
ಬೆಳಗಾವಿ(ನ. 28) ಚುನಾವಣಾ ಪ್ರಚಾರದ ವೇಳೆ ಯಾವ ಊರಿನಲ್ಲಿ ಏನು ಮಾತನಾಡಬೇಕು ಎಂದ ಅಜೆಂಡಾ ರಾಜಕೀಯ ಪಕ್ಷಗಳಿಗೆ ಇರುವುದು ಸರ್ವೇ ಸಾಮಾನ್ಯ. ಆದರೆ ಈ ವಿಚಾರ ಬಹಿರಂಗವಾಗಿಬಿಟ್ಟರೆ?
ಜೆಡಿಎಸ್ ಅಂಥ ಮುಜುಗರದ ಸನ್ನಿವೇಶವೊಂದಕ್ಕೆ ಸಿಲುಕಿ ಹಾಕಿಕೊಂಡಿದೆ. ಡಿ.5ರಂದು ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಡೆಯಲಿದೆ. ಪ್ರಚಾರ ಬಗ್ಗೆ ಮಾಹಿತಿ ನೀಡುವಾಗ ಜೆಡಿಎಸ್ ಕಾರ್ಯಕರ್ತರು ಎಡವಟ್ಟು ಮಾಡಿಕೊಂಡಿದ್ದಾರೆ.
ಯಾವ ಊರಲ್ಲಿ ಏನು ವಿಷಯ ಮಾತನಾಡಬೇಕೆಂಬ ಮಾಹಿತಿಯೂ ಪೋಸ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಪ್ರಚಾರ ಮಾಡುವ ಊರಿನ ಹೆಸರು, ಸಮಯ ಜೊತೆ ಚುನಾವಣಾ ಅಜೆಂಡಾ ಮಾಹಿತಿಯ ವಿವರಣೆಯನ್ನು ನೀಡಲಾಗಿದೆ.
17 ಶಾಸಕರನ್ನು ಬರಮಾಡಿಕೊಂಡ ಬಿಎಸ್ ವೈಗೆ ಸಂಕಷ್ಟ
'ಕುಟುಂಬ ರಾಜಕೀಯ, ದಬ್ಬಾಳಿಕೆ, ದೌರ್ಜನ್ಯ, ದುರಾಡಳಿತ' 'ಭ್ರಷ್ಟಾಚಾರ, ಜಾತಿ ರಾಜಕೀಯ' ಹೀಗೆ ಯಾವ ವಿಚಾರ ಮಾತನಾಡಬೇಕು ಎಂಬುದನ್ನು ಬರೆಯಲಾಗಿದೆ.
ಕುಟುಂಬ ರಾಜಕೀಯ ಬಗ್ಗೆ ಪ್ರಚಾರ ವೇಳಾಪಟ್ಟಿ ಪೋಸ್ಟರ್‌ನಲ್ಲಿ ಮಾಹಿತಿ ನೀಡಿದ್ದು ಇನ್ನೊಂದು ಕಡೆ ದೇವೇಗೌಡರ ಕುಟುಂಬದ ಪೋಟೋಗಳೇ ರಾರಾಜಿಸುತ್ತಿವೆ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಪೋಟೋಗಳೆ ಇವೆ.
ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಸಖತ್ ವೈರಲ್ ಆಗುತ್ತಿದೆ. ನವೆಂಬರ್ 26ರ ಚುನಾವಣಾ ಪ್ರಚಾರ ವೇಳಾಪಟ್ಟಿಯ ಫೋಟೋ ವೈರಲ್ ಆಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.