ವಾಜಪೇಯಿ, ಕೆಸಿಆರ್ ಎಲ್ಲ ನಿಖಿಲ್‌ನಂತೆ ಮೊದಲ ಚುನಾವಣೆಯಲ್ಲಿ ಸೋತವರೇ: ಎಚ್ಡಿಕೆ

Published : May 18, 2023, 01:34 PM ISTUpdated : May 18, 2023, 01:52 PM IST
ವಾಜಪೇಯಿ, ಕೆಸಿಆರ್ ಎಲ್ಲ ನಿಖಿಲ್‌ನಂತೆ ಮೊದಲ ಚುನಾವಣೆಯಲ್ಲಿ ಸೋತವರೇ: ಎಚ್ಡಿಕೆ

ಸಾರಾಂಶ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ, ದೃತಿಗೆಡುವುದಿಲ್ಲ.ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆಗೆ ನಿಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ವಾಜಪೇಯಿ, ಕೆಸಿಆರ್ ಎಲ್ಲ ನಿಖಿಲ್‌ನಂತೆ ಮೊದಲ ಚುನಾವಣೆಯಲ್ಲಿ ಸೋತವರು: ಎಚ್ಡಿಕೆ

ಚನ್ನಪಟ್ಟಣ (ಮೇ.18) : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ, ದೃತಿಗೆಡುವುದಿಲ್ಲ.ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಜೊತೆಗೆ ನಿಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಚುನಾವಣಾ ಸೋಲಿನ ಪರಾಮರ್ಶೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ನಿರೀಕ್ಷೆ ಹುಸಿಯಾಗಿದೆ, ಮಾಧ್ಯಮಗಳ ನಿರೀಕ್ಷೆ ನಿಜವಾಗಿದೆ. ನಾನು‌ ಕಳೆದ 6ತಿಂಗಳಿಂದ ಶ್ರಮಪಟ್ಟು ಕೆಲಸ ಮಾಡಿದ್ದೆ.
ಪಂಚರತ್ನ ಯೋಜನೆಗಳು ಜನರಿಗೆ ಹಿಡಿಸಲಿಲ್ಲ ಅನ್ಸುತ್ತೆ. ಕಾಂಗ್ರೆಸ್‌ನ ಗ್ಯಾರೆಂಟಿಗಳ ನಂಬಿ ಮತಹಾಕಿದ್ದಾರೆ‌. ಪಕ್ಷದ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಚುನಾವಣೆಯಲ್ಲಿ ಏನೆಲ್ಲಾ ಆಗಿದೆ ಅನ್ನೊದರ ಬಗ್ಗೆ ಮಾಹಿತಿ ಕಲೆ ಹಾಕ್ತೇನೆ ಎಂದರು.

ಕರ್ನಾಟಕ ವಿಧಾನಸಭೆ ಚುನಾವಣೇಲಿ ಹೀನಾಯ ಸೋಲು: ಜೆಡಿಎಸ್‌ ಅಭ್ಯರ್ಥಿಗಳಿಗೆ ದೇವೇಗೌಡ ಪತ್ರ

ಈ ರೀತಿಯ ಫಲಿತಾಂಶ ನಮ್ಮ ಪಕ್ಷಕ್ಕೆ ಹೊಸದೇನಲ್ಲ. ದೇವೇಗೌಡರು ಎರಡು ಬಾರಿ ಸೋತ ಬಳಿಕವೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿತ್ತು. ಜನ ಮುಂದಿನ ದಿನಗಳಲ್ಲಿ ಮತ್ತೆ ಜೆಡಿಎಸ್ ಬೇಕು ಅಂತ ಬಯಸ್ತಾರೆ. ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹೀನಾಯ ಸೋಲು ಕಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎನ್ನುವ ನಡೆವಳಿಕೆ ಹಾಗೂ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಆ ಭಾಗದಲ್ಲಿ ಸೋತಿದೆ. ಇದರ ಜೊತೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರೆಂಟಿ ನಂಬಿ ಜನರು ಮತಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾರೆಂಟಿ ಭರವಸೆಗಳನ್ನು ಈಡೇರಿಸುತ್ತಾರಾ ನೋಡೋಣ. ನಮಗಿಂತ ಅವರು ದೊಡ್ಡವರಲ್ವೆ? ಎಲ್ಲಾ ಲೆಕ್ಕಾಚಾರ ಮಾಡೇ ಸ್ಕೀಂ ಮಾಡಿರ್ತಾರೆ. ಮೊದಲು ಫ್ರೀ ಅಂತ ಹೇಳಿ ಈಗ ಕೆಲವೊಂದು ಷರತ್ತು ಹಾಕ್ತಿದ್ದಾರೆ. ನೋಡೊಣ ಮುಂದೆ ಏನ್ ಮಾಡ್ತಾರೆ ಅಂತ. ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ.

ಡಿಕೆಶಿ ಸಿಎಂ ಆಗಬೇಕು ಎಂದ ಒಕ್ಕಲಿಗ ಸ್ವಾಮೀಜಿ ಸಮುದಾಯದಿಂದ ಒತ್ತಾಯ ಕೇಳಿಬಂದಿದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಏನೋ ಅಭಿಮಾನದಲ್ಲಿ ನಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕು ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಡಿಕೆಶಿ ಪರ ಬ್ಯಾಟ್ ಬೀಸಿದ ಹೆಚ್ಡಿಕೆ. ಇವತ್ತು ಜಾತಿ ಜಾತಿ ನಡುವೆ ಈ ರೀತಿ ಮಾಡಿದ್ರೆ ಸಂಘರ್ಷ ಏರ್ಪಡುತ್ತೆ. ಯಾರೇ ಮುಖ್ಯಮಂತ್ರಿ ಆದ್ರೂ ಒಂದು ಸಮಾಜದ ಸಿಎಂ ಆಗಬಾರದು. ಇಡೀ ರಾಜ್ಯದ ಆರೂವರೆ ಕೋಟಿ ಜನರ ಸಮಸ್ಯೆಗಳನ್ನ ಬಗೆಹರಿಸುವ ಸಿಎಂ ಆಗಬೇಕು ಎಂದು ಅಭಿಪ್ರಾಯಪಟ್ಟರು.

