ಹು-ಧಾ ಪಾಲಿಕೆ ಚುನಾವಣೆ: 'ಆಪರೇಷನ್ ಹಸ್ತ' ಭೀತಿಯಿಂದ ರೆಸಾರ್ಟ್ ಸೇರಿದ ಬಿಜೆಪಿ ಸದಸ್ಯರು

By Kannadaprabha NewsFirst Published Jun 17, 2023, 8:31 AM IST
Highlights

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲೂ ಇದೀಗ ರೆಸಾರ್ಚ್‌ ರಾಜಕೀಯ ಶುರುವಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸæೕರಿರುವುದರಿಂದ ಎಲ್ಲಿ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಾರೋ ಎಂಬ ಭೀತಿಯಲ್ಲಿ ಬಿಜೆಪಿ ಸದಸ್ಯರೆಲ್ಲರೂ ರೆಸಾರ್ಟ್ ಗೆ ತೆರಳಿದ್ದಾರೆ.

ಹುಬ್ಬಳ್ಳಿ (ಜೂ.17) : ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲೂ ಇದೀಗ ರೆಸಾರ್ಚ್‌ ರಾಜಕೀಯ ಶುರುವಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸæೕರಿರುವುದರಿಂದ ಎಲ್ಲಿ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಾರೋ ಎಂಬ ಭೀತಿಯಲ್ಲಿ ಬಿಜೆಪಿ ಸದಸ್ಯರೆಲ್ಲರೂ ರೆಸಾರ್ಚ್‌ಗೆ ತೆರಳಿದ್ದಾರೆ. ದಾಂಡೇಲಿ, ಗೋವಾ ರೆಸಾರ್ಚ್‌ಗಳತ್ತ ಸದಸ್ಯರನ್ನು ಕರೆದುಕೊಂಡು ಹೋಗಿದ್ದು, ಚುನಾವಣೆ ದಿನವೇ ಇವರೆಲ್ಲರೂ ಮರಳಿ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಎರಡನೆಯ ದೊಡ್ಡ ನಗರ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ. 15 ವರ್ಷಕ್ಕಿಂತ ಹೆಚ್ಚು ಸಮಯದಿಂದ ಇಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಾ ಬಂದಿದೆ. ಮೇಯರ್‌- ಉಪಮೇಯರ್‌ ಇರಲಿ, ಪಾಲಿಕೆ ಸದಸ್ಯತ್ವದ ಚುನಾವಣೆಯಿರಲಿ ಯಾರನ್ನು ನಿಲ್ಲಿಸಬೇಕು, ಯಾರಿಗೆ ಮೇಯರ್‌ ಪಟ್ಟಕೊಡಬೇಕು ಎಂಬುದನ್ನು ನಿರ್ಧರಿಸುವುದರಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶೆಟ್ಟರ್‌ ಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಶೆಟ್ಟರ್‌ ಬಿಟ್ಟು ಮೇಯರ್‌- ಉಪಮೇಯರ್‌ ಚುನಾವಣೆ ನಡೆಸುವುದು ಬಿಜೆಪಿಗೆ ಇದು ಮೊದಲು. ಶೆಟ್ಟರ್‌ ಮೂಲಕ ಹೇಗಾದರೂ ಮಾಡಿ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಹಂಬಲ ಕಾಂಗ್ರೆಸ್ಸಿನದು.

 

ಜೂನ್ 20ಕ್ಕೆ ಚುನಾವಣೆ ನಿಗದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಯಾರಾಗ್ತಾರೆ ಮೇಯರ್?

ಪಕ್ಷಗಳ ಬಲಾಬಲ:

82 ಸದಸ್ಯರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 39 ಸದಸ್ಯಬಲ ಹೊಂದಿದ್ದರೆ, 33 ಸದಸ್ಯರನ್ನು ಕಾಂಗ್ರೆಸ್‌ ಹೊಂದಿದೆ. ಜೆಡಿಎಸ್‌ ಒಂದು, ಮೂವರು ಎಐಎಂಐಎಂ, ಆರು ಜನ ಪಕ್ಷೇತರರಿದ್ದಾರೆ. ನಾಲ್ವರು ಶಾಸಕರು, ಒಬ್ಬ ಸಂಸದರು, ಇಬ್ಬರು ವಿಧಾನಪರಿಷತ್‌ ಸದಸ್ಯರು ಮತದಾನಕ್ಕೆ ಅರ್ಹರಾಗಿದ್ದಾರೆ.

ಕಾಂಗ್ರೆಸ್ಸಿನ ಇಬ್ಬರು ಶಾಸಕರಿದ್ದರೂ ವಿನಯ ಕುಲಕರ್ಣಿ ಅವರಿಗೆ ಜಿಲ್ಲೆಗೆ ಪ್ರವೇಶ ನಿಷೇಧವಿರುವ ಕಾರಣ ಭಾಗವಹಿಸುವುದು ಕಷ್ಟವಾಗಬಹುದು. ಆದರೆ, ಮೇಯರ್‌- ಉಪಮೇಯರ್‌ಗಿರಿಗೆ 44-45 ಮತಗಳು ಬೇಕಾಗುತ್ತದೆ. ಪಕ್ಷೇತರರು, ಜೆಡಿಎಸ್‌, ಎಐಎಂಐಎಂ ಹಾಗೂ ಕೆಲವೊಂದಿಷ್ಟುಜನ ಬಿಜೆಪಿ ಸದಸ್ಯರನ್ನು ಸೆಳೆದರೆ ಕಾಂಗ್ರೆಸ್‌ ಅಧಿಕಾರದ ಗದ್ದುಗೆಯತ್ತ ನಡೆಯಬಹುದು.

