ಚುನಾವಣಾ ಅಖಾಡಕ್ಕೆ ಬಿಜೆಪಿಯಿಂದ ಮತ್ತೊರ್ವ ಚಾಯ್‌ವಾಲಾ!

Published : Oct 20, 2022, 07:35 PM IST
ಚುನಾವಣಾ ಅಖಾಡಕ್ಕೆ ಬಿಜೆಪಿಯಿಂದ ಮತ್ತೊರ್ವ ಚಾಯ್‌ವಾಲಾ!

ಸಾರಾಂಶ

2014ರಿಂದ ಬಳಿಕ ಭಾರತೀಯ ರಾಜಕಾರಣದಲ್ಲಿ ಚಾಯ್‌ವಾಲಾ ಪದ ಭಾರಿ  ಸಂಚಲನ ಸೃಷ್ಟಿಸಿದೆ. ಪ್ರಧಾನಿ ಮೋದಿ ಚಾಯ್‌ವಾಲಾ ಎಂದು ಟೀಕಿಸಿದ ಕಾಂಗ್ರೆಸ್‌ ಬಳಿಕ ಬೆಲೆ ತೆತ್ತಿದೆ. ಇದೀಗ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಮತ್ತೊರ್ವ ಚಾಯ್‌ವಾಲಾ ಸ್ಪರ್ಧಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ .ಚಾಯ್‌ವಾಲ್ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಯಾರು ಈ ಹೊಸ ಚಾಯ್‌ವಾಲಾ.  

ಹಿಮಾಚಲ ಪ್ರದೇಶ(ಅ.20): ಚಾಯ್‌ವಾಲಾ ಎಂದ ತಕ್ಷಣವೇ ಪ್ರಧಾನಿ ಮೋದಿ ಹೆಸರು ನೆನಪಿಗೆ ಬರುತ್ತದೆ. ಕಾರಣ ಪ್ರಧಾನಿ ಮೋದಿ ತಮ್ಮ ಬಾಲ್ಯದ ದಿನಗಳಲ್ಲಿ ತಂದೆ ಜೊತೆ ರೈಲು ನಿಲ್ದಾಣಧಲ್ಲಿ ಚಹಾ ಮಾರಾಟ ಮಾಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೋದಿಯನ್ನು ಚಾಯ್‌ವಾಲ್ ಎಂದು ಕರೆದಿತ್ತು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಚಾಯ್ ಪೇ ಚರ್ಚಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇತ್ತ ಮೋದಿ ತಾನು ಚಹಾ ಮಾರಿದ್ದೆ, ತಾನೊಬ್ಬ ಚಾಯ್‌ವಾಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಇದೀಗ ಬಿಜೆಯಿಂದ ಮತ್ತೊರ್ವ ಚಾಯ್‌ವಾಲಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಕೆಲವೆ ದಿನಗಳಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಚಹಾ ಅಂಗಡಿ ನಡೆಸುತ್ತಿರುವ ಸಂಜಯ್ ಸೂದ್‌ಗೆ ಬಿಜೆಪಿ ಟಿಕೆಟ್ ನೀಡಿದೆ. 

ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಸಂಜಯ್ ಸೂದ್‌ಗೆ ಟಿಕೆಟ್ ನೀಡಲಾಗಿದೆ. ವಿಶೇಷ ಅಂದರೆ ಶಿಮ್ಲಾ ಗ್ರಾಮೀಣ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆದ್ದು ಬಂದ ಸುರೇಶ್ ಭಾರದ್ವಾಜ್ ಅವರ ಬದಲು ಸಂಜಯ್ ಸೂದ್‌ಗೆ ಟಿಕೆಟ್ ನೀಡಲಾಗಿದೆ. ಸಂಜಯ್ ಸೂದ್ ಬಡ ಕುಟುಂಬದಿಂದ ಬಂದ ನಾಯಕ. ಸೂದ್ ಇನ್ನೂ ಓರ್ವ ಕಾರ್ಯಕರ್ತನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಇದೇ ಮೊದಲ ಬಾರಿಗೆ ಸಂಜಯ್ ಸೂದ್‌ಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. 

ಯುಪಿ ಮುಖ್ಯಮಂತ್ರಿ ಆದಿತ್ಯನಾಥ್‌ ಸಹೋದರ ಚಾಯ್‌ವಾಲಾ?

