ಯೋಗ ಬಿಟ್ಟು ಲಗೋರಿ ಆಡಿದ ಬಿಜೆಪಿ ಶಾಸಕಿ ಪೂರ್ಣಿಮಾ, ವಿಡಿಯೋ ವೈರಲ್

By Suvarna News  |  First Published Jun 21, 2022, 5:17 PM IST

ಬಿಜೆಪಿ ಶಾಸಕಿಯೊಬ್ಬರು ಪುಟಾಣಿ ಮಕ್ಕಳೊಂದಿಗೆ ತುಂಬಾ ಹಳೇಯ ಆಟವಾದ ಲಗೋರಿಯನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಯೋಗ ದಿನದಂದು ಲಗೋರಿ ಆಡಿದ ವಿಡಿಯೋ ವೈರಲ್ ಆಗಿದೆ.


ಚಿತ್ರದುರ್ಗ, (ಜೂನ್.21):  ಇಂದು(ಮಂಗಳವಾರ) ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಹಲವೆಡೆ ಗಣ್ಯಾತಿಗಣ್ಯರು ಯೋಗ ಮಾಡಿದ್ದಾರೆ. ಆದ್ರೆ, ಇಲ್ಲಿ ಬಿಜೆಪಿ ಶಾಸಕಿಯೊಬ್ಬರು ಈಗ ಬದಲಿಗೆ ಮಕ್ಕಳೊಂದಿಗೆ ಲಗೋರಿ ಆಟವಾಡಿ ಗಮನಸೆಳೆದಿದ್ದಾರೆ.

ಹೌದು...ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರುಇಂದು (ಜೂನ್.21)  ಪುಟಾಣಿ ಮಕ್ಕಳೊಂದಿಗೆ ಲಗೋರಿ ಆಡಿದ್ದಾರೆ.

Latest Videos

undefined

ರಾಜಕೀಯ ಬ್ಯುಸಿ ಸಮಯದಲ್ಲಿಯೂ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಹಿರಿಯೂರು ಪಟ್ಟಣದಲ್ಲಿರುವ ತಮ್ಮ ಮನೆಯ ಅಕ್ಕ ಪಕ್ಕದ ಮನೆಯ ಪುಟಾಣಿ ಮಕ್ಕಳೊಂದಿಗೆ ಲಗೋರಿ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರೊಟ್ಟಿಗೆ ತಮ್ಮದೇ ಹೆಸರಿನಲ್ಲಿರುವ ಫೇಸ್ ಬುಕ್ ಅಕೌಂಟ್ ನಲ್ಲಿ ಈ ವಿಡಿಯೋ ಶೇರ್ ಮಾಡುವ ಮೂಲಕ ನಮ್ಮಲ್ಲಿನ ಮಗುವಿನ ಗುಣ ನಾವೆಂದೂ ಮರೆಯಬಾರದು ಎಂದು ಪೋಸ್ಟ್ ಮಾಡಿದ್ದಾರೆ.

International Yoga Day: ಯೋಗದ ಯಾವ ರೀತಿಯ ಆಸನದಿಂದ ಯಾವ ರೀತಿಯ ಪ್ರಯೋಜನ ಸಿಗುತ್ತೆ ?

ಇನ್ನೂ ಶಾಸಕರು ಪೋಸ್ಟ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು. ಶಾಸಕರ ಬೆಂಬಲಿಗರು ಹಾಗೂ ಹಿರಿಯೂರ ಬಿಜೆಪಿ ಕಾರ್ಯಕರ್ತರು ಪೂರ್ಣಿಮಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ. ಯಾಕಂದ್ರೆ ಇತ್ತೀಚಿನ ದಿನ ಮಾನಗಳಲ್ಲಿ ಎಲ್ಲಾ‌ ಮಕ್ಕಳು ವಿಡಿಯೊಇ ಗೇಮ್ಸ್ ಗಳ ಮೊರೆ ಹೋಗಿದ್ದಾರೆ. ಅಲ್ಲದೇ ಯಾವ ಮಕ್ಕಳ ಕೈಯಲ್ಲಿ ನೋಡಿದ್ರು ಮೊಬೈಲ್ ನದ್ದೇ ಕಾರುಬಾರು. ಇಂತಹ ಕಾಲಘಟ್ಟದಲ್ಲಿ ಹಳೆಯ ಕ್ರೀಡೆ ಲಗೋರಿಯನ್ನು ಆಡುವ ಮೂಲಕ ಮತ್ತೆ ನೆನಪು ಮಾಡಿದ್ದಕ್ಕೆ ಎಲ್ಲಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

 ಏನಿದು ಲಗೋರಿ ಆಟ?
ಲಗೋರಿ ಎಂದರೆ ಎರಡು ತಂಡಗಳ ಆಟಗಾರರು ಮೊದಲು ಒಂದು ಕಡೆ ನಿಂತು ಕಲ್ಲುಗಳನ್ನು ಒಂದೆಡೆ ಜೋಡಿಸುವುದು. ನಂತರ ಒಂದು ತಂಡದ ಆಟಗಾರ ಆ ಜೋಡಿಸಿದ ಕಲ್ಲಿಗೆ ಬಾಲಿನಿಂದ ಹೊಡೆದು ಬೀಳಿಸುವುದು. ನಂತರ ಎದುರಾಳಿ ತಂಡದ ಆಟಗಾರನಿಗೆ ಸಿಗದೇ ಓಡಿ ಹೋಗುವುದು. ಹಾಗೂ ಅವರ ಕೈಗೆ ಸಿಗದೇ ಓಡಿ ಬಂದು ತಾವೇ ಹೊಡೆದು ಕೆಳಗೆ ಬೀಳಿಸಿದ್ದ ಕಲ್ಲುಗಳನ್ನು ಮತ್ತೊಮ್ಮೆ ಜೋಡಿಸಿ ಅದರ ಸುತ್ತಲೂ ಗೆರೆ ಕೊರೆಯುವ ಮೂಲಕ ಲಗೋರಿ ಲಗೋರಿ ಎಂದು ಕೂಗಿದ್ರೆ ಸಾಕು ಆ ತಂಡ ಜಯಿಸಿದೆ ಎಂದರ್ಥ.

. ಆದ್ರೆ ಎದುರಾಳಿ ತಂಡ ಓಡಿ ಹೋಗಿ ಕಲ್ಲುಗಳನ್ನು ಜೋಡಿಸುವ ಮುನ್ನವೇ ಅವನ‌ ಬೆನ್ನಿಗೆ ಬಾಲಿನಿಂದ ಹೊಡೆದ್ರೆ ಸಾಕು ಆ ತಂಡಕ್ಕೆ ಗೆಲುವು. ಹೀಗೆ ಹಳೆಯ ಕಾಲದಲ್ಲಿ ಮಕ್ಕಳು ತುಂಬಾ ಇಷ್ಟ ಪಟ್ಟು ಗ್ರಾಮೀಣ ಭಾಗದಲ್ಲಿ ಆಡ್ತಿದ್ದಂತಹ ಆಟ ಇದಾಗಿದೆ.

click me!