ಹಿಂದುತ್ವ ನಮ್ಮ ಅಜೆಂಡಾ, ಅಭಿವೃದ್ಧಿ ನಮ್ಮ ಮಂತ್ರ: ಕೋಟ ಶ್ರೀನಿವಾಸ ಪೂಜಾರಿ

By Kannadaprabha NewsFirst Published Mar 15, 2024, 10:30 PM IST
Highlights

ರಾಜ್ಯದಲ್ಲಿ ಭಯೋತ್ಪಾದಕರು ರಾಜಾರೋಷವಾಗಿ ತಿರುಗಾಡುತ್ತಾ ರಾಜಧಾನಿಯಲ್ಲಿ ಬಾಂಬ್ ಹಾಕುತ್ತಿದ್ದಾರೆ, ರಾಜ್ಯದ ದೇಗುಲವಾಗಿರುವ ವಿಧಾನಸೌಧದಲ್ಲಿಯೇ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ, ರಾಜ್ಯದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದವರು ಟೀಕಿಸಿದ ಕೋಟ ಶ್ರೀನಿವಾಸ ಪೂಜಾರಿ 

ಉಡುಪಿ(ಮಾ.15):  ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಜನರ ಮುಂದಿಟ್ಟು ಮತ ಕೇಳುತ್ತೇನೆ. ಹಿಂದುತ್ವ ನಮ್ಮ ಅಜೆಂಡಾ, ಅಭಿವೃದ್ಧಿ ನಮ್ಮ ಮಂತ್ರ, ಹಿಂದಿನ ಬಾರಿಗಿಂತಲೂ ಹೆಚ್ಚು, ದಾಖಲೆಯ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯನಾಗಿ, 4 ಬಾರಿ ವಿಧಾನ ಪರಿಷತ್ ಸದಸ್ಯ, 3 ಬಾರಿ ಸಚಿವ, 2 ಬಾರಿ ವಿಪಕ್ಷ ನಾಯಕ, ಪಕ್ಷದಲ್ಲಿ ಜಿಲ್ಲೆ, ರಾಜ್ಯ ಪದಾಧಿಕಾರಿಯಾಗಿ ಜನರ ಮಧ್ಯೆ ಕೆಲಸ ಮಾಡಿದ ರಾಜಕೀಯ ಅನುಭವ ಹೊಂದಿದ್ದೇನೆ. ಕೇಂದ್ರದ ಯೋಜನೆಗಳನ್ನು ಕ್ಷೇತ್ರಕ್ಕೆ ತರುತ್ತೇನೆ. ಅದಕ್ಕಾಗಿ ಗೆಲ್ಲಿಸುವಂತೆ ಮತ ಕೇಳುತ್ತೇನೆ ಎಂದವರು ಹೇಳಿದರು.

ಕೋಟಾ ಶ್ರೀನಿವಾಸ ಆಯ್ಕೆಯಿಂದ ನಾಲ್ಕು ಕ್ಷೇತ್ರ ಮೇಲೆ ಪ್ರಭಾವ; ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ?

