಕುರಿತು ನನಗೆ ತೀವ್ರ ನೋವಿದೆ ಎಂದು ಅಸಮಾಧಾನ ಹೊರಹಾಕಿದರು.

click me!