ಬಿಜೆಪಿಯಲ್ಲಿನ ಶೆಟ್ಟರ್‌ ಬೆಂಬಲಿಗರನ್ನು ಸೆಳೆದು ಅಧಿಕಾರದ ಗದ್ದುಗೆ ಏರಬೇಕೆಂಬ ಹಂಬಲ ಕಾಂಗ್ರೆಸ್ಸಿನದ್ದು. ಇದಕ್ಕಾಗಿ ಸಾಕಷ್ಟುಕಸರತ್ತು ನಡೆಸುತ್ತಿದೆ. ಬಿಜೆಪಿ ಸದಸ್ಯರಿಗೆ ಭಾರೀ ಪ್ರಮಾಣದಲ್ಲಿ ಆಮಿಷ ಕೂಡ ಕಾಂಗ್ರೆಸ್‌ ಒಡ್ಡುತ್ತಿದೆಯಂತೆ. ಇದಕ್ಕಾಗಿ ಬಿಜೆಪಿ ಸದಸ್ಯರನ್ನು ಸೆಳೆಯಲು ಶೆಟ್ಟರ್‌ ಅವರೇ ಅಖಾಡಕ್ಕಿಳಿದಿದ್ದಾರೆ ಎನ್ನಲಾಗಿದೆ.

ಶೆಟ್ಟರ್‌ರತ್ತ ಸದಸ್ಯರು ಹೋಗದಂತೆ ತಡೆ ಹಿಡಿಯುವ ಕೆಲಸ ಬಿಜೆಪಿ ಮಾಡುತ್ತಿದೆ. ಇಲ್ಲೀಗ ಈ ಜವಾಬ್ದಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹೆಗಲೇರಿದೆ. ಬಿಜೆಪಿ ಸದಸ್ಯರನ್ನು ದಾಂಡೇಲಿ, ಗೋವಾ ರೆಸಾರ್ಚ್‌ಗಳಿಗೆ ಕಳುಹಿಸಲಾಗಿದೆ.

ಕೇಂದ್ರ ಸಚಿವ ಜೋಶಿ ಅವರ ಚಿಟಗುಪ್ಪಿ ಆಸ್ಪತ್ರೆಯಲ್ಲಿರುವ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿ ಅಲ್ಲಿಂದಲೇ ನೇರವಾಗಿ ರೆಸಾರ್ಚ್‌ಗೆ ತೆರಳಿರುವ ಸದಸ್ಯರು ಚುನಾವಣೆಯ ದಿನವೇ ಅಂದರೆ ಜೂ. 20ಕ್ಕೆ ಮರಳಿ ಬರಲಿದ್ದಾರೆ. ಮೇಯರ್‌ ಈರೇಶ ಅಂಚಟಗೇರಿ ಸೇರಿದಂತೆ ಕೆಲ ಸದಸ್ಯರು ಬೇರೆ ಬೇರೆ ಕಾರಣ ನೀಡಿ ಇವತ್ತು ತೆರಳಿಲ್ಲ. ಅವರು ಕೂಡಾ ನಾಳೆ ರೆಸಾರ್ಚ್‌ಗೆ ತೆರಳಲಿದ್ದಾರೆ.

ಬ್ರೇಜಿಲ್‌ ಪ್ರವಾಸದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜೂ. 19ಕ್ಕೆ ನೇರವಾಗಿ ರೆಸಾರ್ಚ್‌ಗೆ ತೆರಳಿ ಅಲ್ಲೇ ಮೇಯರ್‌- ಉಪಮೇಯರ್‌ ಯಾರಾಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಅಲ್ಲಿಂದ ಅವರೆಲ್ಲ ನೇರವಾಗಿ ಚುನಾವಣೆಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಗ್ಯಾರಂಟಿ ಜಾರಿಗೂ ಮುನ್ನವೇ ಬೆಂಗಳೂರು ಜನತೆಗೆ ಬಿಗ್‌ ಆಫರ್‌ ಕೊಟ್ಟ ಸರ್ಕಾರ

ಶೆಟ್ಟರ್‌ ಮ್ಯಾಜಿಕ್‌ ಯಶಸ್ವಿಯಾದರೆ ಮತ್ತಷ್ಟುಮುಖಭಂಗ ಎದುರಿಸಬೇಕಾಗುವುದೆಂಬ ಕಾರಣದಿಂದ ಬಿಜೆಪಿ ತನ್ನ ಸದಸ್ಯರನ್ನು ಸ್ಥಳಾಂತರಿಸಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಪಾಲಿಕೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಪಡುತ್ತಿದ್ದರೆ, ಅದರಿಂದ ಕಿತ್ತುಕೊಳ್ಳಲು ಕಾಂಗ್ರೆಸ್‌ ಕಸರತ್ತು ನಡೆಸಿದೆ. ಯಾರು ಯಶಸ್ವಿಯಾಗುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

click me!