Karnataka Politics: ಕಾಂಗ್ರೆಸ್‌ ಸರ್ಕಾರ ಮಾಡಿದ ಸಾಲ ಮೋದಿ ಸರ್ಕಾರ ತೀರಿಸುತ್ತಿದೆ: ಉದಾಸಿ

By Girish Goudar  |  First Published Apr 12, 2022, 9:30 AM IST

*  ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌
*  ವಿಷಾದ ವ್ಯಕ್ತಪಡಿಸಿದ ಸಂಸದ ಶಿವಕುಮಾರ ಉದಾಸಿ
*  2026ರವರೆಗೆ ಇನ್ನೂ 1.5 ಲಕ್ಷ ಕೋಟಿ ರೂಗಳ ಸಾಲ ಮರುಪಾವತಿ ಮಾಡುವುದಿದೆ 
 


ಹಾನಗಲ್ಲ(ಏ.12):  ಕಳೆದ 8 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ     ನೇತೃತ್ವದ ಸರ್ಕಾರ ದಾಖಲೆ ಪ್ರಮಾಣದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದರೂ, ಕಾಂಗ್ರೆಸ್‌ ನಾಯಕರು ಸುಳ್ಳು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ(Shivkumar Udasi) ವಿಷಾದ ವ್ಯಕ್ತಪಡಿಸಿದರು.

ಸೋಮವಾರ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ(Narendra Modi)  ನೇತೃತ್ವದ ಕೇಂದ್ರ ಸರ್ಕಾರ(Central Government) 2014ರಿಂದ 22ರವರೆಗೆ ಆರ್‌ಬಿಐ ಡಾಟಾ ಹೇಳುವಂತೆ . 90.9 ಲಕ್ಷ ಕೋಟಿಗಳನ್ನು ವಿವಿಧ ಕಲ್ಯಾಣ ಕಾರ್ಯಗಳಿಗೆ ಖರ್ಚು ಮಾಡಿದೆ. ಆದರೆ ಯುಪಿಎ ಸರ್ಕಾರ(UPA Government) ಹತ್ತು ವರ್ಷದ ಅವಧಿಯಲ್ಲಿ ಕೇವಲ 49.2 ಲಕ್ಷ ಕೋಟಿ ಖರ್ಚು ಮಾಡಿತ್ತು. ಇದರಲ್ಲಿ . 25 ಲಕ್ಷ ಕೋಟಿಗಳನ್ನು ಆಹಾರಧಾನ್ಯ, ತೈಲ, ಗೊಬ್ಬರದ ಸಬ್ಸಿಡಿ ಮೇಲೆ ಖರ್ಚು ಮಾಡಲಾಗಿದೆ. ಆದರೆ ಯುಪಿಎ ಸರ್ಕಾರ ಕೇವಲ . 14 ಲಕ್ಷ ಕೋಟಿ ಕರ್ಚು ಮಾಡಿತ್ತು. ಇದರೊಂದಿಗೆ . 26.3 ಲಕ್ಷ ಕೋಟಿ ಬಂಡವಾಳ ಮತ್ತು ಆಸ್ತಿ ನಿರ್ಮಾಣಕ್ಕೆ, 10 ಲಕ್ಷ ಕೋಟಿ ರೂಗಳನ್ನು ಆರೋಗ್ಯ, ಶಿಕ್ಷಣ, ಹಾಗೂ ಕೈಗೆಟಕುವ ಗೃಹ ನಿರ್ಮಾಣದಂತಹ ಸಾಮಾಜಿಕ ಸೇವೆಗಳಲ್ಲಿ ಕೇಂದ್ರ ಸರ್ಕಾರ ವಿನಿಯೋಗಿಸಿದೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯ ಮಾಡಿದ್ದರೂ ಕಾಂಗ್ರೆಸ್‌ ನಾಯಕರು ಟೀಕೆಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಪಾದಿಸಿದರು.

