ಹುಣಸೂರು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಎಲ್ಲಾ 12 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಶಾಸಕ ಜಿ.ಡಿ. ಹರೀಶ್ ಗೌಡ ಅವರ ರಾಜಕೀಯ ತಂತ್ರಗಾರಿಕೆ ಜೆಡಿಎಸ್ ಗೆಲುವಿಗೆ ಕಾರಣವಾಗಿದೆ.
ಮೈಸೂರು: ಹುಣಸೂರು ಹೈವೋಲ್ಟೇಜ್ ಚುನಾವಣೆಯಾಗಿ ಮಾರ್ಪಾಡಾಗಿದ್ದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳನ್ನೂ ಜೆಡಿಎಸ್ ಬಾಚಿಕೊಳ್ಳುವ ಮೂಲಕ ಪ್ರಾಬಲ್ಯ ಮೆರೆದಿದೆ. ಚುನಾವಣೆಯನ್ನು ಮಾಡು ಇಲ್ಲವೇ ಮಡಿ ಎಂಬಂತೆ ಪ್ರತಿಷ್ಠೆಯಾಗಿ ಸ್ವೀಕರಿಸಿ ಹೋರಾಡಿದ್ದ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲಾಗದೇ ತೀವ್ರ ಮುಖಭಂಗ ಅನುಭವಿಸಿದೆ. ಜೆಡಿಎಸ್ ಬೆಂಬಲಿತರ ಎಲ್ಲ ಅಭ್ಯರ್ಥಿಗಳ ಗೆಲುವು ಸಾಲಗಾರರ ಕ್ಷೇತ್ರವು 5 ಸಾಮಾನ್ಯ ಕ್ಷೇತ್ರವನ್ನು ಹೊಂದಿದ್ದು, ಈ ಪೈಕಿ ಶಾಸಕ ಜಿ.ಡಿ. ಹರೀಶ್ ಗೌಡ ಅತಿ ಹೆಚ್ಚು 334 ಮತಗಳೊಂದಿಗೆ ಜಯಭೇರಿ ಬಾರಿಸಿದ್ದಾರೆ.
ರಮೇಶ್ (273 ಮತಗಳು), ಎಸ್. ದಿವಾಕರ್ (256), ಮಹದೇವು (256) ಮತ್ತು ಕೆ.ಎಸ್. ಬೀರೇಶ್ 236 ಮತಗಳೊಂದಿಗೆ ವಿಜಯದ ನಗೆ ಬೀರಿದರು. ಪ. ಜಾತಿ ಕ್ಷೇತ್ರದಲ್ಲಿ ರುದ್ರಬೋವಿ 207 ಮತಗಳು, ಪ. ಪಂಗಡ ಕ್ಷೇತ್ರದಲ್ಲಿ ಪುಟ್ಟರಾಜು 197 ಮತಗಳನ್ನು ಗಳಿಸಿ ವಿಜಯಶಾಲಿಗಳಾದರೆ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಶಶಿಕಲಾ ಬಾಯಿ - 211, ಸುನಂದಾ- 198 ಮತಗಳೊಂದಿಗೆ ಜಯಶೀಲರಾದರು. ಬಿಸಿಎಂ (ಎ) ಕ್ಷೇತ್ರದಿಂದ ಎಂ.ಕೆ. ವಾಸೇಗೌಡ 287 ಮತಗಳನ್ನು ಗಳಿಸಿದರೆ, ಬಿಸಿಎಂ (ಬಿ) ಕ್ಷೇತ್ರದಿಂದ ಎಚ್.ಸಿ. ರವಿಕುಮಾರ್ - 231 ಮತಗಳೊಂದಿಗೆ ವಿಜಯ ಸಾಧಿಸಿದರು.
