ವಿಸ್ತರಣೆ ಮುಗಿದಿದ್ರೂ ಇದ್ದಕ್ಕಿದ್ದಂತೆ ಶಾ ಭೇಟಿ ಮಾಡಿದ ಶ್ರೀರಾಮುಲು, ಅಸಲಿ ಕಾರಣ ಏನು?

By Suvarna News  |  First Published Feb 9, 2020, 11:53 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಮಾಡಿದ ಶ್ರೀರಾಮುಲು/ ಸಚಿವ ಸಂಪುಟ ವಿಸ್ತರಣೆ ಮುಗಿದ ಮೇಲೆ ಭೇಟಿ ಮಾಡಿದ ಸಚಿವ/ ಬಳ್ಳಾರಿ ಉಸ್ತುವಾರಿ ಸ್ಥಾನಕ್ಕೆ ಬೇಡಿಕೆ ಇಟ್ಟರೆ?


ನವದೆಹಲಿ[ಫೆ. 09] ರಾಜ್ಯ ಆರೋಗ್ಯ ಸಚಿವ ಬಿ ಶ್ರೀರಾಮುಲು  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿ ರಾಂುಲು ತಮ್ಮ ಮಗಳ ಮದುವೆಗೆ ಆಹ್ವಾನ ನೀಡಿದ್ದಾರೆ.

ಈ ಬಗ್ಗೆ ರಾಮುಲು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. ಡಿಸಿಎಂ ಪಟ್ಟದ ವಿಚಾರ ಸದ್ಯಕ್ಕೆ ತಣ್ಣಗಾಗಿದ್ದರೂ  ಬಳ್ಳಾರಿ ಜಿಲ್ಲಾ ಉಸ್ತುವಾರಿ ಬಗ್ಗೆ ಮಾತನ್ನಾಡಿದ್ದಾರೆ ಎನ್ನಲಾಗಿದೆ.

Tap to resize

Latest Videos

undefined

ಯಾರಿಗೆ ಯಾವ ಖಾತೆ;  ಗುಟ್ಟು ಕೊಟ್ಟ ಬಿಎಸ್‌ವೈ

ಶ್ರೀರಾಮಲು ಅಮಿತ್ ಶಾ ಅವರನ್ನು ಸುಲಭವಾಗಿ ಭೇಟಿ ಮಾಡಿದ್ದರ ಬಗ್ಗೆಯೂ ಕೆಲ ಪ್ರಶ್ನೆಗಳು ಉದ್ಭವವಾಗಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಅಮಿತ್ ಶಾ ಅವರನ್ನು ಭೇಟಿ ಮಾಡಲು ಸಾಹಸ ಪಡುತ್ತಿರುವಾಗ ಶ್ರೀರಾಮಲು ಇಷ್ಟು ಸುಲವಾಗಿ ಹೇಗೆ ಭೇಟಿ ಮಾಡಿದರು ಎಂಬ ಮಾತು ಕೇಳಿ ಬಂದಿದೆ.

click me!