16 ದಿನದಿಂದ ಪ್ರಜ್ವಲ್‌ ನಾಪತ್ತೆ, ಇಂದು ಜರ್ಮನಿಯಿಂದ ಟಿಕೆಟ್ ಬುಕ್‌ ಮಾಡಿದ್ದ ಸಂಸದ, ಆದ್ರೆ ಬರೋದು ಅನುಮಾನ!

By Gowthami K  |  First Published May 12, 2024, 11:54 AM IST

ಪ್ರಜ್ವಲ್ ರೇವಣ್ಣ ಇವತ್ತು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದರು. ಆದರೆ ಈಗ ಇಂದು ಕೂಡ ಬರೋದು ಅನುಮಾನ ಎನ್ನಲಾಗಿದೆ.


ಬೆಂಗಳೂರು (ಮೇ.12): ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮೂಲಕ ವಿದೇಶಕ್ಕೆ ತೆರಳಿದ್ದು, 16 ದಿನದಿಂದ ಭಾರತಕ್ಕೆ ಬರದೇ ನಾಪತ್ತೆಯಾಗಿದ್ದಾರೆ.

ಈ ನಡುವೆ ಪ್ರಜ್ವಲ್ ರೇವಣ್ಣ ಇವತ್ತು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದರು. ಆದರೆ ಈಗ ಇಂದು ಕೂಡ ಬರೋದು ಅನುಮಾನ ಎನ್ನಲಾಗಿದೆ. ಏಕೆಂದರೆ ಜರ್ಮನಿಯ ಮ್ಯೂನಿಚ್ ನಿಂದ ಬರಲು ಇಂದು ಟಿಕೆಟ್ ಬ್ಲಾಕ್ ಮಾಡಿಸಿದ್ದ ