ಮನೆ ಯಜಮಾನಿಗೆ ಗೃಹಲಕ್ಷ್ಮಿ ಸವಲತ್ತು ಸಿಗಬೇಕು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

Published : Jun 18, 2023, 01:00 AM IST
ಮನೆ ಯಜಮಾನಿಗೆ ಗೃಹಲಕ್ಷ್ಮಿ ಸವಲತ್ತು ಸಿಗಬೇಕು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಸಾರಾಂಶ

ರಾಜ್ಯದಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಲಾಭ ಸಿಗಲೆಂದು ಶ್ರಮಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು. 

ಕೊಪ್ಪ (ಜೂ.18): ರಾಜ್ಯದಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಲಾಭ ಸಿಗಲೆಂದು ಶ್ರಮಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದರು. ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಶನಿವಾರ ಅವಧೂತ ಪುತ್ತೂರಜ್ಜನವರ ಜನ್ಮದಿನ, ಮಹಿಳಾ ದಿನಾಚರಣೆ ಪ್ರಯುಕ್ತ ತಿರುಮಲ ಟ್ರಸ್ಟ್‌ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿ, ನಮ್ಮ ಕಾರ್ಯಕ್ಕೆ ತಕ್ಕ ಪ್ರತಿಫಲ ಸಿಗಲಿ ಎಂದು ಕೆಲಸ ಮಾಡುತ್ತಿದ್ದೇವೆ. 30 ಸಾವಿರ ಕೋಟಿ ರು. ಅನುದಾನ ಪ್ರತಿವರ್ಷ ನಮ್ಮ ಮಹಿಳೆಯರ ಜೀವನ ಮತ್ತು ಕುಟುಂಬ ಸಶಕ್ತವಾಗಲಿ ಎಂದು ಕಾರ್ಯಕ್ರಮ ತರುತ್ತಿದ್ದೇವೆ. ಅದು ಯಶಸ್ವಿಯಾಗಲಿ ಎಂದು ಗುರುಗಳ ಕೃಪೆ ಇರಲಿ ಎಂದು ಬಯಸುತ್ತಿದ್ದೇನೆ ಎಂದರು.

ಗೌರಿಗದ್ದೆ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಸಂತೋಷದಿಂದ, ಭಕ್ತಿ ಭಾವನೆಯಿಂದ ಗುರುಗಳ ಮಗಳಾಗಿ ಆಶ್ರಮಕ್ಕೆ ಬಂದಿದ್ದೇನೆ. ನಮ್ಮ ಕ್ಷೇತ್ರಕ್ಕೆ ಬಂದಾಗ ವಿನಯ್‌ ಗುರೂಜಿ ಹೇಳಿದ ಒಂದೊಂದು ಮಾತು ನನ್ನ ಕುಟುಂಬದ ಸದಸ್ಯರ ಜೀವನದಲ್ಲಿ, ನನ್ನ ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿದೆ ಎಂದು ಸ್ಮರಿಸಿದರು. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಸುಧಾಕರ್‌ ಮಾತನಾಡಿ, ವಿನಯ್‌ ಗುರೂಜಿ ಅವರು ಜನ ಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ ಕೊಟ್ಟಿರುವ 5 ಯೋಜನೆಗಳು ಜಾರಿಗೆ ತರುತ್ತಿದೆ. 60- 70 ಸಾವಿರ ಕೋಟಿ ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ ಎಂದರು.

ಬಿಜೆಪಿ ಮುಖಂಡರಿಂದಲೇ ಪಕ್ಷಕ್ಕೆ ಸೋಲು: ಸಂಸದ ಮುನಿಸ್ವಾಮಿ ಬೇಸರ

ವಿಧಾನ ಪರಿಷತ್‌ ಸದಸ್ಯ ಶರವಣ ಮಾತನಾಡಿ, ಬದಲಾವಣೆ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಬಡವನಿಗೆ ಧೈರ್ಯವಿಲ್ಲ, ಮಧ್ಯಮ ವರ್ಗದವನಿಗೆ ಸಮಯವಿಲ್ಲ, ಶ್ರೀಮಂತನಿಗೆ ಅದರ ಅವಶ್ಯಕತೆ ಇಲ್ಲ. ಆದರೆ, ಅದನ್ನು ವಿನಯ್‌ ಗುರೂಜಿ ಸಾಕಾರಗೊಳಿಸುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಗುರೂಜಿ ಮಾಡುತ್ತಿದ್ದಾರೆ ಎಂದು ಹೇಳಿದರು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ವಿನಯ್‌ ಗುರೂಜಿಯವರು ನನಗೆ ರಾಜಕೀಯದಲ್ಲಿ ಸದೃಢವಾಗುವಂತೆ ಮಾಡಿದ ಆಶೀರ್ವಾದದಿಂದ ಕ್ಷೇತ್ರದ ಮತದಾರರು, ಕಾರ್ಯಕರ್ತರು ಒಗ್ಗೂಡಿ ನನ್ನನ್ನು ಗೆಲ್ಲಿಸಿದರು. 

