ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಪೊಲೀಸನ್ನು ಉಪಯೋಗಿಸಿಕೊಂಡು ಅವಹೇಳನ ಮಾಡಲು ಪ್ರಯತ್ನ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಲ್ಲಿ ಮೇಲಿನಿಂದ ಕೆಳಗಡೆ ತನಕ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ
ಶಿವಮೊಗ್ಗ(ಡಿ.25): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ದ್ವೇಷದ ರಾಜಕಾರಣ ದಿನೇ ದಿನ ಹೆಚ್ಚಾಗುತ್ತಿದೆ. ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಒಂದು ವ್ಯವಸ್ಥೆಯನ್ನು ಉಪಯೋಗಿಸಿಕೊಂಡು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಒಂದಲ್ಲ ಒಂದು ಘಟನೆ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಹರಿಹಾಯ್ದಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಮೇಲೆ ಕಲ್ಲು- ಮೊಟ್ಟೆ ಎಸೆತ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಅವರು, ಸಿ.ಟಿ ರವಿ ಅವರ ಮೇಲೆ ಹಲ್ಲೆ ಮಾಡಿ ಪೊಲೀಸರನ್ನ ಯಾವ ರೀತಿ ಉಪಯೋಗಿಸಿಕೊಂಡರು, ಈಗ ಸಿಐಡಿ ತನಿಖೆ ಮಾಡಿಸುತ್ತೇವೆ ಎಂದು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮುನಿರತ್ನರ ಮೇಲೆ ಸಾರ್ವಜನಿಕರಿಂದ ಹಲ್ಲೆ ಎಂದು ಹೇಳಲಾಗುತ್ತಿದ್ದರೂ ಕೂಡ ಮಾಧ್ಯಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಮುನಿರತ್ನ ಮೇಲೆ ಮೊಟ್ಟೆ ಮತ್ತು ಕಲ್ಲು ಎಸೆದಂತೆ ಉಡುಪಿ ಶಾಸಕ ಹರೀಶ್ ಪೂಂಜಾ ಮೇಲೂ ಹಲ್ಲೆ ನಡೆದಿದೆ. ಮೊನ್ನೆ ಪಂಚಮಸಾಲಿ ಹೋರಾಟಗಾರರ ಮೇಲೂ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.
undefined
ಹೆಬ್ಬಾಳ್ಕರ್ ಆಣೆ ಪ್ರಮಾಣದ ಸವಾಲು: ಸವದತ್ತಿ ಯಲ್ಲಮನ ಬಳಿ ಹರಕೆ ಹೊತ್ತಿದ್ದೇನೆ, ಸಿ.ಟಿ ರವಿ
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧವೂ ಪೊಲೀಸನ್ನು ಉಪಯೋಗಿಸಿಕೊಂಡು ಅವಹೇಳನ ಮಾಡಲು ಪ್ರಯತ್ನ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನಲ್ಲಿ ಮೇಲಿನಿಂದ ಕೆಳಗಡೆ ತನಕ ಈ ರೀತಿಯ ಘಟನೆ ನಡೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪಾರ್ಲಿಮೆಂಟ್ ನಲ್ಲಿ ಅವರ ವರ್ತನೆಯಿಂದಾಗಿ ನಮ್ಮ ಹಿರಿಯ ಎಂಪಿ ಬಿದ್ದು ಪೆಟ್ಟಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ರೀತಿ ಇವರ ತಾಳ್ಮೆಯ ಕಟ್ಟೆ ಹೊಡೆದು ಹೋಗಿದೆ. ಇವರಿಗೆ ವಿರೋಧ ಪಕ್ಷದಲ್ಲಿ ಕುಳಿತು ಅಭ್ಯಾಸವಿಲ್ಲ. ಮೋದಿ ಅವರ ನೇತೃತ್ವದಲ್ಲಿ ಸರ್ಕಾರವನ್ನ ರಚನೆ ಮಾಡಿದ್ದರಿಂದಾಗಿ ಅವರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರದಲ್ಲೂ ಇದೇ ರೀತಿ ಮಾಡುತ್ತಿದ್ದಾರೆ ಇಲ್ಲೂ ಅಧಿಕಾರದ ದರ್ಪ ವನ್ನ ತೋರುತ್ತಿದ್ದಾರೆ. ವಿರೋಧ ಪಕ್ಷದವರು ಯಾರು ಮಾತನಾಡಬಾರದು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಹೆಬ್ಬಾಳ್ಕರ್ ಆಣೆ ಪ್ರಮಾಣದ ಸವಾಲು: ಸವದತ್ತಿ ಯಲ್ಲಮನ ಬಳಿ ಹರಕೆ ಹೊತ್ತಿದ್ದೇನೆ, ಸಿ.ಟಿ ರವಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೂ ಕೂಡ ಕೋವಿಡ್ ಹಗರಣ ಎಂದು ತನಿಖೆ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಕೀಳು ಮಟ್ಟದ ರಾಜಕೀಯ ನಡೆಯುತ್ತಿದೆ. ಇದು ತುಂಬಾ ದಿನಗಳು ನಡೆಯುವುದಿಲ್ಲ. ವಾಲ್ಮೀಕಿ ಹಗರಣ, ಮೂಡ ಹಗರಣ ಇವೆಲ್ಲವನ್ನು ಮುಚ್ಚಿ ಹಾಕುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ . ಜನರು ಯಾರು ದಡ್ಡರಲ್ಲ ಎಲ್ಲವನ್ನು ಗಮನಿಸುತ್ತಿದ್ದಾರೆ. ಪಕ್ಷ ಎಲ್ಲ ವಿಚಾರವನ್ನು ಪಕ ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸದನದಲ್ಲಿ ಅಶ್ಲೀಲ ಪದ ಉಪಯೋಗ ಮಾಡಿದ್ದಾರೆ ಎಂದು ಪ್ರಕರಣ ಸಿಐಡಿ ಗೆ ವಹಿಸಿದ ವಿಚಾರದ ಬಗ್ಗೆ ಮಾತನಾಡಿದ ರಾಘವೇಂದ್ರ ಅವರು, ಕಾಂಗ್ರೆಸ್ ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೇ?. ಈಗಾಗಲೇ ನೀವು ಕೋರ್ಟಿನಲ್ಲಿ ಕೇಸನ್ನ ಹಾಕಿದ್ದೀರಿ. ಜಾಮೀನಿನ ಮೇಲೆ ಸಿ.ಟಿ. ರವಿ ಅವರು ಹೊರಗೆ ಬಂದಿದ್ದಾರೆ. ಒಂದು ತನಿಖೆ ನಡೆಯುವ ವೇಳೆ ಇನ್ನೊಂದು ತನಿಖೆಯನ್ನು ಹೇಗೆ ಕೊಡುತ್ತೀರಿ. ಅಂದರೆ ರಾಜ್ಯದ ನ್ಯಾಯಾಂಗದ ಮೇಲೆ ನಿಮಗೆ ವಿಶ್ವಾಸ ಇಲ್ಲ ಎಂದು ಅರ್ಥ. ಅವರ ತಪ್ಪನ್ನ ಮುಚ್ಚಿ ಹಾಕಿಕೊಳ್ಳಲು ಗೊಂದಲದಲ್ಲಿ ಇದ್ದಾರೆ ಎಂದು ಅನಿಸುತ್ತದೆ. ಹಾಗಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.