* ಹರಿಹರದಲ್ಲಿ ನಡೆದ ಐತಿಹಾಸಿಕ ಜೆಡಿಎಸ್ ಜನತಾ ಜಲಧಾರೆ
* ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಎಚ್‌ಡಿಕೆ
* ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಬಿಚ್ಚಿಟ್ಟ ಕುಮಾರಸ್ವಾಮಿ
ವರದಿ - ವರದರಾಜ್
ದಾವಣಗೆರೆ (ಮೇ.8): ಹರಿಹರದಲ್ಲಿ ನಡೆದ ಐತಿಹಾಸಿಕ ಜೆಡಿಎಸ್ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರ್ಜರಿ ಚುನಾವಣಾ ಭಾಷಣ ಮಾಡಿದ್ದಾರೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಏನೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತೇವೆ.ಈಗಿನ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದಲ್ಲಿ ಏನು ಮಾಡುತ್ತಿವೆ ಎಂಬುದನ್ನು ಕುಮಾರಸ್ವಾಮಿ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕಳೆದ 16 ನೇ ತಾರೀಖಿನಿಂದ ಕಳಸಾ ಜಲಧಾರೆ ಹೋದೆಲೆಲ್ಲಾ ಮಳೆ ಸುರಿಯುತ್ತಿದೆ. ಕಳೆದ 75 ವರ್ಷಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಸರ್ಕಾರಗಳು ಕೃಷಿಕ ಕುಟುಂಬಗಳನ್ನು ನಿರ್ಲಕ್ಷಿಸಿವೆ. ಕೇಂದ್ರ ಸರ್ಕಾರ ಕಾನೂನುಗಳು ನಮ್ಮ ನೀರು ಬಳಕೆಗೆ ಅಡೆತಡೆಯಾಗಿವೆ.ಜಗಳೂರಿಗೆ ಮೊನ್ನೆ ಮುಖ್ಯಮಂತ್ರಿ ಗಳು ಬಂದಾಗ ಅಪ್ಪರ್ ಭದ್ರಾ ಯೋಜನೆಗೆ 24 ಸಾವಿರ ಕೋಟಿ ತರುವುದಾಗಿ ಭರವಸೆ ನೀಡಿದರು.
ಸಿದ್ದರಾಮಯ್ಯಗೆ ಟಕ್ಕರ್ ಕೊಡಲು ಜೆಡಿಎಸ್ ಸಜ್ಜು, ಎಚ್‌ಡಿಕೆಗೆ ಬಾದಾಮಿಯೇ ಟಾರ್ಗೆಟ್
ಜಗಳೂರು ಕೆರೆ ನೀರು ತುಂಬಿಸುವುದಕ್ಕೆ ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಸಿರಿಗೆರೆ ಶ್ರೀಗಳಿಗೆ ಗೌರವ ಕೊಟ್ಟು ಒಪ್ಪಿಗೆ ಕೊಟ್ಟಿರುವುದು ಕಡತದಲ್ಲಿದೆ. ಆದ್ರೆ ನಾನು ಮಾಡಿರುವ ಯೋಜನೆಗಳನ್ನು ಹೇಳುವ ಹೃದಯ ವೈಶಾಲ್ಯತೆ ಕಾಂಗ್ರೆಸ್ ಬಿಜೆಪಿ ಪಕ್ಷಕ್ಕಿಲ್ಲ.ಒಮ್ಮೆ 18 ತಿಂಗಳು ಮತ್ತೊಮ್ಮೆ 14 ತಿಂಗಳು ಮುಖ್ಯಮಂತ್ರಿ ಆದಾಗ ಈ ನಾಡಿನ ನೀರಾವರಿ ಯೋಜನೆಗಳಿಗೆ ಕನಿಷ್ಠ 4 ಲಕ್ಷ ಕೋಟಿ ಅವಶ್ಯಕತೆ ಇದೆ. ಕಳೆದ ಕೊವಿಡ್ ನ ಎರಡು ವರ್ಷದ ಅವಧಿಯಲ್ಲಿ ಬಡವರ ಕಷ್ಟ ಪರದಾಟ ಸಾವು ನೋವು ನೋಡಿದ್ದೇನೆ.