
ಹಾಸನ(ಮಾ.27): ‘ನೀವೇ ಬನ್ನಿ, ನೀವೇ ನಿಲ್ಲಬೇಕು’ ಎಂದು ಮಂಡ್ಯದ ಜನ ಹಠ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಎಸ್.ಸಿ.,ಎಸ್.ಟಿ.ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಮಂಡ್ಯದಿಂದ ಕುಮಾರಸ್ವಾಮಿ ಹಾಗೂ ಕೋಲಾರದಿಂದ ಮಲ್ಲೇಶ್ ಬಾಬು ಹೆಸರನ್ನು ಫೈನಲ್ ಮಾಡಲಾಗಿದೆ. ಮಂಡ್ಯದ ಜನರು ಕುಮಾರಸ್ವಾಮಿ ಅವರನ್ನು ಬಿಡುತ್ತಿಲ್ಲ. ನೀವೇ ಬನ್ನಿ ನೀವೇ ನಿಲ್ಲಬೇಕು ಎಂದು ಅಲ್ಲಿನ ಜನ ಹಠ ಮಾಡುತ್ತಿದ್ದಾರೆ. ಕುಮಾರಸ್ವಾಮಿಯವರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದ ಕೂಡಲೇ ಮಂಡ್ಯಕ್ಕೆ ಬನ್ನಿ ಎಂದಿದ್ದಾರೆ. ಇವತ್ತು ಕೋರ್ ಕಮಿಟಿ ಸಭೆಯಲ್ಲೂ ನೀವೇ ನಿಲ್ಲಬೇಕು ಎಂದಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ 2024: ಮಂಡ್ಯದಿಂದ ಲೋಕಸಭೆಗೆ ಕುಮಾರಸ್ವಾಮಿ ಸ್ಪರ್ಧೆ ಖಚಿತ..!
ನಮಗೆ ಕೊಟ್ಟಿರುವುದು 3 ಸೀಟು. ಆದರೆ, ನಾನು ಹಾಗೇ ಅಂದುಕೊಳ್ಳುವುದಿಲ್ಲ. ದೇವೇಗೌಡರು ಏನು ಮಾಡಿದರು ಅನ್ನೋದು ಈ ರಾಜ್ಯದ ಮೂಲೆ ಮೂಲೆಗೆ ಗೊತ್ತಿದೆ. ಬೀದರ್‌ನಲ್ಲಿ ಅಣೆಕಟ್ಟು ಕಟ್ಟಿದವರು ಯಾರು?. ಲಿಫ್ಟ್ ಇರಿಗೇಷನ್ ಮಾಡಿ ನೀರು ಕೊಟ್ಟವರು ಯಾರು?. ನಾನು ಎಂಟು ಮಧ್ಯಮ ನೀರಾವರಿ ಯೋಜನೆ ಮಾಡಿದ್ದೇನೆ. ಈ ಬಗ್ಗೆ ಜಮಾದಾರ್ ಎನ್ನುವವರು ಪುಸ್ತಕ ಕೂಡ ಬರೆದಿದ್ದಾರೆ ಎಂದರು. ರಾಜ್ಯದಲ್ಲಿ 28 ಸ್ಥಾನವನ್ನೂ ಗೆಲ್ಲಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.