ಚಿಕ್ಕಮಗಳೂರು ಜಿಲ್ಲೆಯ ವಿಸ್ತಾರಕ್ ಆಗಿ ಮತ್ತು ಪಕ್ಷದ ಹಿಂದುಳಿದ ವರ್ಗಗಳ ಮೋರ್ಚದ ರಾಜ್ಯಾಧ್ಯಕ್ಷನಾಗಿ ಜಿಲ್ಲಾದ್ಯಂತ ತಿರುಗಾಡಿರುವುದರಿಂದ ಆ ಜಿಲ್ಲೆಯ ಕಾರ್ಯಕರ್ತರಿಗೆ ಪರಿಚಿತನಿದ್ದೇನೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ ಭಯೋತ್ಪಾದಕರು ರಾಜಾರೋಷವಾಗಿ ತಿರುಗಾಡುತ್ತಾ ರಾಜಧಾನಿಯಲ್ಲಿ ಬಾಂಬ್ ಹಾಕುತ್ತಿದ್ದಾರೆ, ರಾಜ್ಯದ ದೇಗುಲವಾಗಿರುವ ವಿಧಾನಸೌಧದಲ್ಲಿಯೇ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ, ರಾಜ್ಯದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದವರು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಶಾಸಕ ಕಿರಮ್ ಕುಮಾರ್ ಕೊಡ್ಗಿ, ಪಕ್ಷದ ನಾಯಕರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಕುತ್ಯಾರು ನವೀನ್ ಶೆಟ್ಟಿ, ದಿನಕರ ಬಾಬು, ರೇಶ್ಮಾ ಉದಯ ಶೆಟ್ಟಿ, ಸಂಧ್ಯಾ ರಮೇಶ್, ಪೃಥ್ವಿರಾಜ್ ಶೆಟ್ಟಿ, ವಿಜಯ ಕೊಡವೂರು, ವಿಜಯಕುಮಾರ್ ಉದ್ಯಾವರ, ಶಿಲ್ಪಾ ಜಿ. ಸುವರ್ಣ ಮುಂತಾದವರಿದ್ದರು.

ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ

ಅಕಾಂಕ್ಷಿಗಳಿಂದ ಭಿನ್ನಾಭಿಪ್ರಾಯ ಇಲ್ಲ

ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಯಾವುದೇ ಭಿನ್ನಭಿಪ್ರಾಯ ಇಲ್ಲ, ನನ್ನ ಹೆಸರು ಘೋಷಣೆ ಆದ ಕೂಡಲೇ ಸಿ.ಟಿ. ರವಿ ಅವರು ಕರೆ ಮಾಡಿ ಕಳೆದ ಬಾರಿಗಿಂತಲೂ ಹೆಚ್ಚು ಮತಗಳಿಂದ ಗೆಲ್ಲಬೇಕು, ನಿಮ್ಮ ಜೊತೆ ನಾನಿದ್ದೇನೆ ಎಂದಿದ್ದಾರೆ. ಶೋಭಾ ಕರಂದ್ಲಾಜೆ ಅವರು ಕರೆ ಮಾಡಿ ಶುಭಾಶಯ ಹೇಳಿದ್ದಾರೆ. ಪ್ರಮೋದ್ ಮಧ್ವರಾಜ್ ವಾಯ್ಸ್ ಮೆಸೇಜ್ ಕಳಿಸಿ, ಮೋದಿ ಪ್ರಧಾನಿ ಆಗಬೇಕು, ನಿಮಗೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದ್ದಾರೆ. ಆದ್ದರಿಂದ ಟಿಕೆಟ್ ಆಕಾಂಕ್ಷಿಗಳಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೋಟ ಹೇಳಿದರು.

ಎದುರಾಳಿ ಹೆಗ್ಡೆ ಬಗ್ಗೆ ನೋ ಕಮೆಂಟ್ಸ್

ಕಾಂಗ್ರೆಸ್ ಪಕ್ಷದಿಂದ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಕೋಟ, ಎದುರಾಳಿ ಪಕ್ಷದ ಯಾವುದೇ ಅಭ್ಯರ್ಥಿಗಳ ಬಗ್ಗೆ ನಾನು ಮಾತನಾಡುವುದಿಲ್ಲ, ಅವರ ಬಗ್ಗೆ ಗೌರವ ಇದೆ. ವೈಯಕ್ತಿಕ ಟೀಕೆ ಟಿಪ್ಪಣಿ ಮಾಡುವುದು ನನ್ನ ಸಂಪ್ರದಾಯ ಅಲ್ಲ, ಹೇಳಿಕೆಗಳ ಮೂಲಕ ಅನಗತ್ಯ ಗೊಂದಲ ಸೃಷ್ಟಿಸುವುದಿಲ್ಲ ಎಂದು ಹೇಳಿದರು.

click me!