ಭದ್ರಕೋಟೆಯಲ್ಲೇ ತಿಣುಕಾಡಿ ಗೆಲ್ಲುವಂತಾಯ್ತು? ಬಿಜೆಪಿಗೆ ಹೊಡೆತಬಿದ್ದಿದ್ದೆಲ್ಲಿ?

By Suvarna News  |  First Published May 2, 2021, 7:56 PM IST

ಬೆಳಗಾವಿ ಲೋಕಸಭಾ ಉಪಚುನಾವಣೆಯ ರಣರೋಚಕ ಫೈಟ್‌ನಲ್ಲಿ ಕೊನೆಗೂ ಕಪ್ ಬಿಜೆಪಿ ಪಾಲಾಗಿದೆ. ಆದ್ರೆ, ಬಿಜೆಪಿ ತಿಣುಕಾಡಿ ಗೆದ್ದಿದ್ದು ಮಾತ್ರ ಬಿಜೆಪಿ ನಾಯಕರುಗಳಿಗೆ ಅಚ್ಚರಿಯಾಗಿದೆ.


ಬೆಳಗಾವಿ, (ಮೇ.02): ಬೆಳಗಾವಿ ಲೋಕಸಭಾ ಉಪಚುನಾವಣೆಯ ರಣರೋಚಕದ ಕದನಲ್ಲಿ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ  ಗೆಲುವು ಸಾಧಿಸಿದ್ದಾರೆ.

ಆರಂಭದಿಂದಲೂ ಕ್ಲೈಮಾಕ್ಸ್​ ಹಂತದವರೆಗೂ ಹಾವು ಏಣಿಯಂತಿದ್ದ ಮತ ಗಳಿಕೆ, ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಲೇ ಇತ್ತು. ಅಂತಿಮವಾಗಿ ಮಂಗಳಾ 2912 ಮತಗಳ ಅಂತರದಲ್ಲಿ ಗೆದ್ದು ಬೀಗಿದರು.

Latest Videos

undefined

ಬೆಳಗಾವಿ ಫೈಟ್‌ನಲ್ಲಿ ಕೊನೆಗೂ ಗೆದ್ದು ಬೀಗಿದ ಬಿಜೆಪಿಯ ಮಂಗಳ ಅಂಗಡಿ

ಹಾವು ಏಣಿ ಆಟದಲ್ಲಿ ಕೊನೇ ಸುತ್ತಿನ ಮತ ಎಣಿಕೆವರೆಗೂ ಭಾರಿ ಕುತೂಹಲ ಮೂಡಿಸಿತ್ತು. 10 ಸಾವಿರ ಮತಗಳ ಲೀಡ್​ನಲ್ಲಿದ್ದ ಸತೀಶ್​, 76ನೇ ಸುತ್ತಿನಲ್ಲಿ 1628 ಮತಗಳ ಅಂತರಕ್ಕೆ ಇಳಿದದ್ದು, ಕಾಂಗ್ರೆಸ್​ನಲ್ಲಿ ಎದೆಬಡಿತ ಹೆಚ್ಚಿಸಿತ್ತು. ಹೀಗೆ ಮುಂದುವರಿದ ರೋಚಕ ಕ್ಲೈಮಾಕ್ಸ್​ನಲ್ಲಿ ತೀವ್ರ ಪೈಪೋಟಿ ಕೊಟ್ಟ ಮಂಗಳಾ ಅಂಗಡಿ, 80ನೇ 3101 ಮತಗಳ ಮುನ್ನಡೆ ಪಡೆಯುವ ಮೂಲಕ ಸತೀಶ್​ರನ್ನ ಹಿಂದಿಕ್ಕಿದರು. 

