ಹನಿಟ್ರ್ಯಾಪ್ ಪ್ರಕರಣ, ಅಗತ್ಯ ಬಿದ್ದರೆ ಸಿಎಂ ಭೇಟಿ: ಸಚಿವ ಕೆ.ಎನ್.ರಾಜಣ್ಣ

ಹನಿಟ್ರ್ಯಾಪ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ, ಅವಶ್ಯಕತೆ ಬಿದ್ದರೆ ಭೇಟಿಯಾಗುವುದಾಗಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

Honeytrap Case CM to meet if necessary Says Minister KN Rajanna gvd

ತುಮಕೂರು (ಮಾ.23): ಹನಿಟ್ರ್ಯಾಪ್ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲ್ಲ, ಅವಶ್ಯಕತೆ ಬಿದ್ದರೆ ಭೇಟಿಯಾಗುವುದಾಗಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜೇಂದ್ರ ಮುಖ್ಯಮಂತ್ರಿಯನ್ನು ಭೇಟಿ ಮಾಡಬಹುದು. ಗೃಹ ಸಚಿವರನ್ನು ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡುವುದಾಗಿ ತಿಳಿಸಿದರು. ಸದನದಲ್ಲಿ ನಾನೊಂದು ಹೇಳಿಕೆ ಮಾಡಿದ್ದೇನೆ. ಅದಕ್ಕೆ ಬದ್ಧ ಇದ್ದೇನೆ. ಏನೇನು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ ಅದಕ್ಕೆ ಗೃಹ ಮಂತ್ರಿಗಳನ್ನ ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡುವುದಾಗಿ ತಿಳಿಸಿದರು.

ಗುರುವಾರ ಕ್ಯಾಬಿನೇಟ್ ಇದೆ. ಆ ದಿನ ನಾವೆಲ್ಲಾ ಸಮಾನ ಮನಸ್ಕರು ಸೇರಿ ಅದರ ಬಗ್ಗೆ ಮಾತನಾಡಿ, ಅಂತಿಮ ನಿರ್ಣಯ ಮಾಡುವುದಾಗಿ ತಿಳಿಸಿದ ಅವರು ಸಿಎಂ ಬಂದು 3 ಗಂಟೆಗೆ ಉತ್ತರ ಕೊಡಬೇಕಿತ್ತಲ್ಲ. ಅದಕ್ಕೂ ಮೊದಲು ಭೇಟಿ ಮಾಡಿಲು ಹೋಗಿದ್ದೆ. ಅವರು ಏನೋ‌ ಓದುತ್ತಿದ್ದರು. ದೇವರು ನಿನಗೆ ಏನು ಬುದ್ದಿ ಕೊಡುತ್ತೋ ಆ ರೀತಿ ಮಾಡು ಅಂತ ಹೇಳಿದರು. ಅವರು ಮೂರು ತಿಂಗಳಿಂದ ಅಲ್ಲ, ಒಂದೂವರೆ ತಿಂಗಳಿಂದ ಪ್ರಯತ್ನ ನಡೆಯುತ್ತಿದೆ. ಏನೇನು ಕೃತ್ಯ ನಡೆದಿದೆ ಅಂತ ವಿವರವಾಗಿ ಹೇಳಿಕೆಯಲ್ಲಿ ಕೊಡುವುದಾಗಿ ತಿಳಿಸಿದರು.

Latest Videos

ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್

ಎಲ್ಲರ ಮುಂದೆ ಏನು ಎತ್ತ ಅಂತ ಹೇಳಲು ಬಯಸುವುದಿಲ್ಲ. ಎಲ್ಲೋ ಆಗಿದೆ, ಆಗಿರುವುದನ್ನೆಲ್ಲಾ ಹೇಳ್ತೀನಿ ಎಂದ ರಾಜಣ್ಣ ಸತೀಶ್ ಜಾರಕಿಹೊಳಿ ತೀವ್ರವಾಗಿ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಯಾವ ರೀತಿ ತೀವ್ರತೆ ಅಂತ ಅವರ ಬಾಯಿಂದಲ್ಲೇ‌ ಕೇಳಿ ಎಂದರು. ಒಂದೊಂದು ಉದ್ದೇಶ ಇಟ್ಟುಕೊಂಡು ಟಾರ್ಗೆಟ್‌ ಮಾಡುತ್ತಾರೆ. ನನ್ನ ಮೇಲಿನ ಉದ್ದೇಶ ಏನಂತ ಗೊತ್ತಿಲ್ಲ. ಆದರೆ ತನಿಖೆಯಲ್ಲಿ ಗೊತ್ತಾಗಬೇಕು ಎಂದರು.

