ನಮಗಿದು ಕೊನೆ ಚುನಾವಣೆ ಎಂದಿದ್ದ ನಿಖಿಲ್ ಹೇಳಿಕೆಗೆ ಕುಮಾರಸ್ವಾಮಿ ಕೊಟ್ರು ಸ್ಪಷ್ಟನೆ!

By Suvarna NewsFirst Published Sep 12, 2022, 4:55 PM IST
Highlights

ನಮಗಿದು ಕೊನೆ ಚುನಾವಣೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಕೆಗೆ ಇದೀಗ ಮಾಜಿ ಸಿಎಂ ಜೆಡಿಎಸ್‌ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್.12): 2023ರ ಚುನಾವಣೆಯೇ ನಮ್ಮ ಪಾಲಿಗೆ ಕೊನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಅಲ್ಲದೇ ಬೇರೆ-ಬೇರೆ ರೀತಿಯ ರಾಜಕೀಯ ಚರ್ಚೆಗಳು ಶುರುವಾಗಿದೆ.

ಇದರ ಬೆನ್ನಲ್ಲೇ ಇದೀಗ ಪುತ್ರನ ಹೇಳಿಕೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿ, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

2023ರ ಚುನಾವಣೆಯೇ ನಮ್ಮ ಪಾಲಿಗೆ ಕೊನೆ: ಹೊಸ ಬಾಂಬ್ ಸಿಡಿಸಿದ ನಿಖಿಲ್ ಕುಮಾರಸ್ವಾಮಿ

ವಿಧಾನಸೌಧದಲ್ಲಿ ಇಂದು(ಸೋಮವಾರ) ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಮ್ಮದು ಚಿಕ್ಕ ಪಕ್ಷ. ರಾಜ್ಯದಲ್ಲಿ ಕೆಲವೇ ಶಾಸಕರಿದ್ದಾರೆ. 2023ರ ಚುನಾವಣೆ ಜೆಡಿಎಸ್ ಗೆ ಅಗ್ನಿಪರೀಕ್ಷೆಯಾಗಿದೆ. ಅಡಿಪಾಯ ಹಾಕುವ ರೀತಿ ಹೋರಾಟ ಮಾಡುತ್ತೇವೆ. ಹೆಚ್ಚುಕಮ್ಮಿ ಏನಾದ್ರೂ ಆದ್ರೆ ಪಕ್ಷಕ್ಕೆ ಹಿನ್ನಡೆಯಾಗತ್ತೆ. ಹಾಗಾಗಿ ನಿಖಿಲ್ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದು ಎಂದು ಸ್ಪಷ್ಟಪಡಿಸಿದರು.

ನಿಖಿಲ್ ಹೇಳಿದ್ದೇನು?
ಕುಣಿಗಲ್, ತುಮಕೂರು: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ತುಮಕೂರು  ಜಿಲ್ಲೆಯ ಕುಣಿಗಲ್  ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್‌ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು (JDS Workers) ಉದ್ದೇಶಿಸಿ ಮಾತನಾಡಿ, ಇದು ಜೆಡಿಎಸ್‌ ಪಾಲಿಗೆ ಕೊನೆಯ ಚುನಾವಣೆ ಆದರೂ ಆಗಬಹುದು ಎಂದಿದ್ದರು.

ಜೆಡಿಎಸ್ ಯುವ ನಾಯಕನ ಮಾತು ಕೇಳಿ ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಕೊನೆಗೆ ಎಚ್ಚೆತ್ತ ನಿಖಿಲ್ ಕುಮಾರಸ್ವಾಮಿ, ಇಲ್ಲಿಂದ ಹೊಸ ಅಧ್ಯಾಯ ಆರಂಭ ಆಗಬೇಕು, ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ಎಂದು ಹೇಳಿದ್ದರು.

click me!