ಸಂಜಯ್ ಸೂದ್ ಬಡ ಕುಟುಂಬದಿಂದ ಬಂದಿದ್ದಾರೆ. ಶಾಲಾ ದಿನಗಳಲ್ಲಿ ಸಂಜಯ್ ಸೂದ್‌ಗೆ ಫೀಸ್ ಕಟ್ಟಲು ಹಣ ಇರಲಿಲ್ಲ. ಕಾಲೇಜು ಮೆಟ್ಟಿಲು ಹತ್ತಲು ಮನೆ ಮನೆಗೆ ಪೇಪರ್ ಹಾಕುತ್ತಿದ್ದರು. ಈ ಹಣದಲ್ಲಿ ಶಾಲಾ ಕಾಲೇಜಿನ ಶುಲ್ಕ ಕಟ್ಟಿದ್ದರು. ಕಾಲೇಜು ದಿನಗಳಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಬಳಿಕ ಕುಟುಂಬ ಆರ್ಥಿಕ ಪರಿಸ್ಥಿತಿ ಕಾರಣ 1991ರಲ್ಲಿ ಚಹಾ ಅಂಗಡಿ ತೆರೆದರು. ಬಳಿಕ ಚಹಾ ಅಂಗಡಿ, ಪೇಪರ್ ಹಾಕುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾ ಕುಟುಂಬವನ್ನು ನೋಡಿಕೊಂಡಿದ್ದಾರೆ. ಇದರ ಜೊತೆಗೆ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು.

ಬಿಜೆಪಿ ಪತಾಕೆ ಕಟ್ಟುವುದು, ಸಮಾವೇಶಗಳ ಸಂದರ್ಭದಲ್ಲಿ ಕುರ್ಚಿಗಳನ್ನು ಜೋಡಿಸುವುದು. ಸಮಾವೇಶ ಸ್ಥಗಳನ್ನು ಸ್ವಚ್ಚಗೊಳಿಸುವುದು ಸೇರಿದಂತೆ ಬಿಜೆಪಿಯ ಕೆಲಸಗಳನ್ನು ಚಾಚು ತಪ್ಪದೆ ಮಾಡಿದ್ದಾರೆ. ಒರ್ವ ಕಾರ್ಯಕರ್ತನಾಗಿ ಸಕ್ರಿಯವಾಗಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಇದೀಗ ಈ ಕಾರ್ಯಕರ್ತನನ್ನು ಶಿಮ್ಲಾ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ. 

‘ಚಹಾ ಮಾರಿದ್ದೇನೆ, ದೇಶವನ್ನಲ್ಲ’ ಕಾಂಗ್ರೆಸ್’ಗೆ ಮೋದಿ ತಿರುಗೇಟು

ಪಕ್ಷದ ನಿರ್ಧಾರಕ್ಕೆ ಸಂಜಯ್ ಸೂದ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಪೇಪರ್ ಹಾಕುತ್ತಿದ್ದ ಹುಡುಗ, ಚಹಾ ಅಂಗಡಿ ತೆರೆದ. ಬಳಿಕ ಬಿಜೆಪಿ ನಾಯಕರು ನನೆ ನೆರವು ನೀಡಿದ್ದಾರೆ. ದೇವರ ಆಶೀರ್ವಾದದಿಂದ ಎಲ್ಲವೂ ಉತ್ತಮವಾಗಿದೆ. ಇದೀಗ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿರುವುದು ಅತೀವ ಸಂತಸ ತಂದಿದೆ. ಓರ್ವ ಸಾಮಾನ್ಯ ಕಾರ್ಯಕರ್ತ, ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ಆರ್ಥಿಕವಾಗಿ ನಾನು ಸದೃಡನಲ್ಲ. ನನ್ನಂತ ವ್ಯಕ್ತಿಗೆ ಟಿಕೆಟ್ ನೀಡಿದೆ. ಇದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ ಎಂದಿದ್ದಾರೆ.

ಶಿಮ್ಲಾ ಗ್ರಾಮೀಣ ಭಾಗದಲ್ಲಿ ಸಂಜಯ್ ಸೂದ್ ಚಾಯ್‌ವಾಲಾ ಎಂದು ಖ್ಯಾತಿಗಳಿಸಿದ್ದಾರೆ. ಇದೀಗ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ಮೋದಿಗೆ ಹೋಲಿಸಲಾಗುತ್ತಿದೆ. ಇದಕ್ಕೆ ಸಂಜಯ್ ಸೂದ್ ಪ್ರತಿಕ್ರಿಯೆ ನೀಡಿದ್ದರೆ. ಮೋದಿ ಮೇರು ವ್ಯಕ್ತಿತ್ವ. ಅವರ ಜೊತೆ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ. ಹೀಗಾಗಿ ತನ್ನನ್ನು ಮೋದಿ ಜೊತೆ ಹೋಲಿಸಬೇಡಿ. ಯಾವ ರೀತಿಯಲ್ಲೂ ನಾನು ಹೋಲಿಕೆಗೆ ಸೂಕ್ತನಲ್ಲ ಎಂದು ಸಂಜಯ್ ಸೂದ್ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ
20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