ಡಿಕೆಶಿ ಜತೆ ದಿವ್ಯಾ ಹಾಗರಗಿ ಫೋಟೋ ತೆಗೆಸಿಕೊಂಡ ಹಿಂದಿನ ರಹಸ್ಯ ಬಯಲು

By Suvarna News  |  First Published May 7, 2022, 3:42 PM IST

* ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜತೆ ದಿವ್ಯಾ ಹಾಗರಗಿ ಫೋಟೋ
* ಫೋಟೋ ತೆಗೆಸಿಕೊಂಡ ಹಿಂದಿನ ರಹಸ್ಯ ಬಯಲು
* ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ


ಬೆಂಗಳೂರು, (ಮೇ.07): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಪ್ರಮುಖ ಆರೋಪಿಯಾಗಿದ್ದು, ಅವರು ರಾಜಕೀಯ ನಾಯಕರೊಂದಿಗೆ ಫೋಟೋಗಳು ಇದೀಗ ಭಾರೀ ಸಂಚಲನ ಮೂಡಿಸಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ರಮೇಶ್ ಜಾರಕಿಹೊಳಿ ಸೇರಿದಂತೆ ಇತರೆ ಪ್ರಮುಖ ಘಟಾನುಘಟಿ ನಾಯಕರೊಂದಿಗೆ ಫೋಟೋಗಳು ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗಿನ ಫೋಟೋ ಒಂದು ಸಿಕ್ಕಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಕಾರ್ಯಕರ್ತೆಯಾಗಿರುವ ದಿವ್ಯ ಹಾಗರಗಿ ಡಿಕೆಶಿ ಜೊತೆ ಏಕೆ ಫೋಟೋ ತೆಗೆಸಿಕೊಂಡಿದ್ದಾರೆ. ಯಾವ ಸಂದರ್ಭದಲ್ಲಿ ಮೀಟ್ ಆಗಿದ್ರು ಅಂತೆಲ್ಲಾ ಪ್ರಶ್ನೆಗಳು ಉದ್ಭವಿಸಿದ್ದವು. ಇದೀಗ ದಿವ್ಯಾ ಹಾಗೂ ಡಿಕೆಶಿ ಪೋಟೋ ಹಿಂದಿನ ರಹಸ್ಯ ಬಯಲಾಗಿದೆ.

Latest Videos

undefined

ಡಿಕೆಶಿ ಜತೆಗೆ ದಿವ್ಯಾ ಹಾಗರಗಿ ಫೋಟೋ ವೈರಲ್: ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ

ಡಿಕೆಶಿ-ದಿವ್ಯಾ ಹಾಗರಗಿ ಫೋಟೋ ರಹಸ್ಯ ಬಯಲು
ಹೌದು... ದಿವ್ಯಾ ಹಾಗರಗಿ ರಾಜಕೀಯ ಮುಖಂಡರೊಂದಿಗೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಹಿಂದಿನ ರಹಸ್ಯ ಬಯಲಾಗಿದೆ. ಡಿ.ಕೆ ಶಿವಕುಮಾರ್ ಮನೆಗೆ ಬಂದು ಹಾಗರಗಿ ಫೋಟೋ ಕೂಡ ತೆಗಿಸಿಕೊಂಡಿದ್ಲು ಈ ಬಗ್ಗೆ ಪ್ರಶ್ನಿಸಿದಾಗ ಡಿ.ಕೆ ಶಿವಕುಮಾರ್, ಮನೆಗೆ ಬಂದವರು ಫೋಟೋ ತೆಗಿಸಿಕೊಳ್ತಾರೆ ಅದ್ರಲ್ಲಿ ಏನಿದೆ ಎಂದಿದ್ದರು. ಅದು ನಿಜ, ದಿವ್ಯಾ ಹಾಗರಗಿ ಪದೇ ಪದೇ ಡಿ.ಕೆ ಶಿವಕುಮಾರ್ ಮನೆಗೆ ಬರ್ತಾ ಇದ್ದಳು. ತನ್ನ ಕಾರ್ಯ ಸಿದ್ಧಿಗಾಗಿ, ಒಮ್ಮೆ ಮಾತ್ರ ಬಂದಿದಲ್ಲ ಸಾಕಷ್ಟು ಬಾರಿ ಬಂದಿದ್ದಾಳೆ. ಅದು ತನ್ನ ಕಾಲೇಜ್ ತೆರೆಯಲು ಪರವಾನಿಗೆ ಪಡೆಯೋದಕ್ಕಾಗಿ ಎಂಬ ಸತ್ಯ ಇದೀಗ ಬಯಲಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿ.ಕೆ ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್ ಅವರೇ ದಿವ್ಯಾ ಹಾಗರಗಿ ನರ್ಸಿಂಗ್ ಕಾಲೇಜ್‍ಗೆ ಪರವಾಗಿನಿಗೆ ನೀಡಿದ್ದರು. ಈ ಪರವಾನಿಗೆ ಪಡೆಯಲು ದಿವ್ಯಾ ಹಾಗರಗಿ, ಡಿ.ಕೆ ಶಿವಕುಮಾರ್ ಮನೆಗೆ ಬಂದಿದ್ದಳು.

