ಕ್ಷೇತ್ರ ಸಿಗದೆ ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ: ಶ್ರೀರಾಮುಲು

By Kannadaprabha News  |  First Published Nov 19, 2022, 1:00 AM IST

ಚಾಮುಂಡಿ ಕ್ಷೇತ್ರದಲ್ಲಿ ಸೋಲುತ್ತೇನೆ ಎಂಬ ಭಯದಿಂದ ಬಾದಾಮಿಗೆ ಬಂದು ಅಲ್ಪ ಮತಗಳಿಂದ ಗೆದ್ದರು. ಈ ಬಾರಿ ಬಾದಾಮಿಯಲ್ಲಿ ಸೋಲುವ ಭಯ ಕಾಡಲಾರಂಭಿಸಿದ್ದು, ಮತ್ತೊಂದು ಕ್ಷೇತ್ರದ ಕಡೆ ಹುಡುಕಾಟ ನಡೆಸುತ್ತಿದ್ದಾರೆ: ಶ್ರೀರಾಮುಲು


ಬಳ್ಳಾರಿ(ನ.19): ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕ್ಷೇತ್ರದ ಹುಡುಕಾಟದಲ್ಲಿ ಅಲೆಮಾರಿಯಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.

ಶುಕ್ರವಾರ ಸುದ್ದಿಗಾರರ ಜತೆಗೆ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯ ನಾಯಕರು ಅಂತಾರೆ. ಆದರೆ, ಪಾಪ ರಾಜ್ಯ ನಾಯಕರಿಗೆ ಸ್ಪರ್ಧೆ ಮಾಡಲು ಸೂಕ್ತ ಕ್ಷೇತ್ರವೇ ಸಿಗುತ್ತಿಲ್ಲ. ಹೀಗಾಗಿ ಅಲ್ಲಲ್ಲಿ ಹುಡುಕಾಟ ನಡೆಸಿದ್ದಾರೆ. ಚಾಮುಂಡಿ ಕ್ಷೇತ್ರದಲ್ಲಿ ಸೋಲುತ್ತೇನೆ ಎಂಬ ಭಯದಿಂದ ಬಾದಾಮಿಗೆ ಬಂದು ಅಲ್ಪ ಮತಗಳಿಂದ ಗೆದ್ದರು. ಈ ಬಾರಿ ಬಾದಾಮಿಯಲ್ಲಿ ಸೋಲುವ ಭಯ ಕಾಡಲಾರಂಭಿಸಿದ್ದು, ಮತ್ತೊಂದು ಕ್ಷೇತ್ರದ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ಒಮ್ಮೆ ಕೋಲಾರ ಅಂತಾರೆ ಮತ್ತೊಮ್ಮೆ ಇನ್ಯಾವುದೋ ಕ್ಷೇತ್ರ ಎನ್ನುತ್ತಾರೆæ ಎಂದು ಕುಟುಕಿದರು. ಈ ಬಾರಿಯೂ ಮತ್ತೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, ಮೊದಲು ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ, ಎಲ್ಲಿಂದ ಅರ್ಜಿ ಹಾಕಿದ್ದಾರೆ ಎಂಬುದು ಸ್ಪಷ್ಟವಾಗಲಿ. ಬಳಿಕ ನಾನು ಎಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷ ನಿರ್ಧರಿಸುತ್ತದೆ ಎಂದರು.

Tap to resize

Latest Videos

undefined

Ballari Politics: ರೆಡ್ಡಿ ಕುಟುಂಬದ ವಿರುದ್ಧ ಸಿಡಿದೆದ್ದ ಬಿಜೆಪಿ ಮುಖಂಡ!

ಎಂದರಲ್ಲದೆ, ಸಿದ್ದರಾಮಯ್ಯ ರಾಜ್ಯ ನಾಯಕರು ಅವರು ಎಲ್ಲಿ ನಿಂತರೂ ಗೆಲ್ಲಬೇಕು ಅಲ್ಲವೇ? ಅದ್ಹೇಕೆ ಕ್ಷೇತ್ರಕ್ಕಾಗಿ ಅಲೆದಾಟ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದರು.
 

click me!