ಈ ರಾಜ್ಯದ ಕಷ್ಟ ನೋಡಿ ಕೆಲವು ಕಾರ್ಯಕ್ರಮಗಳನ್ನು ಚಿಂತನೆ ನಡೆಸಿದ್ದೇನೆ. 15 ಕಳಸಗಳ ವಾಹನದ ಮೂಲಕ 51 ಉಪನದಿಗಳ ನೀರನ್ನು 91 ಕಡೆ ಸಂಗ್ರಹಿಸಿ ಚುನಾವಣೆ ಮುಗಿಯುವವರೆಗೆ ಬೆಂಗಳೂರಿನಲ್ಲಿ ಧಾರ್ಮಿಕ ಪೂಜೆ ಮಾಡಿ ಆ ಗಂಗಾ ಮಾತೆಯನ್ನು ರೈತನಹೊಲಕ್ಕೆ ಹರಿಸುವ ಶಪತ ಮಾಡಿದ್ದೇನೆ.ಕೇಂದ್ರ ಸರ್ಕಾರಕ್ಕೆ ಯಾವುದೇ ಅರ್ಜಿ ಹಾಕದೇ 4 ಲಕ್ಷ ಕೋಟಿ ಯೋಜನೆಯನ್ನು ಐದು ವರ್ಷಗಳಲ್ಲಿ ಪೂರೈಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಕನಕಲಕ್ಷೀ ಧನ ಲಕ್ಷ್ಮಿ ಯನ್ನು ಲೂಟಿ ಮಾಡಿ ಕರ್ನಾಟಕವನ್ನು ದರಿದ್ರ ಲಕ್ಷ್ಮೀಯನ್ನು ಮಾಡಲು ಹೊರಟಿದ್ದಾರೆ.ಆದ್ರೆ ಇದಕ್ಕೆಅವಕಾಶ ಕೊಡುವುದಿಲ್ಲ. ಯಾವುದೇ ಕೇಂದ್ರದ ಸಹಾಯವಿಲ್ಲದೇ ನೀರಾವರಿ ಯೋಜನೆಗಳನ್ನು ಮುಗಿಸುತ್ತೇನೆ.ಮುಗಿಸದಿದ್ದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದರು.ಬಬಲೇಶ್ವರ ದಲ್ಲಿ ಮಾಜಿ ಮುಖ್ಯಮಂತ್ರಿ ಗಳು ಎಲ್ಲಾ ನೀರಾವರಿ ಯೋಜನೆಗಳನ್ನು ಮುಗಿಸುತ್ತೇನೆಂದರು ಆದ್ರೆ ಅವರು ಐದು ವರ್ಷಗಳಲ್ಲಿ ಏಕೆ ಮುಗಿಸಲಿಲ್ಲ.ಕಳೆದ ಚುನಾವಣೆಯಲ್ಲಿ ರೈತರ ಸಾಲಮನ್ನಾ ಮಾಡುತ್ತೇನೆಂದಾಗ ಅಪಹಾಸ್ಯ ಮಾಡಿದರು. ದೇವರ ಆರ್ಶೀವಾದ ಹಿರಿಯರ ಆರ್ಶಿವಾದದಿಂದ ಮುಖ್ಯಮಂತ್ರಿ ಆದೆ.ಸಂಪೂರ್ಣ ಸಾಲ ಮನ್ನಾ ಮಾಡಿ ಅವರ ಕಾರ್ಯ ಮುಂದುವರಿಸಿದೆ. 14 ತಿಂಗಳಲ್ಲಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಇತಿಹಾಸ.ಆದ್ರು ನಮ್ಮ ಪಕ್ಷವನ್ನು ಸೋಲಿಸುತ್ತೀರಿ ನಾನು ಏನು ತಪ್ಪು ಮಾಡಿದ್ದೇನೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಗರಣಗಳ ಬಗ್ಗೆ ಕುಟುಕಿದ ಎಚ್‌ಡಿಕೆ
ಪ್ರತಿಯೊಂದು ಕೆಲಸಕ್ಕೆ ಶೇ 40 % ಸರ್ಕಾರ ವನ್ನು ನೋಡುತ್ತಿದ್ದೀರಿ.ಒಬ್ಬ ಕಂಟ್ರಾಕ್ಟರ್ ಆತ್ಮಹತ್ಯೆಯನ್ನು ಮಾಡಿಕೊಂಡ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾದ್ರು ಕಾಂಗ್ರೆಸ್ ಬಿಜೆಪಿ ಪಕ್ಷದವರು ನಾನು ಕಮಿಷನ್ ತಗೊಂಡಿದ್ದಾರೆ ಎಂದು ಚರ್ಚೆ ಮಾಡುತ್ತಿದ್ದಾರಾ..??. ನಾನು ಇವರಂಗೆ ಕಮಿಷನ್ ತಗೊಂಡಿದ್ದರೆ 25 ಸಾವಿರ ಕೋಟಿಗೆ 10 ಸಾವಿರ ಕೋಟಿ ಕಮಿಷನ್ ಹೊಡಿಬೇಕಿತ್ತು. ಆದ್ರೆ ಬಿಜೆಪಿ ಕಾಂಗ್ರೆಸ್ ರೀತಿ ನಾನು ಮಾಡಿಲ್ಲ ಎಂದು ಕಿಡಿಕಾರಿದರು.