ಡಿಕೆಶಿ ತಿರುಗೇಟು ನೀಡಿದ್ದ ಬಿಜೆಪಿ
ಯೆಸ್...ದಿವ್ಯಾ ಹಾಗರಗಿ, ಬಿಜೆಪಿ ನಾಯಕರ ಜತೆ  ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಆಕೆಗೆ ದೊಡ್ಡ-ದೊಡ್ಡವರ ಲಿಂಕ್ ಇದೆ. ಪಿಎಸ್‌ಐ ನೇಮಕಾತಿಯಲ್ಲಿ ಭರ್ಜರಿ ಡೀಲ್ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಪ್ರಮುಖ ನಾಯಕರು ಸಾಥ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ದೂರಿತ್ತು. ಬಳಿಕ ಡಿಕೆಶಿ ಜತೆ ದಿವ್ಯಾ ಫೋಟೋ ಬಯಲಿಗೆ ಬರುತ್ತಿದ್ದಂತೆಯೇ ಬಿಜೆಪಿ ಐಟಿ ಸೆಲ್ ಕಾಂಗ್ರೆಸ್‌ಗೆ ತಿರುಗೇಟು ನೀಡಿತ್ತು..ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಪಿಎಸ್‌ಐ ಅಕ್ರಮ ಪ್ರಕರಣ ಆರೋಪಿ ಇದ್ದಾರೆ. ಹಾಗಾದ್ರೆ, ಈ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪಿಸಿತ್ತು.

'ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಕಾಂಗ್ರೆಸ್‌ ಆಪಾದಿಸಿತ್ತು. ಆದರೆ ಈ ಚಿತ್ರ ಬೇರೆ ಏನನ್ನೋ ಹೇಳುತ್ತಿದೆ' ಎಂದು ಟ್ವೀಟ್‌ ಮಾಡಿದ್ದು, ಕಾಂಗ್ರೆಸ್ ಅಧ್ಯಕ್ಷರು ಎಷ್ಟು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ ನೋಡಿ. ಕಾಂಗ್ರೆಸ್ ಪಕ್ಷದ ಯಾರ್ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು‌ ಪ್ರಿಯಾಂಕ್‌ ಖರ್ಗೆ ವಿವರಿಸಬಹುದೇ?. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಅವರು ನಡೆಸುತ್ತಿರುವ ಪ್ರತಿಯೊಂದು ಷಡ್ಯಂತ್ರ್ಯಕ್ಕೂ ಈಗ ದಾಖಲೆ ಲಭಿಸುತ್ತಿದೆ. ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರಕ್ಕೆ ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರದ ಬಂಗಲೆಯೇ ಪ್ರಮುಖ ಅಡ್ಡ' ಎಂದು ಆರೋಪಿಸಿತ್ತು.
 

click me!