ಇಬ್ಬರೂ ಪಡೆದ ಮತಗಳ ನಡುವಿನ ಅಂತರ ಕಡಿಮೆ ಇದ್ದಿದ್ದರಿಂದ ಕೊನೇ ಸುತ್ತಿನ ಮತ ಎಣಿಕೆ ವರೆಗೂ ಭಾರಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮಂಗಳಾ 440327 ಮತಗಳನ್ನು ಪಡೆದು ಜಯಭೇರಿ ಭಾರಿಸಿದರು. ಸತೀಶ್​ ಜಾರಕಿಹೊಳಿ 435087 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು. ಇನ್ನು ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ 117174 ಮತಗಳನ್ನು ಪಡೆಯುವುದರ ಮೂಲಕ ಬಿಜೆಪಿ ಗೆಲುವಿನ ಅಂತರಕ್ಕೆ ಮುಳುವಾದರು.

ಬಿಜೆಪಿಯ ಭದ್ರಕೋಟೆಯಲ್ಲಿಯೇ ಕೇವಲ 3 ಸಾವಿರ ಮತಗಳಿಂದ ಗೆಲುವಾಗಿರುವುದು ನಾಯಕರುಗಳಿಗೆ ಕೊಂಚ ಬೇಸರತರಿಸಿದೆ. ಯಾಕಂದ್ರೆ ಈ ಹಿಂದೆ ಸುರೇಶ್ ಅಂಗಡಿ ಅವರು ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಕಳೆದ ಲೋಕಸಭಾ ಚುನಾವನೆಯಲ್ಲಿ ಸುರೇಶ್ ಅಂಗಡಿ ಅವರು 3 ಲಕ್ಷದ 91 ಸಾವಿರದ ಮತಗಳಿಂದ ಗೆದ್ದದ್ದರು. ಈಗ ಸುರೇಶ್ ಅಂಗಡಿ ಅವರ ಪತ್ನಿ ಮಂಗಳ ಅಂಗಡಿ ಅವರು ಕೇವಲ ಸುಮಾರು 5240 ಸಾವಿರ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.  

 3 ಲಕ್ಷ 91 ಸಾವಿರದಿಂದ ಗೆದ್ದಿದ್ದ ಬಿಜೆಪಿಯನ್ನು 3 ಸಾವಿರಕ್ಕೆ ಇಳಿಸಿದ್ದು ಸಣ್ಣ ಸಾಧನೆ ಏನಲ್ಲ. ಇದು ಬಿಜೆಪಿ ಎಚ್ಚರಿಕೆ ಗಂಟೆಯಾಗಿದೆ. ಹಾಗಾದ್ರೆ, ಬಿಜೆಪಿ ಎಡವಿದ್ದೇಲ್ಲಿ ಎನ್ನುವ ಅಂಶಗಳನ್ನು ನೋಡುವುದಾದರೆ,

* MES ಅಭ್ಯರ್ಥಿ ಬಿಜೆಪಿ ಮತಗಳನ್ನ ಪಡೆದುಕೊಂಡಿದ್ದು.
* ಕಾಂಗ್ರೆಸ್‌ನಿಂದ ಬಲಿಷ್ಠ ಅಭ್ಯರ್ಥಿ ಕಣಕ್ಕಿಳಿಸಿದ್ದು
* ಬಿಜೆಪಿ ಶಾಸಕರುಗಳ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್‌ಗೆ ಲೀಡ್ ಆಗಿದ್ದು.
*   ಗೆಲ್ಲುವ ಅತಿಯಾದ ಆತ್ಮವಿಶ್ವಾಸ
* ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಪ್ರಚಾರದಿಂದ ದೂರ ಇದ್ದಿದ್ದು.
* ದಿನ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ
*ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ
* ಆಹಾರ ಪದಾರ್ಥಗಳ ಬೆಲೆ ಏರಿಕೆ
* ಕೇಂದ್ರ ಸರ್ಕಾರ ರೈತರನ್ನ ಕಡೆಗಣಿಸುತ್ತಿದೆ ಎನ್ನುವ ಆರೋಪ. 
* ರಾಜ್ಯ ಬಿಜೆಪಿ ಆಡಳಿತ ವಿರೋಧಿ ಅಲೆ

click me!