
ಕೋಲಾರ(ನ.19): 2006ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಚಿತ್ರಾವತಿ ಅಣೆಕಟ್ಟೆ ಉದ್ಘಾಟನೆಗೆ ಬಂದಾಗ ಯರಗೋಳ್ ಡ್ಯಾಂನ್ನು ಕಟ್ಟಲು 250 ಕೋಟಿ ರು.ಗಳನ್ನು ಮಂಜೂರು ಮಾಡಿದ್ದು ನಮ್ಮ ಸರ್ಕಾರ. ಆ ಡ್ಯಾಂಗೂ ಬೆಂಗಳೂರಿನ ಕೊಳಚೆ ನೀರು ತುಂಬಿದ್ದು ನಿಮ್ಮ ಸಾಧನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ರಮೇಶ್‌ಕುಮಾರ್ ವಿರುದ್ಧ ಮಾಜಿ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮುಳಬಾಗಿಲಿನಲ್ಲಿ ನಿನ್ನೆ(ಶುಕ್ರವಾರ) ಜೆಡಿಎಸ್ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೋಸ ಮಾಡಲು ಮಿತಿ ಇರುತ್ತೆ, ಬೆಂಗಳೂರು ಕೊಳಚೆ ನೀರಿನಿಂದಾಗಿ ಇಲ್ಲಿಯ ಟೊಮೆಟೋ, ತರಕಾರಿ ಮಾರಾಟ ಆಗುತ್ತಿಲ್ಲ. ಇದು ಸಿದ್ದರಾಮಯ್ಯ ಮತ್ತು ರಮೇಶ್‌ಕುಮಾರ್ ಈ ಜಿಲ್ಲೆಗೆ ನೀಡಿದ ಕೊಡುಗೆ ಎಂದು ಅವರು ವ್ಯಂಗ್ಯವಾಡಿದರು.
Assembly Election 2023: ಕೋಲಾರ ಕಾಂಗ್ರೆಸ್‌ನಲ್ಲಿ ಸಮಸ್ಯೆ ಇದೆ- ಸಿದ್ದರಾಮಯ್ಯರಿಗೆ ಮುನಿಯಪ್ಪ ಸಲಹೆ
ಜೆಡಿಎಸ್‌ಗೆ ಆಶೀರ್ವಾದ ಮಾಡಿ
ಮೂರನೇ ಭಾರಿಗೆ ಸಂಪೂರ್ಣ ಆಶಿರ್ವಾದ ಮಾಡಿ. ಜನಪರ ಆಡಳಿತಕ್ಕೆ ಬೆಂಬಲ ನೀಡಿ, ಬಿಜೆಪಿಯೂ ವಿಫಲವಾಗಿದೆ. 2006ರಲ್ಲಿ ಸರ್ಕಾರದ ನಡೆಸಿದಾಗ ಬಿಜೆಪಿಯ ನಾಯಕರೊಂದಿಗೆ ಚರ್ಚಿಸಿ ಸರ್ಕಾರ ನಡೆದಿದೆ. ಈಗ ಬಿಜೆಪಿಗೆ ಮೋದಿಯವರೊಂದು ದೆಹಲಿಯಿಂದ ಲಕೋಟೆ ಬರಬೇಕು. ಇದು ಆಮಿತ್ ಶಾ ಮತ್ತು ನರೇಂದ್ರ ಮೋದಿ ಪಕ್ಷ. ಯಡಿಯೂರಪ್ಪ ಕಷ್ಟಪಟ್ಟು ಮುಖ್ಯಮಂತ್ರಿ ಯಾಗಿದ್ದರು, ಅವರಿಗೆ ಮೋಸ ಮಾಡಿದರು, ವೀರಶೈವರಿಗೆ ಮೋಸ ಮಾಡಿದರು, ಅವರನ್ನು ಕೆಳಗಿಳಿಸಿದರು ಬೊಮ್ಮಾಯಿ ರಬ್ಬರ್ ಸ್ಟಾಂಪ್ ಇದ್ದಂತೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕೋವಿಡ್‌ನಿಂದಾಗಿ, ಮಳೆಯಿಂದಾಗಿ ಸಂಕಷ್ಟಕ್ಕೀಡಾದವರಿಗೆ ಯಾವ ರೀತಿ ಸ್ಪಂದಿಸಬೇಕು ಎನ್ನುವ ಚಿಂತನೆ ನಮ್ಮ ಪಕ್ಷ ಮಾಡಿದೆ. ನಮ್ಮ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ನಿರೀಕ್ಷೆಗಳ ಕಾರ್ಯಕ್ರಮ ನೀಡುವುದೇ ಪಂಚರತ್ನ ರಥಯಾತ್ರೆ ಉದ್ದೇಶ ಎಂದರು.
