ಹೆಚ್.ಕೆ. ಪಾಟೀಲರಿಗೆ ಮನೆ ಇಲ್ವಾ- ಕೃಷಿ ವಿಜ್ಞಾನ ಕೇಂದ್ರದಲ್ಯಾಕೆ ಮಲ್ಕೊತಾರೆ : ಅನಿಲ್ ಮೆಣಸಿನಕಾಯಿ ಪ್ರಶ್ನೆ

By Sathish Kumar KHFirst Published Jan 22, 2023, 11:03 PM IST
Highlights

ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರವನ್ನ ಶಾಸಕ ಎಚ್.ಕೆ. ಪಾಟೀಲರು ಕಾಂಗ್ರೆಸ್ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಅವರಿಗೆ ಮನೆ ಇಲ್ಲವೇ.? ಅವರೇಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಲಗುತ್ತಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.

ಗದಗ (ಜ.22): ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರವನ್ನ ಶಾಸಕ ಎಚ್.ಕೆ. ಪಾಟೀಲರು ಕಾಂಗ್ರೆಸ್ ಅಡ್ಡೆಯನ್ನಾಗಿಸಿಕೊಂಡಿದ್ದಾರೆ. ಅವರಿಗೆ ಮನೆ ಇಲ್ಲವೇ.? ಅವರೇಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಲಗುತ್ತಾರೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಕಿಡಿಕಾರಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷಿ ವಿಜ್ಞಾನ ಕೇಂದ್ರದ ಬಗ್ಗೆ ಆಡಿಟ್ ಕೇಳಿದ್ದೇನೆ. ರೈತರಿಗೆ ಅನುಕೂಲವಾಗಲಿ ಅಂತಾ ಕೃಷಿ ವಿಜ್ಞಾನ ಕೇಂದ್ರದ ನಿರ್ಮಿಸಲಾಗಿದೆ. ರೈತರ ಟ್ರೇನಿಂಗ್ ಉದ್ದೇಶಕ್ಕೆ ಕೇಂದ್ರ ಸರ್ಕಾರದ ಅನುದಾನ ನೀಡುತ್ತದೆ. ಆದರೆ, ಈ ಕೃಷಿ ವಿಜ್ಞಾನ ಕೇಂದ್ರವು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಅಡ್ಡೆಯಾಗಿದೆ. ನಗರದ ಕಾಟನ್ ಸೋಸೈಟಿ 'ಎ' ಅಡ್ಡ, ಕೆವಿಕೆ 'ಬಿ' ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ. ಇವರು ಹೆದರಿಕೆ ಹಾಕುವುದಕ್ಕಾಗಿಯೇ ಕೆವಿಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪ್ಲಾಸ್ಟಿಕ್‌ ಅಕ್ಕಿ ಎಂದು ಸಾರವರ್ಧಿತ ಅಕ್ಕಿ ಪಡೆಯಲು ಗ್ರಾಮಸ್ಥರು ಹಿಂದೇಟು

ಗ್ರಾ.ಪಂ, ಸದಸ್ಯರನ್ನು ಕೂಡಿ ಹಾಕಿ ಹೆದರಿಸುತ್ತಾರೆ: ಕಾಂಗ್ರೆಸ್‌ನ ನಾಯಕರು ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಹಾಗೂ ಅವರ ಸಮಾಜ ಬಾಹಿರ ಕಾರ್ಯಗಳನ್ನು ವಿರೋಧಿಸಿದಲ್ಲಿ ಕೆವಿಕೆಗೆ ಕರ್ಕೊಂಡು ಹೋಗಿ ಕೂರಿಸುತ್ತಾರೆ. ರೈತರಿಗೆ ಟ್ರೇನಿಂಗ್ ಕೋಡೋದಕ್ಕೆ ಬರೋರಿಗೆ ತಂಗಲು ಅನುಕೂಲ ಆಗುವಂತೆ ರೂಮ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ಎಚ್ ಕೆ ಪಾಟೀಲರು ಅಲ್ಲಿ ಯಾಕೆ ಇರುತ್ತಾರೆ ಎಂಬುದು ತಿಳಿಯುತ್ತಿಲ್ಲ. ಇವರಿಗೆ ಮನೆ ಇಲ್ಲವಾ ಎಂದು ಪ್ರಶ್ನೆ ಮಾಡಿದರು. ಜಿಲ್ಲೆಯ ಗ್ರಾಮ ಪಂಚಾಯಿತಿ ಸದಸ್ಯರನ್ನ ಅಲ್ಲಿಯೆ ಕೂಡಿಹಾಕಿ ಹೆದರಿಸುವುದನ್ನು ಇವರು ವಾಡಿಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪತ್ರವನ್ನೂ ಬರೆದಿದ್ದೇನೆ. ಆಡಿಟ್ ಹಾಗೂ ಮಾಹಿತಿಯನ್ನ ಕೇಳಿದ್ದೇನೆ. ಶೀಘ್ರದಲ್ಲೇ ಕಾಂಗ್ರೆಸ್‌ ನಾಯಕರ ಬಣ್ಣವನ್ನು ಬಯಲು ಮಾಡುತ್ತೇನೆ ಎಂದು ತಿಳಿಸಿದರು.

Prajadhwani Yatre: ಎರಡೇ ವರ್ಷಗಳಲ್ಲಿ ಮಹದಾಯಿ ಯೋಜನೆ ಪೂರ್ಣ: ಸಿದ್ದರಾಮಯ್ಯ

ಬೇಕಾದವರಿಗೆ ತಾಡಪತ್ರಿ ಕೊಡುತ್ತಾರೆ: ಗದಗದಲ್ಲಿದ್ದ ರೈತ ಸಂಪರ್ಕ ಕೇಂದ್ರವನ್ನ ಶಾಸಕರ ಹುಟ್ಟೂರು ಹುಲಕೋಟಿಗೆ ತಂದಿದ್ದಾರೆ. ತಮಗೆ ಬೇಕಾದವರಿಗೆ ತಾಡಪತ್ರಿ ಕೊಡುತ್ತಾರೆ. ಅಲ್ಲಿ ಒಬ್ಬ ಗೌಡ ಕೂತಿರ್ತಾನೆ.  ಅವರು ಹೇಳಿದವರಿಗೆ ಮಾತ್ರ ಸೌಲಭ್ಯ ಸಿಗುತ್ತದೆ. ಬದಲಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇನೆ. ರೈತರನ್ನ ಹೆದರಿಸೋದಕ್ಕೆ ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

click me!