Tap to resize

Latest Videos

undefined

ಹುಚ್ಚು ಸ್ವಾಮಿ ಬೆನ್ನತ್ತಿದ್ರೆ ಶಿಗ್ಗಾಂವಿನಲ್ಲಿ ಸಿಎಂ ಉಲ್ಟಾ, ಬೊಮ್ಮಾಯಿಗೆ ಯತ್ನಾಳ್ ಖಡಕ್ ಎಚ್ಚರಿಕೆ

ಇದಲ್ಲದೆ ಹಿಂದೆ ಕಾಂಗ್ರೆಸ್‌(Congress) ನೇತೃತ್ವದ ಯುಪಿಎ ಸರ್ಕಾರ ತೈಲಬಾಂಡ್‌ ಮೂಲಕ ಮಾಡಿದ ಸಾಲವನ್ನೂ ನರೇಂದ್ರ ಮೋದಿ ಸರ್ಕಾರ ಮರುಪಾವತಿ ಮಾಡುತ್ತಿದೆ. ಈಗಾಗಲೇ 94 ಸಾವಿರ ಕೋಟಿ ಸಾಲ ಮರುಪಾವತಿಸಲಾಗಿದೆ. ಮುಂದಿನ ದಿನಗಳಲ್ಲಿ 2026ರವರೆಗೆ ಇನ್ನೂ 1.5 ಲಕ್ಷ ಕೋಟಿ ರೂಗಳ ಸಾಲ ಮರುಪಾವತಿ ಮಾಡುವುದಿದೆ. ಕಾಂಗ್ರೆಸ್‌ ನಾಯಕರು ಸರ್ಕಾರ ನೀಡಿದ ದಾಖಲೆಗಳನ್ನು ನಂಬದಿದ್ದರೆ ಆರ್‌ಬಿಐ ನೀಡಿರುವ ದಾಖಲೆಯನ್ನಾದರೂ ಪರಿಶೀಲಿಸಿ. ಯಾವ ಸರ್ಕಾರ ಏನು ಮಾಡಿದೆ ಎಂಬುದನ್ನು ಅರಿತು ಮಾತನಾಡಲಿ. ಜನರನ್ನು ದಾರಿ ತಪ್ಪಿಸುವ ಅಗತ್ಯವಿಲ್ಲ. ಜನ ಎಲ್ಲವನ್ನೂ ಅರಿತಿದ್ದಾರೆ ಎಂದರು.

ರಾಜ್ಯದಲ್ಲಿ(Karnataka) ಕಳೆದ 6 ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು, ತೆರಿಗೆ ಸೋರಿಕೆ ತಡೆಯುವಲ್ಲಿ ಸಫಲರಾಗಿ . 15 ಸಾವಿರ ಕೋಟಿಗೂ ಅಧಿಕ ಹೆಚ್ಚುವರಿ ತೆರಿಗೆ ಸಂಗ್ರಹಿಸಿದೆ. ಕೇಂದ್ರ ಸರ್ಕಾರ ರಿಜರ್ವ್‌ ಬ್ಯಾಂಕ್‌ . 6 ಸಾವಿರ ಕೋಟಿ ಹೆಚ್ಚುವರಿ ಸಾಲ ಪಡೆದುಕೊಳ್ಳಲು ಅನುಮತಿ ನೀಡಿದ್ದರೂ, ಸಾಲ ಪಡೆಯದೆ ರಾಜ್ಯದಲ್ಲಿ . 2.65 ಲಕ್ಷ ಕೋಟಿ ಬಜೆಟ್‌ ಮಂಡಿಸಿದೆ. ಮಹಿಳಾ ಮತ್ತು ಮಕ್ಕಳ ಸಚಿವಾಲದ ಕಾರ್ಯಕ್ರಮಗಳಿಗೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಂಗನವಾಡಿಗಳಿಗೆ, ರೈತರಿಗೆ(Farmers) ಬೇಕಾಗಿರುವಂತಹ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿರುವ ಕೀರ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ. ಡಬಲ್‌ ಎಂಜನ್‌ ಸರ್ಕಾರ ಎಲ್ಲ ರಂಗಗಳಲ್ಲಿ ಶೋಷಿತರಿಗೆ, ಅವಕಾಶವಂಚಿತರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ವೃದ್ಧರಿಗೆ ಸಮಾಜದ ಎಲ್ಲ ಹಂತದ ಜನರಿಗೆ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡಿ, ಜನಾದೇಶಕ್ಕೆ ತಕ್ಕಂತೆ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಎರಡೂ ಸರ್ಕಾರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿವೆ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದರು.
 

click me!