ಬಿಜೆಪಿಯಿಂದ ಶ್ರಮಿಕರು, ರೈತರಿಗೆ ಅನ್ಯಾಯ: ಸಚಿವ ಡಾ.ಜಿ.ಪರಮೇಶ್ವರ್

By Kannadaprabha News  |  First Published Apr 10, 2024, 9:10 PM IST

ಭಾರತೀಯ ಜನತಾ ಪಾರ್ಟಿ ಸಾಮಾಜಿಕ, ಶೈಕ್ಷಣಿಕ, ಮಹಿಳಾ, ಯುವ, ಶ್ರಮಿಕರಿಗೆ, ರೈತರು ಮತ್ತು ಪಾಲುದಾರಿಕೆ ನ್ಯಾಯ ಒದಗಿಸುವಲ್ಲಿ ಅನ್ಯಾಯ ಮಾಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟೀಕಿಸಿದರು.


ತುಮಕೂರು (ಏ.10): ಭಾರತೀಯ ಜನತಾ ಪಾರ್ಟಿ ಸಾಮಾಜಿಕ, ಶೈಕ್ಷಣಿಕ, ಮಹಿಳಾ, ಯುವ, ಶ್ರಮಿಕರಿಗೆ, ರೈತರು ಮತ್ತು ಪಾಲುದಾರಿಕೆ ನ್ಯಾಯ ಒದಗಿಸುವಲ್ಲಿ ಅನ್ಯಾಯ ಮಾಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟೀಕಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಯ ಒದಗಿಸುವುದಾಗಿ ನ್ಯಾಯಪತ್ರ ಘೋಷಣೆ ಮಾಡಲಾಗಿದೆ. ಧಾರ್ಮಿಕ ನ್ಯಾಯ, ಲಿಂಗ ನ್ಯಾಯ ಒದಗಿಸುತ್ತೇವೆ. ಸಾಮಾಜಿಕ ಮತ್ತು ಆರ್ಥಿಕ ಜಾತಿ ಗಣತಿ ಸಮೀಕ್ಷೆ ನಡೆಸಲಾಗುವುದು. ಮೀಸಲಾತಿ ಶೇ.50ರಷ್ಟು ತಡೆ ಇದೆ. ಎಲ್ಲರಿಗೂ ಸಂವಿಧಾನತ್ಮಕವಾಗಿ ಮೀಸಲಾತಿ ನೀಡಲು ತಿದ್ದುಪಡಿ ತರುತ್ತೇವೆ ಎಂದರು.

ಕೇಂದ್ರ ಸರ್ಕಾರದಿಂದ ಯುವಕರಿಗೆ ಅನ್ಯಾಯವಾಗಿದೆ. 2014ರಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ೨ ಕೋಟಿ ಉದ್ಯೋಗ ಕೊಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ನಮ್ಮ ಒಕ್ಕೂಟ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಅವರು ಹೇಳಿದರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ನ್ಯೂ ಎಜುಕೇಶನ್ ಪಾಲಿಸಿಯನ್ನು ಒಪ್ಪಲಾಗಿಲ್ಲ. ಎನ್‌ಇಪಿ ಬದಲಿಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ. ಡಿಪ್ಲೋಮಾ ವ್ಯಾಸಂಗ ಮಾಡಿದ ಲಕ್ಷಾಂತರ ಯುವಕರು ಉದ್ಯೋಗವಿಲ್ಲದೆ ಖಾಲಿ ಇದ್ದಾರೆ. 

Latest Videos

undefined

ರಾಜ್ಯಕ್ಕೆ ಮೋದಿ ಸರ್ಕಾರ ನೀಡಿದಷ್ಟು ಅನುದಾನವನ್ನು ಯಾವ ಸರ್ಕಾರವೂ ನೀಡಿಲ್ಲ: ಸಿ.ಟಿ.ರವಿ

ಇತರೆ ಪದವೀಧರರಿಗೆ ಒಂದು ವರ್ಷದ ಅಪ್ರೆಂಟ್‌ಶಿಪ್ ಮತ್ತು ಒಂದು ಲಕ್ಷ ರು. ನೀಡುತ್ತೇವೆ. ಯುವಕರಿಗೆ ಆದ್ಯತೆಯ ಮೇರೆಗೆ ಉದ್ಯೋಗ ನೀಡಲಾಗುವುದು. ಆರಂಭಿಕ ನಿಧಿ 5 ಸಾವಿರ ಕೋಟಿ ರು. ಮೀಸಲಿಡಲಾಗುವುದು ಎಂದರು. ಮಹಿಳಾ ಸಬಲೀಕರಣಕ್ಕಾಗಿ ಮೊದಲು ಯೋಜನೆಗಳನ್ನು ತಂದಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನದಲ್ಲಿ 73,74ನೇ ಕಲಂಗಳಿಗೆ ತಿದ್ದುಪಡಿ ತಂದು ಸ್ಥಳೀಯ ಅಂಸ್ಥೆಗಳಲ್ಲಿ ಅಧಿಕಾರ ಕಲ್ಪಿಸಲಾಯಿತು. ರಾಜ್ಯದಲ್ಲಿ ಪ್ರತಿ ಮನೆಯ ಯಜಮಾನಿ ಮಹಿಳೆಗೆ ಮಹಾಲಕ್ಷ್ಮೀ ಯೋಜನೆಗೆ 4 ಸಾವಿರ ರು. ನೀಡಲಾಗುವುದು. ಬಡ ಕುಟುಂಬದ ಯಜಮಾನಿ ಮಹಿಳೆ ವರ್ಷಕ್ಕೆ 1 ಲಕ್ಷ ರು. ನೀಡಲಾಗುವುದು ಎಂದು ಅವರು ತಿಳಿಸಿದರು.