ಸಾಲಗಾರರಲ್ಲದ ಕ್ಷೇತ್ರ (ಸಾಮಾನ್ಯ) ನಗರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಫೆ. 18ರಂದು ಸಂಘದ ಚುನಾವಣೆ ನಡೆದಿತ್ತು. ಆದರೆ ಸಂಘದ ಸದಸ್ಯರ ಸದಸ್ಯತ್ವ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಕೆಲ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿದ ನ್ಯಾಯಾಲಯ ಮುಂದಿನ ಆದೇಶದವರೆಗೆ ಮತ ಎಣಿಕೆ ನಡೆಸದಂತೆ ಮಧ್ಯಂತರ ಆದೇಶ ನೀಡಿತ್ತು. ನಂತರ ಮಾ. 22ರಂದು ಮತ ಎಣಿಕೆಗೆ ಆದೇಶ ನೀಡಿದ್ದರನ್ವಯ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬಿಗಿ ಪೊಲೀಸ್ ಭದ್ತತೆಯೊಂದಿಗೆ ಮತ ಎಣಿಕೆ ಕಾರ್ಯ ಸಂಪನ್ನಗೊಂಡಿತು. ನಂತರ ಚುನಾವಣಾಧಿಕಾರಿ ರಾಜು ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿ ವಿಜೇತರ ಪಟ್ಟಿಯನ್ನು ಘೋಷಿಸಿದರು.
ಅಧಿಪತ್ಯ ಸ್ಥಾಪಿಸಿದ ಹರೀಶ್ ಗೌಡ
ಜಿ.ಡಿ. ಹರೀಶ್ ಗೌಡ ಶಾಸಕರಾಗಿ ಆಯ್ಕೆಯಾಗಿ ಎರಡು ವರ್ಷಗಳ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು. ತಾಲೂಕು ಕಾಂಗ್ರೆಸ್ ಸಹಕಾರ ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯವನ್ನು ಮೆರೆಯಬೇಕೆಂಬ ಮಹದಾಸೆಯಿಂದ ತೀವ್ರತರ ಪೈಪೋಟಿ ನೀಡಿತ್ತು. ಜಾತಿ, ಮತ, ಪಂಥಗಳ ಲೆಕ್ಕಾಚಾರವೂ ನಡೆದಿತ್ತು. ಆದರೆ ಅಂತಿಮವಾಗಿ ಜಿ.ಡಿ. ಹರೀಶ್ ಗೌಡರ ಚಾಣಾಕ್ಷ ರಾಜಕೀಯ ನಡೆಯಿಂದ ತಮ್ಮ ಅಧಿಪತ್ಯವನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸ್ಥಾಪಿಸಿದರು. 12ಕ್ಕೆ 12 ಕ್ಷೇತ್ರಗಳನ್ನು ಬಡಿದು ಬಾಯಿಗೆ ಹಾಕಿಕೊಂಡಂತೆ ಗೆಲುವು ತಂದುಕೊಟ್ಟು ಕಾರ್ಯಕರ್ತರ ವಿಶ್ವಾಸ ನೂರ್ಮಡಿಗೊಳಿಸಿದ್ದಾರೆಂದು ಪಕ್ಷದ ಮುಖಂಡರು ಸಂತಸ ವ್ಯಕ್ತಪಡಿಸುತ್ತಾರೆ. 4 ರಿಂದ 5 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಹೀನಾಯವಾಗಿ ಸೋತು ಸುಣ್ಣವಾಯಿತು.
ಸತತ 4ನೇ ಬಾರಿಗೆ ಆಯ್ಕೆಯಾದ ರವಿಕುಮಾರ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಚ್.ಸಿ. ರವಿಕುಮಾರ್ ಬಿಸಿಎಂ (ಬಿ) ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. 2010 ರಿಂದ ಆರಂಭಗೊಂಡು ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಕಳೆದ ಸಾಲಿನ ಆಡಳಿತ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಅವರು ಪಿಎಲ್.ಡಿ ಬ್ಯಾಂಕ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಕೋಟೆ ನುಚ್ಚುನೂರು ಕಸಬಾ ವ್ಯಾಪ್ತಿಯ ಗ್ರಾಮಗಳೆಲ್ಲವೂ ಕಾಂಗ್ರೆಸ್ ನ್ನು ಬೆಂಬಲಿಸುತ್ತಿರುವ ಎರಡು ಪ್ರಮುಖ ಸಮುದಾಯಗಳೇ ಬಹುಸಂಖ್ಯಾತರಾಗಿರುವ ಗ್ರಾಮಗಳಾಗಿದ್ದು, ಆ ವಿಶ್ವಾಸದಿಂದಲೇ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಹೆಚ್ಚು ಆಸಕ್ತಿಯಿಂದ ಪಾಲ್ಗೊಂಡಿತ್ತು, ಆದರೆ ಅವರ ಕನಸು ಒಡೆದಿದೆ.