ಭಾಗ್ಯಗಳು ಬಡವರಿಗೆ ನೆರವಾಗಲಿಲ್ಲ
ಪಂಚರತ್ನ ಯಾತ್ರೆ ದೇವರ ಕಾರ್ಯ. ಆರೂವರೆ ಕೋಟಿ ಜನರ ಕಷ್ಟಪ್ರತಿದಿನ ನೋಡುತಿದ್ದೇನೆ. ಸಿದ್ದರಾಮಯ್ಯನವರೆ ಈ ಪಕ್ಷ ಉಳಿಸಲು ಬಡವರಿದ್ದಾರೆ. ನಿಮ್ಮ ಭಾಗ್ಯಗಳಿಂದ ಇವರ ಬದುಕು ಹಸನಾಗಲಿಲ್ಲ. ಜಾತ್ಯತೀತ ಜನತಾದಳ ಕೇವಲ ರೈತರ ಬಗ್ಗೆ ಮಾತಾಡುತ್ತೆ ಎಂಬ ಭಾವನೆ ಬಿಟ್ಟುಬಿಡಿ. ವೆಂಕಟಶಿವಾರೆಡ್ಡಿ ಕಳೆದ ಭಾರಿ ಸೋಲಲು ಕಾರಣ ಡಿಸಿಸಿ ಬ್ಯಾಂಕ್‌ನಿಂದ ನೀಡಿದ ಸಾಲ, ರೈತರ ಸಾಲದ ಮನ್ನಾ ಮಾಡಿದ ನಂತರ ಸ್ತ್ರೀ ಸಾಲ ಮನ್ನಾ ಮಾಡುವ ಉದ್ದೇಶ ಇತ್ತು. ಅಷ್ಟರಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ನಮ್ಮ ಸರ್ಕಾರ ಉರುಳಿಸಿದರು ಎಂದು ಹೇಳಿದರು.
ಅವರ ಹೇಳಿಕೆಗೆ ಮಹತ್ವ ಇಲ್ಲ - ನಾನು ಕಾಂಗ್ರೆಸ್ ಸೇರಿದಾಗಿಂದ ಮಾತಾಡಿಲ್ಲ : ಸುಧಾಕರ್
ಎತ್ತಿನಹೊಳೆ ಹೆಸರಿನಲ್ಲಿ 13 ಸಾವಿರ ಕೋಟಿ ಖರ್ಚಾದರೂ ಒಂದು ಹನಿನೀರು ತಂದಿದ್ದೀರಾ. ರಮೇಶ್ ಕುಮಾರ್ ಜನರ ಹಣವನ್ನು ನಿಮ್ಮ ಕಿಸೆ ತುಂಬಿಕೊಂಡಿದ್ದೀರೆ, ನನ್ನ ಮುಂದೆ ಬಂದು ಚರ್ಚೆ ಮಾಡಲಿ ಈ. ವಿಚಾರವಾಗಿ ಎಂದು ಕುಮಾರಸ್ವಾಮಿ ಸವಾಲ್ ಹಾಕಿದರು.
ಬಿಜೆಪಿ ಜತೆ ಸಿದ್ದು ಒಳ ಒಪ್ಪಂದ
ಇವತ್ತು ರಾಜ್ಯದಲ್ಲಿ ನಡೀತಾ ಇರೋ ಬಿಜೆಪಿ ಸರ್ಕಾರ ಯಾರದ್ದು, ಸಿದ್ದರಾಮಯ್ಯನವರ ಸರ್ಕಾರ ಅದು. ಈಗ ಹೇಳ್ತಾರೆ ಲಜ್ಜೆಗೆಟ್ಟಸರ್ಜಾರ ಅಂತಾ, ಯಾರಪ್ಪಾ ಈ ಸರ್ಕಾರ ತಂದವರು, ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಸರ್ಕಾರ ತಂದವರು ಸಿದ್ದರಾಮಯ್ಯ. ಅಧಿಕಾರಕ್ಕೆ ಅಂತಾ ಅರ್ಜಿ ಹಿಡಿದುಕೊಂಡು ಯಾರದ್ದೋ ಮನೆಬಾಗಿಲಿಗೆ ಹೋದವರಲ್ಲ ನಾವು. ಜೆಡಿಎಸ್ ಅವಕಾಶ ವಾದಿ ಪಕ್ಷ ಅಂತಾ ಟೀಕೆ ಮಾಡ್ತಾರೆ. ಈ ದರಿದ್ರ ಸರ್ಕಾರ ಬರಲು ಕಾರಣ ಸಿದ್ದರಾಮಯ್ಯ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.