Bharat Jodo Yatra: ರಾಹುಲ್‌ ಪಾದಯಾತ್ರೆ ಬಳ್ಳಾರಿ ಪ್ರವೇಶಿಸಿದಾಗ ಬೃಹತ್‌ ರ‍್ಯಾಲಿ: ಡಿಕೆಶಿ

By Kannadaprabha News  |  First Published Sep 12, 2022, 5:30 AM IST

ರಾಹುಲ್‌ ಗಾಂಧಿ ಅವರಿಗೆ ಬಳ್ಳಾರಿ ಅಂದರೆ ಪ್ರೀತಿ. ಬಳ್ಳಾರಿಯು ರಾಹುಲ್‌ ತಾಯಿ, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಗೆ ಮರುಜನ್ಮ ನೀಡಿದ ಜಿಲ್ಲೆ. ಹೀಗಾಗಿ ಇಲ್ಲೇ ಬೃಹತ್‌ ಸಮಾವೇಶ ಆಯೋಜಿಸಬೇಕು ಎಂಬುದು ರಾಹುಲ್‌ ಉದ್ದೇಶವಾಗಿದೆ: ಡಿ.ಕೆ.ಶಿವಕುಮಾರ್‌ 


ಬಳ್ಳಾರಿ(ಸೆ.12): ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಬಳ್ಳಾರಿಗೆ ಬಂದಾಗ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದ್ದು, ಇದು ಯಾತ್ರೆ ಅವಧಿಯಲ್ಲಿ ಕರ್ನಾಟಕದಲ್ಲಿ ಪಕ್ಷದಿಂದ ನಡೆಯಲಿರುವ ಏಕೈಕ ಸಮಾವೇಶವಾಗಿದೆ.

ಬಳ್ಳಾರಿ ಸಮಾವೇಶದ ಕುರಿತು ನಗರದ ಗುರು ಫಂಕ್ಷನ್‌ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಈ ಮಾಹಿತಿ ನೀಡಿದರು. ‘ರಾಹುಲ್‌ ಗಾಂಧಿ ಅವರಿಗೆ ಬಳ್ಳಾರಿ ಅಂದರೆ ಪ್ರೀತಿ. ಬಳ್ಳಾರಿಯು ರಾಹುಲ್‌ ತಾಯಿ, ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿಗೆ ಮರುಜನ್ಮ ನೀಡಿದ ಜಿಲ್ಲೆ. ಹೀಗಾಗಿ ಇಲ್ಲೇ ಬೃಹತ್‌ ಸಮಾವೇಶ ಆಯೋಜಿಸಬೇಕು ಎಂಬುದು ರಾಹುಲ್‌ ಉದ್ದೇಶವಾಗಿದೆ’ ಎಂದರು.

Latest Videos

undefined

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

ರಾಹುಲ್‌ ಗಾಂಧಿ ಐದು ವಿಷಯಗಳನ್ನು ಇಟ್ಟುಕೊಂಡು ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ. ಸರ್ವಜನಾಂಗದ ಶಾಂತಿಗಾಗಿ ಸಾಮರಸ್ಯ ಕಾಪಾಡಲು, ದೇಶದಲ್ಲಿ ನಿರುದ್ಯೋಗ ನಿಯಂತ್ರಿಸಲು, ಬೆಲೆ ಏರಿಕೆ ನಿಯಂತ್ರಿಸಲು, ಭ್ರಷ್ಟಾಚಾರರಹಿತ ರಾಜ್ಯ ನಿರ್ಮಾಣ ಮಾಡಲು ಹಾಗೂ ರೈತರ ಬೆಳೆಗೆ ಭದ್ರತೆ ಒದಗಿಸುವ ಉದ್ದೇಶದಿಂದ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಯಾತ್ರೆ ನಡೆಯಲಿದೆ ಎಂದರು.

