ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಗಮನ ಸೆಳೆಯಲು ಶುಕ್ರವಾರ ತೀರ್ಥಹಳ್ಳಿಗೆ ಭೇಟಿ ನೀಡಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್ ಹಸಿ ಅಡಕೆ ಹಾರ ಮತ್ತು ಅಡಕೆ ಪೇಟವನ್ನು ಸಿದ್ಧಗೊಳಿಸಲಾಗಿದೆ. ಇದೇ ಪ್ರಥಮ ಬಾರಿಗೆ ಈ ಹಸಿ ಅಡಕೆಯ ಬೃಹತ್ ಹಾರವೊಂದನ್ನು ಅರ್ಪಿಸಲಾಗುತ್ತಿದೆ.
ಶಿವಮೊಗ್ಗ (ಫೆ.24) : ಅಡಕೆ ಬೆಳೆಗಾರರ ಸಮಸ್ಯೆ ಕುರಿತು ಗಮನ ಸೆಳೆಯಲು ಶುಕ್ರವಾರ ತೀರ್ಥಹಳ್ಳಿಗೆ ಭೇಟಿ ನೀಡಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್ ಹಸಿ ಅಡಕೆ ಹಾರ ಮತ್ತು ಅಡಕೆ ಪೇಟವನ್ನು ಸಿದ್ಧಗೊಳಿಸಲಾಗಿದೆ. ಇದೇ ಪ್ರಥಮ ಬಾರಿಗೆ ಈ ಹಸಿ ಅಡಕೆಯ ಬೃಹತ್ ಹಾರವೊಂದನ್ನು ಅರ್ಪಿಸಲಾಗುತ್ತಿದೆ.
ಜೆಡಿಎಸ್ ಯುವ ನಾಯಕ(JDS Youth leader), ಉದ್ಯಮಿ ಮಹೇಂದ್ರಗೌಡ ಅಂಬಳಿಕೆ(Mahendra gowda ambalike) ಅವರ ನೇತೃತ್ವದಲ್ಲಿ ಸ್ನೇಹಿತರ ಬಳಗ ಕಳೆದೊಂದು ವಾರದಿಂದ ಈ ಹಾರ ತಯಾರಿಕೆಯಲ್ಲಿ ಮಗ್ನರಾಗಿದ್ದು, ಇದೀಗ ಹಾರ ಸಿದ್ಧಗೊಂಡಿದೆ. ತೀರ್ಥಹಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ವತಃ ಮಹೇಂದ್ರಗೌಡ ಅವರೇ ಈ ಹಾರ ಅರ್ಪಿಸಲಿದ್ದಾರೆ.
ಇಂದಿರಾ ಕ್ಯಾಂಟೀನ್ ಒಂದೊಂದೇ ಮುಚ್ಚುತ್ತಿವೆ; ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲವಾ?
ಮಲೆನಾಡಿನ(Malenadu) ಆರ್ಥಿಕ ಮೂಲವಾದ ಅಡಕೆ ಬೆಳೆ(Arecanut crop) ಇತ್ತೀಚಿನ ವರ್ಷಗಳಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದೆ. ಹಲವು ರೋಗಗಳು ಬೆಳೆಯನ್ನು ಬಾಧಿಸುತ್ತಿದ್ದು, ರೈತರು(Farmers) ಕಂಗಾಲಾಗಿದ್ದಾರೆ. ಗಾಯದ ಮೇಲೆ ಉಪ್ಪು ಸುರಿದಂತೆ ಕಳೆದ ವರ್ಷದಿಂದ ಕಾಣಿಸಿಕೊಂಡ ಅಡಕೆ ಎಲೆಚುಕ್ಕಿ ರೋಗ(Leaf spot disease) ರೈತರನ್ನು ಇನ್ನಷ್ಟುಹೈರಾಣು ಮಾಡಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumaraswamy) ಅವರಿಗೆ ಹಸಿ ಅಡಕೆ ಹಾರ ಅರ್ಪಿಸಲಾಗುತ್ತಿದೆ ಎಂದು ಮಹೇಂದ್ರಗೌಡ ಹೇಳುತ್ತಾರೆ.
ಸುಮಾರು 350 ಕೆ.ಜಿ. ತೂಕದ ಈ ಹಾರದಲ್ಲಿ ಸುಮಾರು 20 ಸಾವಿರ ಅಡಕೆ ಕಾಯಿಗಳಿದ್ದು, ಒಂದು ವಾರದ ಕಾಲ ಈ ಹಾರವನ್ನು ತಯಾರು ಮಾಡಲಾಗಿದೆ. ಮಲೆನಾಡಿನ ಅಡಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ರೈತರು ತೀವ್ರ ಅಳಲು ತೋರಿಸುತ್ತಿದ್ದರೂ ಯಾರೂ ಇದರ ಬಗ್ಗೆ ಗಮನಹರಿಸಿಲ್ಲ. ಸಮಸ್ಯೆಯನ್ನು ಬಗಹರಿಸಲು ನೈಜಕಾಳಜಿ ಎಲ್ಲಿಂದಲೂ ಬಂದಿಲ್ಲ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಆಗಲಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಮತ್ತು ಅವರಿಂದ ಇದು ಸಾಧ್ಯವಾಗುವ ಕಾರಣ ಈ ಹಾರವನ್ನು ಅವರಿಗೆ ಅರ್ಪಿಸುತ್ತಿದ್ದೇವೆ. ಇದು ಅಭಿಮಾನಿಯ ಅಭಿಮಾನದ ಹಾರ ಎನ್ನುತ್ತಾರೆ ಮಹೇಂದ್ರಗೌಡ ಅಂಬಳಿಕೆ ಅವರು.
ಹಳ್ಳಿಗಳಿಗೆ ಹೋದರೆ ಡಬಲ್ ಎಂಜಿನ್ ವೈಫಲ್ಯ ತಿಳಿಯುತ್ತೆ: ಎಚ್‌ಡಿಕೆ
ಹಸಿ ಅಡಕೆ ಹಾರದ ಜೊತೆಗೆ ಒಣಅಡಕೆಯಿಂದ ಅಳುಬಳ್ಳಿ ಪ್ರವೀಣ್ ಅವರು ತಯಾರಿಸಿರುವ ಪೇಟವನ್ನು ಕೂಡ ಅರ್ಪಿಸಲಾಗುತ್ತದೆ.