ಹರೀಶ್ ಗೌಡ ರಾಜಕೀಯ ತಂತ್ರಗಾರಿಕೆ ಕಾಂಗ್ರೆಸ್ ನ ಭದ್ರಕೋಟೆಯನ್ನು ನುಚ್ಚುನೂರು ಮಾಡುವಲ್ಲಿ ಯಶಸ್ವಿಯಾಗಿದೆ. ವಿಜಯೋತ್ಸವಕ್ಕೆ ಜನಸಾಗರ ವೀರೋಚಿತ ಗೆಲುವು ಸಾಧಿಸಿರುವ ಕುರಿತು ಮಾಹಿತಿ ಪಡೆದ ಜೆಡಿಎಸ್ ಕಾರ್ಯಕರ್ತರು ಮತ ಎಣಿಕೆ ನಡೆದ ಅಂಬೇಡ್ಕರ್ ಭವನದ ಸುತ್ತಮುತ್ತ ಜಮಾವಣೆಗೊಂಡು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಸ್ಪೀಕರ್ 50 ಬಿಜೆಪಿ ಶಾಸಕರನ್ನು ಸಸ್ಪೆಂಡ್ ಮಾಡ್ತಾರೆ ಅನ್ಕೊಂಡಿದ್ದೆ, 18 ಮಾಡಿದ್ದಾರೆ: ಶಾಸಕ ಪ್ರದೀಪ್ ಈಶ್ವರ್!
ಶಾಸಕ ಜಿ.ಡಿ. ಹರೀಶ್ ಗೌಡ ಮತ ಎಣಿಕೆ ಕೇಂದ್ರದಿಂದ ಹೊರಬಂದ ಕೂಡಲೇ ಅವರನ್ನು ಎತ್ತಿಕೊಂಡು ಮೆರವಣಿಗೆ ಮೂಲಕ ಪಕ್ಷದ ಕಚೇರಿಗೆ ಕರೆತಂದರು. ದಾರಿಯುದ್ದಕ್ಕೂ ಸಾವಿರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಕುಣಿದು ಸಂಭ್ರಮಿಸಿದರು.ಇದೇ ವೇಳೆ ಮಿತ್ರ ಪಕ್ಷ ಬಿಜೆಪಿ ನಗರಮಂಡಲ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೂ ಕೂಡ ಮೆರವಣಿಗೆಯಲ್ಲಿ ಪಕ್ಷದ ಬಾವುಟ ಹಿಡಿದು ಸಂಭ್ರಮಿಸಿದರು.
ಜಿಪಂ, ತಾಪಂ ಚುನಾವಣೆಗೆ ದಿಕ್ಸೂಚಿಯೇ?
ಜೆಡಿಎಸ್ ಇಂದಿನ ಗೆಲುವು ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗೆ ದಿಕ್ಸೂಚಿಯಾಗಿದೆ ಎನ್ನುವ ಮಾತುಗಳನ್ನು ಜೆಡಿಎಸ್ ಕಾರ್ಯಕರ್ತರು ಹೇಳಿದರು. ಪಕ್ಷದ ಸಂಘಟನಾತ್ಮಕವಾಗಿ ಸಶಕ್ತವಾಗಿದ್ದು, ಶಾಸಕ ಹರೀಶ್ ಗೌಡ ಅವರ ನೇತೃತ್ವದಲ್ಲಿ ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲಲಿದ್ದೇವೆ ಎಂದು ಮೆರವಣಿಗೆ ವೇಳೆ ಕಾರ್ಯಕರ್ತರು ಬೀಗುತ್ತಿದ್ದುದು ಕಂಡು ಬಂದಿತು.
ಇದನ್ನೂ ಓದಿ: ನಂದಿನಿ ಇಡ್ಲಿ-ದೋಸೆ ಹಿಟ್ಟು ಏ.1ರಿಂದ ಎಲ್ಲ ಚಿಲ್ಲರೆ ಅಂಗಡಿ, ಇ-ಕಾಮರ್ಸ್ ಡೆಲಿವರಿ ಆಪ್‌ಗಳಲ್ಲೂ ಲಭ್ಯ!