ರಾಮನಗರದಲ್ಲಿ ಜೆಡಿಎಸ್‌ ಸೋಲಿಸಲು ಪ್ಲಾನ್: ಆತಂಕ ವ್ಯಕ್ತಪಡಿಸಿದ ಎಚ್‌ಡಿಕೆ

By Suvarna News  |  First Published Apr 5, 2021, 9:51 PM IST

ರಾಮನಗರದಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಆತಂಕಪಡಿಸಿದ್ದಾರೆ.


ರಾಮನಗರ, (ಏ.05): ಕಾಂಗ್ರೆಸ್ ಮುಖಂಡರ ವಕ್ರ ದೃಷ್ಟಿ ನಮ್ಮ ಕ್ಷೇತ್ರಕ್ಕೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಸ್ವತಃ ನಾನೇ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ‌ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ರಾಮನಗರ, ಚನ್ನಪಟ್ಟಣ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಸೋಮವಾರ ರಾಮನಗರದಲ್ಲಿ ಅಲ್ಪಸಂಖ್ಯಾತ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. "ಈ ಹಿಂದೆ ನಡೆಯುತ್ತಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಥಳೀಯ ಮುಖಂಡರು ನೇತೃತ್ವ ವಹಿಸುತ್ತಿದ್ದರು. ಆದರೆ ಈ ಭಾರಿ ಈ ಕ್ಷೇತ್ರದ ಮೇಲೆ ಕೆಲ ಕಾಂಗ್ರೆಸ್ ಮುಖಂಡರ ವಕ್ರ ದೃಷ್ಟಿ ಬಿದ್ದಿದೆ" ಎಂದು ಕುಮಾರಸ್ವಾಮಿ ಆರೋಪಿಸಿದರು.

Tap to resize

Latest Videos

ಆರೋಪಗಳ ಸುರಿಮಳೆ : ಜನರಲ್ಲಿ ಮನವಿ ಮಾಡ್ಕೊಂಡ ಶಾಸಕಿ ಅನಿತಾ

ಹೇಗಾದರೂ ಮಾಡಿ ರಾಮನಗರದಲ್ಲಿ ಜೆಡಿಎಸ್ ಸೋಲಿಸುವ ಹುನ್ನಾರ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ನಾನು ಅದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಪ್ರಸ್ತುತ ರಾಮನಗರ ಶಾಸಕಿಯಾಗಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರು ಇದ್ದಾರೆ. ಆದ್ರೆ, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

click me!