ಎಚ್.ಡಿ.ದೇವೇಗೌಡರಿಂದ ಪ್ರಮಾಣ ವಚನ ಸ್ವೀಕಾರ

By Kannadaprabha NewsFirst Published Sep 20, 2020, 11:02 AM IST
Highlights

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ನವದೆಹಲಿ (ಸೆ.20): ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ಮೊದಲ ಬಾರಿಗೆ ಸಂಸತ್‌ನ ಮುಂಗಾರು ಅಧಿವೇಶನ ಭಾನುವಾರ ನಡೆಯುತ್ತಿದೆ. ಶನಿವಾರ ರಾತ್ರಿ ದೆಹಲಿಗೆ ತೆರಳಿದ ದೇವೇಗೌಡ ಅವರು ಇಂದು ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯ​ಸಭೆ ಸಭಾ​ಪ​ತಿ ವೆಂಕಯ್ಯನಾಯ್ಡು ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಅಧಿವೇಶನ ಅವಧಿ ಕಡಿಮೆ ಇರುವ ಕಾರಣ ಭಾನುವಾರವೂ ರಾಜ್ಯಸಭೆ ನಡೆಯುತ್ತಿದೆ. ರಾಜ್ಯಸಭೆಯಲ್ಲಿ ತೆರವಾದ ನಾಲ್ಕು ಸ್ಥಾನಗಳಿಗಾಗಿ ಜೂ.12ರಂದು ನಡೆದ ಚುನಾವಣೆಯಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿಜೆಪಿಯಿಂದ ಈರಣ್ಣ ಕಡಾಡಿ ಮತ್ತು ಅಶೋಕ್‌ ಗಸ್ತಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ಕೋವಿಡ್‌ನಿಂದಾಗಿ ಅಶೋಕ್‌ ಗಸ್ತಿ ಅವರು ನಿಧನರಾಗಿದ್ದಾರೆ.

ವಿವಿಧ ರಾಜ್ಯದಿಂದ ಆಯ್ಕೆಯಾದ 45 ಸದಸ್ಯರು ಜು.22ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಕೆಲ ಕಾರಣಗಳಿಂದಾಗಿ ದೇವೇಗೌಡ ಅವರು ತೆರಳಲು ಸಾಧ್ಯವಾಗರಿಲಿಲ್ಲ.

click me!