ನಾನು ಸಹ ಲೂಟಿ ಹೊಡೆದು ಮತದಾರರಿಗೆ 3 ಸಾವಿರ 4 ಸಾವಿರ ಹಂಚಿ ಗೆದ್ದುಕೊಂಡು ಬರ್ರಿ ಅಂತ ಹೇಳಬಹುದಿತ್ತು ಆದ್ರೆ ಆ ರೀತಿ ಮಾಡಿಲ್ಲ. ದಯವಿಟ್ಟು ನಮ್ಮ ಸಂಕಲ್ಪವನ್ನು ಅರ್ಥಮಾಡಿಕೊಳ್ಳಿ. ಜೆಡಿಎಸ್ ಪಂಚರತ್ನ ದ ಕಾರ್ಯಕ್ರಮದ ರೂಪುರೇಷೆಯನ್ನು ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತೇನೆ.ತೀರ್ಮಾನ ನಿಮ್ಮದು. ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಪಬ್ಲಿಕ್ ಶಾಲೆ ನಾನು ಘೋಷಣೆ ಮಾಡಿದೆ. ಜನ ಅದನ್ನೆ ಈಗ ಕೇಳುತ್ತಿದ್ದಾರೆ.ಪಂಚ ರತ್ನ ಕಾರ್ಯಕ್ರಮದಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವ ಉಚಿತ ಶಿಕ್ಷಣವನ್ನು ನೀಡುವುದು ನನ್ನ ಮೊದಲ ಆಧ್ಯತೆ.ಯುಕೆಜಿಯಿಂದ 12 ನೇ ತರಗತಿವರೆಗು ನಿಮ್ಮ ಮನೆ ಬಾಗಿಲಿಗೆ ಉಚಿತ ಶಿಕ್ಷಣ ಕೊಡುತ್ತೆನೆ. ಎರಡನೇ ಕಾರ್ಯಕ್ರಮ ಆರೋಗ್ಯ ಕ್ಕೆ ಮೀಸಲು. ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ 30 ಹಾಸಿಗೆಯುಳ್ಳ ಉಚಿತ ಆಸ್ಪತ್ರೆ ತೆರೆದು ಎಲ್ಲಾ ರೀತಿಯ ಚಿಕಿತ್ಸೆಯನ್ನು ಕೊಡಲು ವ್ಯವಸ್ಥೆ ಮಾಡುತ್ತೇನೆ. ರೈತರ ಸಾಲ ಮನ್ನಾ ಮಾಡುವುದು, ಕೃಷಿ ಮಾಡಲು ರೈತರು ಸಾಲಗಾರರಾಗಬಾರದೆಂದು ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಚುನಾವಣೆ ಇನ್ನು 10 ತಿಂಗಳು ಇದೆ ರೈತ ಸಾಲಗಾರರದಂತೆ ಪ್ರತಿ ಹಳ್ಳಿ ಯಲ್ಲು ಎಲ್ಲಾ ಹಳ್ಳಿಗಳಲ್ಲಿ ಎಲ್ ಇ ಡಿ ಮೂಲಕ ಮಾಹಿತಿ ನೀಡುತ್ತೇನೆ. ಕರಪತ್ರ ಮೂಲಕ ಮಾಹಿತಿ ನೀಡುತ್ತೇನೆ ಎಂದರು.
ಸ್ತ್ರೀ ಶಕ್ತಿ ಸಂಘಗಳ 1 ಸಾವಿರ ಕೋಟಿ ಸಾಲ ಮನ್ನಾಮಾಡುತ್ತೇನೆ.25 ಸಾವಿರ ಕೋಟಿ ಸಾಲ ಮನ್ನಾ ಮಾಡಿದವನಿಗೆ ಅದು ಕಷ್ಟವಲ್ಲ. ನಿಮ್ಮ ಹಳ್ಳಿಗಳ ಲ್ಲಿ ಹಲವಾರು ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ವ್ಯವಸ್ಥೆ ಮಾಡುತ್ತೇನೆ. ನಮ್ಮ ಯುವಕರು ಬೆಂಗಳೂರಿಗೆ ಹೋಗುವುದನ್ನು ತಪ್ಪಿಸುತ್ತೇನೆ. 90 ಪರ್ಸೆಂಟ್ ಸಬ್ಸಿಡಿ ಕೊಡುವ ಕಾರ್ಯಕ್ರಮ ಸಿದ್ದ ಮಾಡಿದ್ದೇನೆ ಎಂದು ತಿಳಿಸದರು.