ಗೃಹ ಸಚಿವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ತನಿಖೆ ಮಾಡಿದರೆ ಸೂಕ್ತ. ಇದರಲ್ಲಿ ಇವರು, ಅವರು ಸೇರಿದ್ದಾರೆ ಅಂತ ನಿರ್ದಿಷ್ಟವಾಗಿ ಹೇಳಲು ಬರುವುದಿಲ್ಲ. ಯಾರಿದ್ದಾರೆ ಅಂತ ಸತ್ಯ ಹೊರಗೆ ಬರಬೇಕು ಹೈಕಮಾಂಡ್ ಗೆ ಯಾಕೆ ದೂರು ಕೊಡಬೇಕು ಅಂದರೆ ಯಾರಾದರೂ ಹೈಕಮಾಂಡ್ ಗೆ ಸಿಡಿ ತೆಗೆದುಕೊಂಡು ಹೋಗಿ ಕೊಟ್ಟರೆ, ರಾಜಣ್ಣ ಮೊದಲೇ ಹೇಳಿದ್ದರು ಅಂತ ಗೊತ್ತಿರಬೇಕಲ್ಲ. ನಾನು ಯಾವ ರೀತಿ ಲೋಪ ಎಸಗಿಲ್ಲ. ನನ್ನ ಮೇಲೆ ಯಾವುದಾದರೂ ಲೋಪ ಇದೆ ಅಂದರೆ ನಂಬಬಾರದು ಎಂದರು.

ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್‌

ಸಾರ್ವಜನಿಕ ಜೀವನದಲ್ಲಿ ಏಕಾಏಕಿ ಬೆಳೆದು ಬಂದಿಲ್ಲ. ಹೋರಾಟ ಮಾಡಿಕೊಂಡು ಜನ ಮನ್ನಣೆ ಗಳಿಸಿಕೊಂಡು ಬೆಳೆದಿದ್ದು, ಬೆಳೆದ ಮೇಲೆ ಈ ರೀತಿ ತೇಜೋವಧೆ ಮಾಡೋದು ಯಾರಿಗೂ ಭೂಷಣ ಬರುವುದಲ್ಲ. ನನಗೆ ಮಾಟ ಮಂತ್ರ ನಿಂಬೆಹಣ್ಣು, ಹೂ ಹಾಕೋದು, ಮೊಳೆ ಹಾಕೋದು ಅದೆಲ್ಲಾ ಮಾಡುತ್ತಾರೆ. ರಾಜಕಾರಣದಲ್ಲಿ ಇರೊರಿಗೆ ತೇಜೋವಧೆ ಮಾಡುವಂತಹದ್ದು ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಯಾರು ಇದರಲ್ಲಿ ಭಾಗಿ ಆಗುತ್ತಾರೆ ಅನ್ನೋದನ್ನು ಪತ್ತೆ ಹಚ್ಚಬೇಕು ಅವರಿಗೆ ಶಿಕ್ಷೆ ‌ಕೊಡಿ ಅಂತ ಒತ್ತಾಯವಲ್ಲ, ಮುಂದೆ ಈ ರೀತಿ ಆಗಬಾರದು ಅನ್ನೋದು ನನ್ನ ಆಗ್ರಹ ಎಂದರು. ವಿಷ ಕನ್ಯೆಯರು ಎಲ್ಲಿಂದ ಹುಟ್ಟಿದರು. ಅವರನ್ನು ಏಕೆ ಬಳಿಸಿದರು, ಯಾವ ಕಾಲದಲ್ಲಿ ಯಾವುದಕ್ಕೆ ಬಳಸಿದರು ಎಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ ಎಂದರು.

vuukle one pixel image
click me!