ರಾಜ್ಯದಲ್ಲಿ ಗುಂಡ್ಲುಪೇಟೆಯಿಂದ ಆರಂಭವಾಗುವ ಯಾತ್ರೆ ಎಂಟು ಜಿಲ್ಲೆಗಳ ಮೂಲಕ ಹಾದುಹೋಗಲಿದೆ. ಈ ವೇಳೆ ರಾಜ್ಯದಲ್ಲಿ ಬಳ್ಳಾರಿಯಲ್ಲಿ ಮಾತ್ರ ಬೃಹತ್‌ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದ ಅವರು, ಇತ್ತೀಚೆಗೆ ನಡೆದ ಸಿದ್ದರಾಮಯ್ಯ ಜನ್ಮದಿನ ಹಾಗೂ ಕಾಂಗ್ರೆಸ್‌ ತಿರಂಗಾ ಯಾತ್ರೆಗಿಂತ ಅಧಿಕ ಜನ ರಾಹುಲ… ಗಾಂಧಿ ಭಾರತ್‌ ಜೋಡೋ ಯಾತ್ರೆಗೆ ಸೇರಬೇಕು ಎಂದು ತಿಳಿಸಿದರು.

ದೇಶದಲ್ಲಿ ಶಾಂತಿ ನೆಲಸಲು ಭಾರತ್‌ ಜೋಡೋ ಯಾತ್ರೆ: ಸಿದ್ದರಾಮಯ್ಯ

ಅವರ ಧಮ್‌ ಅಂತ್ಯಕಾಲ: 

ಬಿಜೆಪಿ ಕತ್ತರಿಯಿದ್ದಂತೆ. ಅದು ಹೋದಲ್ಲೆಲ್ಲ ದೇಶವನ್ನು ವಿಭಜಿಸುತ್ತಾ ಹೋಗುತ್ತದೆ. ಕಾಂಗ್ರೆಸ್‌ ಸೂಜಿ ಇದ್ದಂತೆ ಎಲ್ಲರನ್ನೂ ಸೇರಿಸಿಕೊಂಡು ಹೋಗುತ್ತದೆ ಎಂದ ಡಿ.ಕೆ.ಶಿವಕುಮಾರ್‌, ಬಿಜೆಪಿ ಕೇವಲ ಹಿಂದೂಗಳ ಪಕ್ಷ ಎಂದು ಹೇಳಲಾಗುತ್ತದೆ. ಆದರೆ ಕಾಂಗ್ರೆಸ್‌ ಸರ್ವಧರ್ಮಗಳ ಪಕ್ಷ. ಬಿಜೆಪಿ ನಮ್ಮ ಧಮ್‌ ಪ್ರಶ್ನಿಸುತ್ತಿದೆ. ಆದರೆ, ಈಗ ಅವರ ಧಮ್‌ಗೆ ಅಂತ್ಯಕಾಲ ಆರಂಭವಾಗಿದೆ. ನಮ್ಮ ಧಮ್‌ ಆರಂಭವಾಗಿದೆ. ಬಿಜೆಪಿಯವರಿಗೆ ಈಗ ಜನರ ನೆನಪಾಗಿದೆ. ಈಗ ಸ್ಪಂದನೆ ಮಾಡಲು ಹೊರಟಿದ್ದಾರೆ, ಬಿಜೆಪಿಯವರ ವೇಗ ನಾವು ಯಾಕೆ ತಡೆಯೋಣ? ಅವರ ಕಾರ್ಯಕ್ರಮದಲ್ಲಿ ಎಷ್ಟುಜನ ಸೇರಿದ್ರು? ಯಾರು ಯಾರಿಗೆ ಎಷ್ಟುಚಪ್ಪಾಳೆ ತಟ್ಟಿದ್ರು ಗೊತ್ತಿದೆ. ಅವರ ಕಾರ್ಯಕ್ರಮಕ್ಕೆ ನಮ್ಮ ತಕರಾರು ಇಲ್ಲ. ಅವರು ಎಷ್ಟುಬೇಕಾದರೂ ಖರ್ಚು ಮಾಡಲಿ. ಬಿಜೆಪಿಯವರ ಬಳಿ ಹಣವಿದೆ. ನಮ್ಮ ಬಳಿ ಜನಬಲವಿದೆ ಎಂದು ಹೇಳಿದರು.

ಸಿದ್ದರಾಮೋತ್ಸವಕ್ಕಿಂತ ದೊಡ್ಡ ಸಮಾವೇಶ

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜನ್ಮದಿನ ಹಾಗೂ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ತಿರಂಗಾ ಯಾತ್ರೆಗಿಂತ ಅಧಿಕ ಜನ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯ ಬಳ್ಳಾರಿ ಸಮಾವೇಶದಲ್ಲಿ ಸೇರಲಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.  
 

click me!