ನಿಮ್ಮ ಹಳ್ಳಿಗಳಲ್ಲಿ ಉದ್ಯೋಗ ಆಧರಿತ ಕೈಗಾರಿಕೆ ಸ್ಥಾಪಿಸಲು ಕ್ರಮ. ಪ್ರತಿ ಕುಟುಂಬಕ್ಕೊಂದು ಉದ್ಯೋಗ, ಪ್ರತಿ ಕುಟುಂಬಕ್ಕು ಒಂದು ಸ್ವಂತ ಮನೆ ಕೊಡಬೇಕೆಂದು ಕನಸು ಕಂಡಿದ್ದೇನೆ.ಇಲ್ಲಿನ ತೆರಿಗೆ ಹಣವನ್ನು ನಾವು ದೆಹಲಿಗೆ ಕೊಡಬೇಕಿಲ್ಲ, ಜಾತಿಯ ವ್ಯಾಮೋಹ ಬಿಡಿ ನನಗೆ ಅಧಿಕಾರ ಕೊಡಿ.ನಾನು ಮುಖ್ಯಮಂತ್ರಿ ಆಗೋದು ದೇವರ ಇಚ್ಛೆ ನಿಮ್ಮ ಹೃದಯದಲ್ಲಿ ಒಂದು ಶಾಶ್ವತ ಸ್ಥಾನಬೇಕು.ನೀವು ನನ್ನ ಆಸ್ತಿ ಎಂದ ಕುಮಾರಸ್ವಾಮಿ. ನನಗೆ ರಾಜಕಾರಣದಲ್ಲಿ ಹಣ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕು ಸರ್ಕಾರ ಲೂಟಿ ಮಾಡುವುದಕ್ಕೆ ಬಿಡುವುದಿಲ್ಲ.ಎಷ್ಟೋ ಕುಟುಂಬಗಳಲ್ಲಿ ಆಸ್ತಿ ಪಾಸ್ತಿಹಣ ಕೊಟ್ಟು ಉದ್ಯೋಗ ಕ್ಕೆ ಕೊಟ್ಟರು ಇದರಲ್ಲಿ ಹಗರಣ ಆಗಿರೋದಕ್ಕೆ ತನಿಖೆಯನ್ನು ನಿಲ್ಲಿಸಿದರು.ಈಗ ಈಸಕೊಂಡವನು ವೀರಭದ್ರ, ಕೊಟ್ಟವನು ಕೊಡಂಗಿ. ಹಣ ಕೊಟ್ಟವನು ಹೇಗೆ ವಸೂಲು ಮಾಡುತ್ತಾನೆ..ಅವನು ಮತ್ತೇ ಹಣ ಮಾಡಲು ಬಡವರ ಜೇಬಿಗೆ ಕತ್ತರಿ ಬೀಳುತ್ತದೆ.
ಶಾಸಕನೊಬ್ಬ ಸಬ್ ಇನ್ಸ್‌ಪೆಕ್ಟರ್ ಮೇಲೆ ದರ್ಬಾರ್ ಮಾಡಿರೋದು ನೋಡಿದ್ರೆ. ಸರ್ಕಾರಿ ಅಧಿಕಾರಿಗಳು ಇವರ ಗುಲಾಮರಾ.. ಒಬ್ಬ ಶಾಸಕನು ಈ ರೀತಿ ಮಾಡಬಹುದಾ. ಪಾಪ ಹಿಂದಿನ ಸರ್ಕಾರ ನನ್ನನ್ನು ಬಿಜೆಪಿ ಬಿ ಟೀಮ್ ಎಂದು ಮಾತನಾಡಿದ್ರು. ಬಿಜೆಪಿ ಬಿ ಎಂದವರು ಏನು ಸಾಧನೆ ಮಾಡಿದ್ರು.ಈ ಭ್ರಷ್ಟಾಚಾರ ಸರ್ಕಾರ ಬರೋದಕ್ಕೆ ಯಾರು ಕಾರಣ.ಬಿಜೆಪಿ ಸರ್ಕಾರದ್ದು ಬ್ರಹ್ಮಾಂಡ ಭ್ರಷ್ಟಾಚಾರ ಅಂತಾ ಭಾಷಣ ಬೀಗಿತಿದಾರೆ.
