ಬಿಎಸ್‌ವೈರನ್ನು ಜೈಲಿಗಟ್ಟಲು ಎಚ್‌ಡಿಕೆ ಹೋರಾಡಿದ್ರು: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Apr 20, 2024, 10:38 AM IST

ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಎಚ್‌.ಡಿ.ಕುಮಾರಸ್ವಾಮಿ ನಿರಂತರ ಹೋರಾಟ ನಡೆಸಿದ್ದರು. ಅಂದು ಶತ್ರುವಿನಂತೆ ಕಾಣುತ್ತಿದ್ದವರು ಈಗ ಮಿತ್ರನಂತೆ ನೋಡುತ್ತಿದ್ದಾರೆ. 
 


ಮಂಡ್ಯ (ಏ.20): ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಎಚ್‌.ಡಿ.ಕುಮಾರಸ್ವಾಮಿ ನಿರಂತರ ಹೋರಾಟ ನಡೆಸಿದ್ದರು. ಅಂದು ಶತ್ರುವಿನಂತೆ ಕಾಣುತ್ತಿದ್ದವರು ಈಗ ಮಿತ್ರನಂತೆ ನೋಡುತ್ತಿದ್ದಾರೆ. ಜೆಡಿಎಸ್‌ ನಿರಂತರವಾಗಿ ಅವಕಾಶವಾದಿ ರಾಜಕಾರಣ ಮಾಡಿಕೊಂಡು ಬರುತ್ತಿರುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ನಗರದ ಕನಕ ಭವನದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತ ಸಭೆಯಲ್ಲಿ ಮಾತನಾಡಿದರು.

ಅಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲು ಅವಕಾಶ ನೀಡದ ನೀವು ಯಾವ ನೈತಿಕತೆ ಇಟ್ಟುಕೊಂಡು ಲಿಂಗಾಯತರ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು. ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿದ್ದಿರಿ. ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಗುರುತರವಾದ ಯಾವುದಾದರೂ ಕೊಡುಗೆ ನೀಡಿದ್ದರೆ ಹೇಳಿ ನೋಡೋಣ. ಕುಮಾರಸ್ವಾಮಿಯವರೇ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಶೂನ್ಯ. ನನಗೊಂದು ಅವಕಾಶ ಕೊಡಿ ಎಂದು ಕೇಳಿ ತಪ್ಪಿಲ್ಲ. ಆದರೆ, ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುತ್ತೇನೆಂಬ ಸುಳ್ಳು ಭರವಸೆ ನೀಡಬೇಡಿ. 

Tap to resize

Latest Videos

ಎಚ್‌ಡಿಕೆ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವ ಡಿಕೆಶಿಗೆ ಮಾತನಾಡುವ ನೈತಿಕತೆ ಇಲ್ಲ: ಎಚ್.ವಿಶ್ವನಾಥ್

ಸಂಸತ್‌ ಪ್ರವೇಶ ನಿಮಗೆ ಇದೇ ಮೊದಲಲ್ಲ. ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಿಂದಲೂ ಆಯ್ಕೆಯಾಗಿದ್ದಿರಿ. ಮಳವಳ್ಳಿಯ ಜನರು ನಿಮಗೆ ಓಟು ಕೊಟ್ಟಿದ್ದರು. ಆ ಸಮಯದಲ್ಲೇ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬಹುದಿತ್ತಲ್ಲ. ಅಂದು ಮಳವಳ್ಳಿ, ಕನಕಪುರ, ರಾಮನಗರ ಕಾವೇರಿ ಕಣಿವೆ ವ್ಯಾಪ್ತಿಗೆ ಸೇರಿದ್ದು ನಿಮಗೆ ಗೊತ್ತಿರಲಿಲ್ಲವೇ ಎಂದು ನಯವಾಗಿಯೇ ಟೀಕಿಸಿದರು. ಕಾಂಗ್ರೆಸ್‌ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ವೀರಶೈವ, ಒಕ್ಕಲಿಗರ, ಹಿಂದುಳಿದ ವರ್ಗ, ದಲಿತರಿಗೆ ಪ್ರಾಧಾನ್ಯತೆಯನ್ನು ನೀಡುತ್ತಾ ಬಂದಿದೆ. ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಎಲ್ಲ ವಗದ ಜನರನ್ನು ತಲುಪುತ್ತಿವೆ ಎಂದರು.

ಜನರು ಗೌರವ, ಅಧಿಕಾರ ಕೊಟ್ಟಾಗಿದೆ: ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜನರು ಏನೆಲ್ಲಾ ಗೌರವ, ಅಧಿಕಾರ ಕೊಡಬೇಕಿತ್ತೋ ಎಲ್ಲವನ್ನೂ ಕೊಟ್ಟಾಗಿದೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಮಣ್ಣಹಳ್ಳಿ, ಚಿಣ್ಯ, ಹೊಣಕೆರೆ, ಬ್ರಹ್ಮದೇವರಹಳ್ಳಿ, ಕಾಂತಾಪುರ ಹಾಗೂ ಬೋಗಾದಿ ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಸೋಮವಾರ ತಡ ರಾತ್ರಿವರೆಗೂ ಪ್ರಚಾರ ನಡೆಸಿ ಮಾತನಾಡಿ, ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ ಕೇವಲ ಸಂಸದರಾಗಬಹುದು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದರೆ ಸರ್ಕಾರದ ಜೊತೆಗೂಡಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂದರು.

ಕೂಪ ಮಂಡೂಕ ಅರಗ ಜ್ಞಾನೇಂದ್ರಗೆ ಹುಚ್ಚು ಹಿಡಿದಿದೆ: ಕೆ.ಎಸ್.ಈಶ್ವರಪ್ಪ ಆಕ್ರೋಶ

ಕುಮಾರಸ್ವಾಮಿ ದೊಡ್ಡವರು. ಅವರು ರಾಜ್ಯ ನಾಯಕರಾಗಿರುವುದರಿಂದ ಜನಸಾಮಾನ್ಯರೊಂದಿಗೆ ಬೆರೆಯಲು ಕಷ್ಟವಾಗುತ್ತದೆ. ಅದೇ ಸ್ಟಾರ್ ಚಂದ್ರು ಗೆದ್ದರೆ ಪ್ರತಿನಿತ್ಯ ಜನಸಾಮಾನ್ಯರ ಕೈಗೆ ಸಿಗುತ್ತಾರೆ ಎಂದರು. ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ಇದೇ ತಾಲೂಕಿನ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿರುವ ನನಗೆ ಜಿಲ್ಲೆಯ ರೈತರ ಕಷ್ಟ ಏನೆಂಬುದು ಗೊತ್ತಿದೆ. ಚಿಕ್ಕ ವಯಸ್ಸಿನಲ್ಲಿ ನಾನೂ ಸಹ ಜಮೀನು ಉಳುಮೆ ಮಾಡಿದ್ದೇನೆ. ನಾನೂ ಕೂಡ ಒಬ್ಬ ರೈತ. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸಲು ದುಡಿಯುವ ಕೈಗಳಿಗೆ ಕೆಲಸುವ ಕನಸು ನನ್ನದಾಗಿದೆ. ಚುನಾವಣೆಯಲ್ಲಿ ನನಗೆ ಆಶೀರ್ವದಿಸಬೇಕೆಂದು ಮತಯಾಚಿಸಿದರು.

click me!