ಡಾ.ಸುಧಾಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಭಾಗಿಯಾಗಿದ್ದರು. ವೇದಿಕೆಯಲ್ಲೇ ಬಹಿರಂಗವಾಗಿ ಕಾರ್ಯಕರ್ತರಿಗೆ ಮದ್ಯ ವಿತರಣೆ ಮಾಡಿದ್ದಾರೆ. ಸಂಸ್ಕೃತಿ, ಸಂಪ್ರದಾಯ, ಸತ್ಸಂಗದ ಬಗ್ಗೆ ಬಹಳ ಮಾತನಾಡೋರು ಇಂತಹ ಕೆಲಸ ಮಾಡುತ್ತಾರಾ ಎಂದ ಸಿಎಂ ಸಿದ್ದರಾಮಯ್ಯ
ಬೆಂಗಳೂರು(ಜು.10): 'ಬಿಜೆಪಿ ಸಂಸದ ಮಿಸ್ಟರ್ ಡಾ.ಸುಧಾಕರ ನೆಲಮಂಗಲದಲ್ಲಿ ಆಯೋಜಿಸಿದ್ದ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲೇ ಬಹಿರಂಗವಾಗಿ ಮದ್ಯ ಹಂಚಿದ್ದಾರೆ. ಸಂಸ್ಕೃತಿ, ಸಂಪ್ರದಾಯ, ಸತ್ಸಂಗದ ಮಾತ ನಾಡುವವರಿಗೆ ನೈತಿಕತೆ ಇದೆಯೇ' ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಡಾ.ಸುಧಾಕರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ಭಾಗಿಯಾಗಿದ್ದರು. ವೇದಿಕೆಯಲ್ಲೇ ಬಹಿರಂಗವಾಗಿ ಕಾರ್ಯಕರ್ತರಿಗೆ ಮದ್ಯ ವಿತರಣೆ ಮಾಡಿದ್ದಾರೆ. ಸಂಸ್ಕೃತಿ, ಸಂಪ್ರದಾಯ, ಸತ್ಸಂಗದ ಬಗ್ಗೆ ಬಹಳ ಮಾತನಾಡೋರು ಇಂತಹ ಕೆಲಸ ಮಾಡುತ್ತಾರಾ' ಎಂದರು.
ನೂತನ ಸಂಸದ ಡಾ ಕೆ ಸುಧಾಕರ್‌ಗೆ ಅಭಿನಂದನಾ ಸಮಾರಂಭ: ಎಣ್ಣೆ ಬಾಡೂಟಕ್ಕೆ ಮುಗಿಬಿದ್ದ ಜನರು!
ಬಿಜೆಪಿ ಸಭೆಯಲ್ಲಿ ಮದ್ಯ ಹಂಚಿದ ಮುಖಂಡ ವಜಾ
ಬೆಂಗಳೂರು: ನೂತನ ಬಿಜೆಪಿ ಸಂಸದರ ಸನ್ಮಾನ ಸಮಾರಂಭದಲ್ಲಿ ಸಾರ್ವಜನಿಕವಾಗಿ ಮದ್ಯ ಹಂಚಿಕೆ ಮಾಡಿದ ಹಿನ್ನೆಲೆಯಲ್ಲಿ ನೆಲ ಮಂಗಲ ಮಂಡಲ ಅಧ್ಯಕ್ಷ ಜಗ ದೀಶ್ ಚೌಧರಿ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆಗೊಳಿಸಿ ಆದೇಶಿಸಲಾ ಗಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸೂಚನೆ ಮೇರೆಗೆ ಬಿಜೆಪಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮ ಕೃಷ್ಣಪ್ಪ ಆದೇಶಿಸಿದ್ದಾರೆ.