2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ: ಸಚಿವ ಸತೀಶ್‌ ಜಾರಕಿಹೊಳಿ

By Kannadaprabha NewsFirst Published Oct 11, 2024, 3:58 PM IST
Highlights

2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ. ಆದರೆ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ. ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎನ್ನುವುದು ನನಗೂ ಗೊತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ಹಾಸನ (ಅ.11): 2028ಕ್ಕೆ ಸಿಎಂ ಆಗುವ ಇಚ್ಛೆ ನನಗೂ ಇದೆ. ಆದರೆ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ. ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಎನ್ನುವುದು ನನಗೂ ಗೊತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ತಮ್ಮ ಆಪ್ತ ಸಮಾಜ ಸೇವಕ ಮಹಂತಪ್ಪ ನಿಧನದ ಹಿನ್ನೆಲೆಯಲ್ಲಿ ನಗರದಲ್ಲಿ ಕುಟುಂಬದ ಸದಸ್ಯರನ್ನ ಭೇಟಿಯಾಗಿ ಸಾಂತ್ವನ ಹೇಳಿದ ಸಚಿವರು, ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ. ಅದು ಹೊರಗಡೆ ಇರಬಹುದು. 

ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ ಸಿಎಂ ಆಗಲು ಸಮರ್ಥರು ಎಂದು ಕಾಂಗ್ರೆಸ್ ಶಾಸಕ ತಮ್ಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವಧಿ ಮುಗಿದ ಮೇಲೆ ಅವರ ಸಹಕಾರದಿಂದ ಸತೀಶ್ ಜಾರಕಿಹೊಳಿ ಸಿಎಂ ಆಗುತ್ತಾರೆ ಎಂದು ಹೇಳಿರಬಹುದು. ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆ ಇಲ್ಲಾ ಎಂದು ಹೈಕಮಾಂಡ್ ಕೂಡ ಹೇಳಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲಾ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

Latest Videos

ಮುಡಾ ಹಗರಣ ಕುರಿತ ಲೋಕಾಯುಕ್ತ ತನಿಖೆ ಮಾಡಲು ಕೋರ್ಟ್ ಆದೇಶ ಕೊಟ್ಟಿದೆ. ಎಲ್ಲಾ ರೀತಿಯ ಸಹಕಾರ ಕೊಡುತ್ತಾರೆ. ಯಾರ್ಯಾರಿಗೆ ನೋಟಿಸ್ ಕೊಡ್ತಾರೆ. ತನಿಖೆ ನಿಷ್ಪಕ್ಷಪಾತವಾಗಿ ಇರಲಿದೆ. ಅದರಿಂದ ಸಿಎಂಗೆ ಏನು ಮುಜುಗರ ಆಗಲ್ಲ. ಈ ದೇಶದಲ್ಲಿ ಮುಖ್ಯಮಂತ್ರಿಗಳ ಮೇಲೆ ತನಿಖೆಗೆ ನಡೆಸಿರುವ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲಿ ಇದೂ ಒಂದು ಅಷ್ಟೇ. ಕೇಂದ್ರದಲ್ಲೂ ಬಿಜೆಪಿ ಮಂತ್ರಿಗಳ ಮೇಲೆ ಸಾಕಷ್ಟು ಕೇಸ್‌ಗಳಿವೆ. ಅವರು ರಾಜೀನಾಮೆ ಕೊಡ್ತಾರಾ...? ಕೋಡೋದಿಲ್ಲ. ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ತಾನೆ. ಸಿದ್ದರಾಮಯ್ಯ ಅವರು ಏಕೆ ಮುಂದುವರಿಯಬಾರದು ಎಂಬ ಪ್ರಶ್ನೆ ಇಲ್ಲಿ ಇದೆ. 

ಮುಡಾ ಕಳಂಕ ಮರೆಮಾಚಲು ಜಾತಿ ಗಣತಿ ಮುನ್ನಲೆಗೆ ಯತ್ನ: ಸಿ.ಟಿ.ರವಿ ಆರೋಪ

ಅವರು ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದರು. ಜಾತಿಗಣತಿ ವರದಿ ಜಾರಿಗೆ ಸಂಬಂಧಪಟ್ಟಂತೆ ಪರ, ವಿರೋಧ ಇದ್ದೇ ಇರುತ್ತದೆ. ಅದಿನ್ನೂ ಚರ್ಚೆಗೆ ಬಂದಿಲ್ಲ, ಬಂದ ಮೇಲೆ ನೋಡೋಣ. ಇನ್ನೂ ಚರ್ಚೆ ಆಗಿಲ್ಲ. ಚರ್ಚೆ ಆದ ಮೇಲೆ ಮುಂದಿನ ನಿರ್ಧಾರ. ವರದಿಯಲ್ಲಿ ಏನಿದೆ ಎಂದು ಯಾರು ರಿಪೋರ್ಟ್ ನೋಡಿಲ್ಲ. ಬಂದ ಮೇಲೆ ಅದರ ಬಗ್ಗೆ ನೋಡೋಣ. ಇನ್ನು ವಾಲ್ಮೀಕಿ ಹಗರಣದಲ್ಲಿ ಎಸ್‌ಐಟಿ, ಚಾರ್ಜ್‌ಶೀಟ್ ಸಲ್ಲಿಸಿದೆ. ಅದರಲ್ಲಿ ಸರ್ಕಾರಕ್ಕೆ ಮುಜುಗರ ಆಗುವಂತದ್ದು ಏನೂ ಇಲ್ಲ ಎಂದರು.

click me!