ಕರ್ನಾಟಕ ಒಂದು ಶಾಂತಿಯ ನಾಡು ಕುವೆಂಪು ಹುಟ್ಟಿದ ನಾಡು ನಮ್ಮದು. ಹಿಂದೂ ಸಮಾಜದಲ್ಲಿ ನಾನು ಹುಟ್ಟಿದ್ದೇನೆ. ಪವಿತ್ರ ಜಲವನ್ನು ಸಂಗ್ರಹ ಮಾಡಿ ಪೂಜೆಮಾಡುತ್ತಿದ್ದೇನೆ.
ಹಿಂದೂ ಮುಸ್ಲಿಂ ಭಾವೈಕ್ಯದ ಮಾತು ಆಡಿದ ಕುಮಾರಸ್ವಾಮಿ
ನಾವೆಲ್ಲಾ ಅಣ್ಣತಮ್ಮಂದಿರಂತೆ ಬದುಕಬೇಕು. ಹಿಂದೂತ್ವ ಹಿಂದೂತ್ವ ಅಂತಾ ಏನ್ ಸಾಧನೆ ಮಾಡತಿರಾ. ಈ ರಾಜ್ಯದಲ್ಲಿ ಒಬ್ಬ ಬ್ಲಾಕ್ ಲೀಸ್ಟ್ ಮಾಡಿದ ಗುತ್ತಿಗೆದಾರ ಒಂದು ಗಂಟೆಗೆ 52 ಕೋಟಿ ಸಂಪಾದನೆ ಮಾಡುತ್ತಿದ್ದಾನೆ. ಅದು ಬಿಜೆಪಿ ಸರ್ಕಾರದ ಕೊಡುಗೆ. ನಾವು ಬೆಳಿಗ್ಗೆ ಎದ್ದರೆ ಪ್ರಾರ್ಥನೆ ಮಾಡಿ ಹೊರಬರುತ್ತೇವೆ.ಅಧಿಕಾರಕ್ಕಾಗಿ ಬಿಜೆಪಿ ಕಾಂಗ್ರೆಸ್ ನವರು ಏನ್ ಬೇಕಾದ್ರು ಮಾಡ್ತಾರೆ. ಬಿಜೆಪಿಯವರು ಬೆಂಕಿ ಇಟ್ಟರೆ ಕಾಂಗ್ರೆಸ್ ನವರು ಪೆಟ್ರೋಲ್ ಸುರಿತಾರೆ. ಒಂದು ಬಾರಿ ಕನ್ನಡಿಗೋಸ್ಕರ, ನೆಲ ಜಲ ಭಾಷೆ ಉಳಿಯಲು ಒಂದು ಬಾರಿ ಜೆಡಿಎಸ್ ಗೆ ಒಂದು ಅವಕಾಶ ಕೊಡಿ. ಜಾತಿ ವ್ಯಾಮೋಹ ಬಿಟ್ಟು ಒಂದು ಬಾರಿ ಅವಕಾಶಕೊಡಿ ಎಂದು ಪರಿ ಪರಿಯಾಗಿ ಮನವಿ ಮಾಡಿದರು.
ನಾನು ಆಕಸ್ಮಿಕ ವಾಗಿ ಮುಖ್ಯಮಂತ್ರಿ ಆದವನು. ಒಂದು ಬಾರಿ ನನಗೆ ಸಂಪೂರ್ಣ ಅವಕಾಶಕೊಡಿ.ನೀವೆ ಬೆಳೆಸಿರುವ ಈ ಪಕ್ಷವನ್ನು ಅಧಿಕಾರಕ್ಕೆ ತನ್ನಿ.ಇಬ್ರಾಹಿಂ ರನ್ನು ಅದ್ಯಕ್ಷರನ್ನಾಗಿ ಮಾಡಿರುವುದು ಮುಸ್ಲಿಂ ರನ್ನು ಓಲೈಸಿಕೊಳ್ಳಲು ಅಲ್ಲ. ಅವರು ಮರಳಿ ಮನೆಗೆ ಬಂದಿದ್ದಾರೆ. ಅನ್ ಡಿಕ್ಲೇರ್ ಎಮರ್ಜೆನ್ಸಿ ಇದೆ ದೇಶದಲ್ಲಿ ಇದೆ. ಕರ್ನಾಟಕದಿಂದಲೇ ಅನ್ ಡಿಕ್ಲೇರ್ ಎಮರ್ಜೆನ್ಸಿ ಯನ್ನು ಕೊನೆಗೊಳಿಸೋಣ. ಇನ್ನು ಎಲೆಕ್ಷನ್ 10 ತಿಂಗಳಿದೆ ನೀವು ಮನಸ್ಸು ಮಾಡಿ ಎಂದು ಮನವಿ ಮಾಡಿದರು.