ಕೋವಿಡ್‌ನಿಂದ ನನ್ನ ತಾಯಿ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಗುರೂಜಿಯವರು ಮಾಡಿದ ಸಂಕಲ್ಪ ಹೋಮದಿಂದ ಬದುಕುಳಿಯುವಂತಾಯಿತು ಎಂದು ಭಾವುಕರಾದರು. ಚಿಕ್ಕಮಗಳೂರು ಶಾಸಕ ಎಚ್‌.ಡಿ. ತಮ್ಮಯ್ಯ ಮಾತನಾಡಿ, ನೀವು ಶಾಸಕರಾಗುತ್ತೀರಿ ಎಂದು ಗುರೂಜಿ ದೂರವಾಣಿ ಮೂಲಕ ಹೇಳಿದ್ದರು. ನಮ್ಮ ಬಗ್ಗೆ ಇನ್ನೊಬ್ಬರು ಸಂಕಲ್ಪ ಮಾಡುವುದು ಪೂರ್ವ ಜನ್ಮದ ಪುಣ್ಯ. ಡಿ.ಕೆ.ಶಿವಕುಮಾರ್‌ ಅವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ, ಅವರಿಗೆ ಮುಖ್ಯಮಂತ್ರಿ ಆಗುತ್ತೀರಿ ಎಂದು ಆಶೀರ್ವಾದ ಮಾಡಿ ಎಂದು ಗುರೂಜಿಯನ್ನು ಕೇಳಿಕೊಂಡರು.

ಮರಳು ಮಾಫಿಯಾಗೆ ಪೇದೆ ಬಲಿ: ಕರ್ತವ್ಯ ನಿರ್ಲಕ್ಷ ಆರೋಪದಡಿ ಮೂವರು ಪೊಲೀಸರ ಅಮಾನತ್ತು

ವಿನಯ್‌ ಗುರೂಜಿ ಮಾತನಾಡಿ, ಜೀವನದಲ್ಲಿ ಮನುಷ್ಯತ್ವ ಅಳವಡಿಸಿಕೊಳ್ಳಬೇಕು. ಹಸುಗಳನ್ನು ಉಳಿಸುವ ಕೆಲಸ ಸರ್ಕಾರದಿಂದ ಆಗಬೇಕು. ಡಿ.ಕೆ.ಶಿವಕುಮಾರ್‌ ಅವರದ್ದು ಒಳಗೊಂದು ಹೊರಗೊಂದು ಇಲ್ಲದ ವ್ಯಕ್ತಿತ್ವ. ಕ್ಲೀನ್‌ ಹ್ಯಾಂಡ್‌ ಮನುಷ್ಯ ಸಿದ್ದರಾಮಯ್ಯ. ಅಹಂಕಾರ ಇಲ್ಲದ ಮನುಷ್ಯ ಯಡಿಯೂರಪ್ಪ, ಸಣ್ಣ ಮಕ್ಕಳನ್ನೂ ಗೌರವದಿಂದ ಮಾತನಾಡಿಸುವ ವ್ಯಕ್ತಿ ದೇವೇಗೌಡರು. ನನ್ನಲ್ಲಿ ಪಕ್ಷಭೇದವಿಲ್ಲ ಎಲ್ಲರನ್ನೂ ಸಮಾನವಾಗಿ ನೋಡುತ್ತೇನೆ ಎಂದರು. ಟ್ರಸ್ಟ್‌ ನ ಮಾಲತೇಶ್‌ ಮಾತನಾಡಿದರು. ತಹಸೀಲ್ದಾರ್‌ ವಿಮಲ ಸುಪ್ರಿಯಾ, ತಿರುಮಲ ಟ್ರಸ್ಟ್‌ ಅಧ್ಯಕ್ಷ ಕೋಣಂದೂರು ಪ್ರಕಾಶ್‌, ಮಾಸ್ಟರ್‌ ಆನಂದ್‌ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!