
ಬೆಂಗಳೂರು (ಜ.1) : ರಾಜ್ಯದ ಬೊಕ್ಕಸಕ್ಕೆ ಯಾವ ಮೂಲಗಳಿಂದ ಹಣಕಾಸು ಸಂಗ್ರಹಿಸಬೇಕು ಹಾಗೂ ಸಮರ್ಪಕವಾಗಿ ಹಣಕಾಸು ನಿರ್ವಹಣೆ ಹೇಗೆ ಮಾಡಬೇಕು ಎಂಬ ಬಗ್ಗೆ ಸಲಹೆ ನೀಡುವ ಉದ್ದೇಶದಿಂದ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಹಣಕಾಸು ಸಲಹೆಗಾರರನ್ನಾಗಿ ಮುಖ್ಯಮಂತ್ರಿಗಳು ನೇಮಿಸಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಎಲ್ಲರ ಬಗ್ಗೆಯೂ ಮಾತನಾಡುತ್ತಾರೆ. ಏನೋನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಮಾತಾಡಿಕೊಂಡೇ ಇರಲಿ. ಅವರನ್ನು ಹಾಗೇ ಬಿಟ್ಟುಬಿಡುವುದು ಉತ್ತಮ. ಅವರ ಕುರಿತು ಮಾತನಾಡದಿರುವುದು ಒಳ್ಳೆಯದು ಎಂದು ನುಡಿದರು. ರಾಯರೆಡ್ಡಿ ಅವರನ್ನು ಹಣಕಾಸು ಸಲಹೆಗಾರರನಾಗಿ ನೇಮಕ ಮಾಡಿರುವುದು ಸಿಎಂ ತೀರ್ಮಾನ. ಅವರು ಹಣಕಾಸು ವಿಚಾರದಲ್ಲಿ ಹೆಚ್ಚು ತಿಳಿವಳಿಕೆ ಹೊಂದಿದ್ದಾರೆ ಎಂದರು.
ಸರ್ಕಾರದ ಬೊಕ್ಕಸಕ್ಕೆ ಯಾವ ಮೂಲದಿಂದ ಹೆಚ್ಚು ಹಣಕಾಸು ಸಂಗ್ರಹಣೆ ಮಾಡಬೇಕು? ಹೇಗೆ ಸಮರ್ಪಕ ಹಣಕಾಸು ನಿರ್ವಹಣೆ ಸಾಧ್ಯ ಎಂಬ ಬಗ್ಗೆ ಅಗತ್ಯ ಸಲಹೆ ಪಡೆಯಲು ರಾಯರೆಡ್ಡಿ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಸಿಎಂ ಆರ್ಥಿಕ ಸಲಹೆಗಾರರಾಗಿ ಬಸವರಾಜ ರಾಯರೆಡ್ಡಿ ನೇಮಕ; ವಿಶ್ವದ ದೊಡ್ಡ ಆರ್ಥಿಕ ತಜ್ಞ ಎಂದ ಎಚ್‌ಡಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.