ಬೆಳೆ ನಷ್ಟವಾದ ಕೂಡಲೇ ವಿಮಾ ಹಣವನ್ನು ರೈತರಿಗೆ ಕೊಡಬೇಕು. ರೈತರಿಗೆ ವಿಮೆ ಹಣ ಕೊಡದೇ ಅನ್ಯಾಯ ಮಾಡಲಾಗುತ್ತಿದೆ. ಬೆಳೆ ನಷ್ಟದ ವರದಿ ಬಂದ 30 ದಿನದೊಳಗೆ ಖಾತೆಗೆ ನೇರವಾಗಿ ವಿಮೆ ಹಣ ಜಮಾ ಮಾಡಲಾಗುವುದು. ಇಡೀ ದೇಶದಲ್ಲಿ ಸಾವಿರಾರು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬರಗಾಲದಲ್ಲಿ ಈವರೆಗೆ ಫಸಲ್ ಬಿಮಾ ಯೋಜನೆಯ ವಿಮೆ ಹಣ ಜಮಾ ಆಗಿಲ್ಲ ಎಂದು ಅವರು ದೂರಿದರು. ದೇಶದಲ್ಲಿ 5 ಟ್ರಿಲಿಯನ್ ಡಾಲರ್ ಎಕಾನಮಿ ಮಾಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದರ ಪಾಲುದಾರಿಕೆಯ ಬೆನಿಫಿಟ್ ಎಲ್ಲ ಭಾರತೀಯರಿಗೂ ಸಿಗಬೇಕು. ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಹಂಚಿಕೆಯಾಗಬೇಕು ಎಂಬ ಆಧಾರದ ಮೇಲೆ ಥೀಮ್ ಬಿಡುಗಡೆ ಮಾಡಲಾಗಿದೆ. 

ರಾಜ್ಯ ಮತ್ತು ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆ ಬಹಳ ಗಟ್ಟಿಯಾಗಿರಬೇಕು ಎಂದು ಅಂಬೇಡ್ಕರ್ ಅವರು ಹೇಳಿದರು. ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ಶೇ.೪.೫ ರಷ್ಟು ನಮಗೆ ಸಿಗಬೇಕು. ಇದರಲ್ಲಿ ಕಡಿಮೆಯಾಗಬಾರದು. ಬರ, ನೆರೆ ಹಾವಳಿ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ಪರಿಹಾರ ಕೊಡಬೇಕು ಎಂದರು. ಸಂವಿಧಾನ ಬದಲಿಸುತ್ತೇವೆ ಎನ್ನುವುದು ಒಳ್ಳೆಯ ಬೆಳವಣಿಗೆಯಲ್ಲ. ಸಿಎಎ ಜಾರಿಯಿಂದ ಜನರಿಗೆ ಆತಂಕವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸು ವುದು ಮತ್ತು ಸಮುದಾಯಗಳಲ್ಲಿ ಇರುವ ಭಯವನ್ನು ಹೋಗಲಾಡಿಸಲಾಗುವುದು. ದೇಶದ ಪ್ರತಿಯೊಬ್ಬ ಪ್ರಜೆಗೂ ಸಾಮಾಜಿಕ ನ್ಯಾಯ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯನ್ನು ನಿರ್ಲಕ್ಷ್ಯಿಸಬೇಡಿ: ಸಚಿವ ಚಲುವರಾಯಸ್ವಾಮಿ

ನದಿ ಜೋಡಣೆ ವಿಚಾರ ಕೃಷಿ ವಲಯದಲ್ಲಿ ನಮೂದಿಸಲಾಗಿದೆ. ನ್ಯಾಷನಲ್ ಪ್ರಾಜೆಕ್ಟ್ ಆಗಿ ಘೋಷಣೆ ಮಾಡಲಾಗುವುದು. ಗ್ಯಾರಂಟಿ ಘೋಷಣೆಗಳನ್ನು ಜನರಿಗೆ ಹಂಚಲಾಗುವುದು. ನೀಟ್‌ನ್ನು ಅನೇಕ ರಾಜ್ಯಗಳು ಒಪ್ಪಿಲ್ಲ. ಪುನರ್ ಪರಿಶೀಲನೆ ಮಾಡುತ್ತೇವೆ. ವಿದ್ಯಾರ್ಥಿ ಸ್ನೇಹಿ ನೀತಿಯನ್ನು ಜಾರಿಗೆ ತರುತ್ತೇವೆ. ನಮ್ಮ ಸಂಸ್ಕöÈತಿಯಾಗಿರುವಂತೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಅವರು ತಿಳಿಸಿದರು.

click me!