ನಾನೇ ಪಕ್ಷ ಸಂಘಟಿಸುವುದಾಗಿ ಪಂಚೆಕಟ್ಟಿನಿಂತ ದೇವೇಗೌಡ! ಸಮಾಧಾನ ಮಾಡಿದ ಕುಮಾರಸ್ವಾಮಿ

ರಾಮನಗರದಲ್ಲಿ ನಿಖಿಲ್ ಸೋಲಿನ ವಿಚಾರ ಸಂಬಂಧ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಅವರು, ಅದೀಗ ಮುಗಿದ ಅಧ್ಯಾಯ, ಅದರ ಬಗ್ಗೆ ಚರ್ಚೆ ಬೇಡ. ಎಂತಹ ಘಟಾನುಘಟಿ ನಾಯಕರೇ ಸೋತಿದ್ದಾರೆ. ಸೋತು ದೇಶದಲ್ಲಿ ಒಳ್ಳೆಯ ಹೆಸರು ಸಂಪಾದನೆ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು. ವಾಜಪೇಯಿ, ಕೆಸಿಆರ್ ಇವರೆಲ್ಲ ಮೊದಲನೇ ಚುನಾವಣೆಯಲ್ಲಿ ಸೋತವರೇ. ಇವತ್ತು ಸೋತಿರಬಹುದು ಆದರೆ ಅದೇ ಜನರು ಮುಂದಿನ ದಿನಗಳಲ್ಲಿ ಅವರನ್ನ ಬೆಳೆಸ್ತಾರೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವನ್ನ ಸಮಾನವಾಗಿ ತೆಗೆದುಕೊಳ್ಳಬೇಕು ಎಂದರು.

ಎಚ್‌ಡಿಕೆ ನಿಮ್ಮನ್ನು ನಂಬಿ ಸ್ಪರ್ಧಿಸಿದ್ದರು, ನೀವು ಕೈಬಿಡಲಿಲ್ಲ: ನಿಖಿಲ್ ಕುಮಾರಸ್ವಾಮಿ

:ಎಚ್‌ಡಿ ಕುಮಾರಸ್ವಾಮಿ ಅವರು ನಿಮ್ಮನ್ನು ನಂಬಿ ಸ್ಪರ್ಧೆ ಮಾಡಿದ್ದರು. ಅವರ ನಂಬಿಕೆ ಹುಸಿಯಾಗಲಿಲ್ಲ. ನೀವು ಕೈಹಿಡಿದಿದ್ದೀರಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ(Pancharatna rathayatre) ಮಾಡಿದರು.  ಅವರು ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು‌. 
ಎಚ್‌ಡಿಕೆ ಗೆಲ್ಲುತ್ತಾರೆಂದು ನನಗೆ ಭರವಸೆ ಇತ್ತು.

ಇಲ್ಲಿ ಸುನಾಮಿಯನ್ನೇ ಎಬ್ಬಿಸಿದರು. ಯುವಕರು ರೈತರು ಎಲ್ಲ ಕೈಹಿಡಿದರು. ಕುಮಾರಣ್ಣನ ಮೇಲಿನ ಜನರ ಪ್ರೀತಿ ಕಂಡು ಬೆರಗಾದೆ. ನಿಷ್ಠಾವಂತ ಕಾರ್ಯಕರ್ತರು ಅತಿ ಹೆಚ್ಚು ಇರುವುದು ಚನ್ನಪಟ್ಟಣದ ಲ್ಲೇ.  ರಾಮನಗರ ಜಿಲ್ಲೆಯಲ್ಲೇ ನಿಷ್ಠಾವಂತ ಕಾರ್ಯಕರ್ತರು‌ ಇಲ್ಲಿದ್ದಾರೆ ಎಂದರು. ಇದೇ ವೇಳೆ ರಾಮನಗರ ಸೋಲಿನ ವಿಚಾರದ ಬಗ್ಗೆ ಪಕ್ಷಾತೀತವಾಗಿ ಜನ  ಬೇಸರ ವ್ಯಕ್ತಪಡಿಸಿದ್ದಾರೆ.

 ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ರಾಮನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೂ ನನಗೆ ಸೋಲುಂಟಾಗಿದೆ. ನಾನು ಸೋತಿರಬಹುದು ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅದು ವರ್ಣಿಸಲು ಸಾಧ್ಯವಿಲ್ಲ. ಎಂದಿಗೂ ನಾನು ರಾಮನಗರದ ಜನತೆಗೆ ಚಿರಋಣಿ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ‌. ನಿಮ್ಮ ಜತೆ ಇರುತ್ತೇನೆ
ಸೋಲು ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲನನಗಿನ್ನೂ ವಯಸ್ಸಿದೆ, ದೇವೇಗೌಡರು, ಕುಮಾರಸ್ವಾಮಿಯವರಂತೆ ಜನಸೇವೆ ಮಾಡುತ್ತೇನೆ ಎಂದ ನಿಖಿಲ್ ಕುಮಾರಸ್ವಾಮಿ


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದನದ ಗೌರವ ಎತ್ತಿಹಿಡಿಯಿರಿ: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಿವಿಮಾತು
ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