ಬೆಳಗಾವಿ ಲೋಕಸಭಾ ಉಪಚುನಾವಣೆಯ ರಣರೋಚಕ ಫೈಟ್‌ನಲ್ಲಿ ಕೊನೆಗೂ ಕಪ್ ಬಿಜೆಪಿ ಪಾಲಾಗಿದೆ.
ಬೆಳಗಾವಿ, (ಮೇ.02): ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ರೋಚಕ ಗೆಲುವು ಸಾಧಿಸಿದ್ದಾರೆ.
ಅಂತಿಮ ಸುತ್ತಿನ ವರೆಗೆ ತೀವ್ರ ಹಣಾಹಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುಗ್ಗರಿಸಿದ್ದಾರೆ. ಮೊದಲ ಸುತ್ತಿನಿಂದಲೂ ಸತೀಶ್ ಜಾರಕಿಹೊಳಿ ಅವರು ಕೊನೆ ಸುತ್ತಿನ ವರೆಗೂ ಬಿಜೆಪಿ ಅಭ್ಯರ್ಥಿಗೆ ನೆಕ್ ಟು ನೆಕ್ ಫೈಟ್ ನೀಡುತ್ತಾ ಬಂದಿದ್ದಾರೆ. ಆದ್ರೆ, ಕೊನೆಯಲ್ಲಿ ಮಂಗಳ ಅಂಗಡಿಗೆ ಗೆಲುವಾಗಿದೆ.
undefined
ಮಸ್ಕಿಯಲ್ಲಿ ಬಿಜೆಪಿಗೆ ಮುಖಭಂಗ: ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವೇನು..?
ಬಿಜೆಪಿಯ ಭದ್ರಕೋಟೆಯಲ್ಲಿಯೇ ಕೇವಲ 3 ಸಾವಿರ ಮತಗಳಿಂದ ಗೆಲುವಾಗಿರುವುದು ನಾಯಕರುಗಳಿಗೆ ಕೊಂಚ ಬೇಸರತರಿಸಿದೆ.ಯಾಕಂದ್ರೆ ಈ ಹಿಂದೆ ಸುರೇಶ್ ಅಂಗಡಿ ಅವರು ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಕಳೆದ ಲೋಕಸಭಾ ಚುನಾವನೆಯಲ್ಲಿ ಸುರೇಶ್ ಅಂಗಡಿ ಅವರು 3 ಲಕ್ಷದ ತೊಂಭತ್ತು ಸಾವಿರುದ ಮತಗಳಿಂದ ಗೆದ್ದದ್ದರು.
ಈಗ ಸುರೇಶ್ ಅಂಗಡಿ ಅವರ ಪತ್ನಿ ಮಂಗಳ ಅಂಗಡಿ ಅವರು ಕೇವಲ 3000 ಸಾವಿರ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಚುನಾವಣೆ ಆಯೋಗ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ಇಲ್ಲಿ ಬಿಜೆಪಿ ಎಂಇಎಸ್ ಭಾರೀ ಹೊಡೆತ ಕೊಟ್ಟಿದಂತೂ ಸತ್ಯ.