ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲಾ ನಾನೇಕೆ ಉತ್ತರ ಕೊಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.
ದಾವಣಗೆರೆ (ಅ.25) : ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲಾ ನಾನೇಕೆ ಉತ್ತರ ಕೊಡಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿರುದ್ಧ ವಾಗ್ಧಾಳಿ ಮುಂದುವರಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಸಿದ್ದೇಶ್ವರರ ಬಗ್ಗೆ ನನಗೆ ಗೌರವವಿದೆ. ಸಂಸದರಿಗಿಂತಲೂ ಬಿಜೆಪಿಯಲ್ಲಿ ನಾನು ಹಿರಿಯನಿದ್ದೇನೆ. ಸಂಸದರು ವಯಸ್ಸಿನಲ್ಲಿ ಹಿರಿಯರಾಗಿರಬಹುದು. ಆದರೆ, ಪಕ್ಷದಲ್ಲಿ ನಾನು ದಾವಣಗೆರೆ ಸಂಸದರಿಗಿಂತ ಸೀನಿಯರ್ ಇದ್ದೀನಿ ಎಂದರು.
ರೇಣುಕಾಚಾರ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರ ಖಂಡನೆ: ಉಚ್ಚಾಟನೆಗೆ ವರಿಷ್ಠರಿಗೆ ಮನವಿ
ಬಿಜೆಪಿಗಾಗಿ ಎರಡು ಸಲ ಜೈಲಿಗೆ ಹೋಗಿ ಬಂದವನು ನಾನು, ನನ್ನ ರಕ್ತದ ಪ್ರತಿ ಕಣದಲ್ಲಿಯೂ ಹಿಂದುತ್ವ ಇದೆ. ರೇಣುಕಾಚಾರ್ಯ ಏನೇ ಮಾತನಾಡಿದರು, ಏನೇ ಒಂದು ಮಾತು ಹೇಳಿದರೂ ಅದು ಪಕ್ಷ ದ್ರೋಹವೆನ್ನುತ್ತಾರೆ. ಆದರೆ, ಬೇರೆ ಕೆಲವರು ಮಾತನಾಡಿದರೆ ಅದು ಪಕ್ಷ ದ್ರೋಹವಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ನಂತರ ಇಲ್ಲಿನ ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದ ಬಳಿಯಿಂದ ಸಾರ್ವಜನಿಕ ವಿಜಯ ದಶಮಿ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ ಎಂ.ಪಿ.ರೇಣುಕಾಚಾರ್ಯ ಜಗಳೂರು ತಾಲೂಕಿನ ಮುಖಂಡ ಡಾ.ಟಿ.ಜಿ.ರವಿಕುಮಾರ ಜೊತೆಗೆ ಶೋಭಾಯಾತ್ರೆಗೆ ಆಗಮಿಸಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಹಿರಿಯ ಮುಖಂಡ ಪಿ.ಸಿ.ಮಹಾಬಲೇಶ ಭಟ್ ಇತರರನ್ನು ಭೇಟಿ ಮಾಡಿ, ಉಭಯ ಕುಶಲೋಪರಿಯಲ್ಲಿ ತೊಡಗಿದರು. ಸ್ಥಳದಲ್ಲಿ ಎಲ್.ಎನ್.ಕಲ್ಲೇಶ, ಟಿಪ್ಪು ಇತರರಿದ್ದರು.
ರಾಜಕೀಯವಾಗಿ ನನ್ನನ್ನು ಮುಗಿಸಲು ಸಿದ್ದೇಶ್ವರ ಯತ್ನ: ರೇಣುಕಾಚಾರ್ಯ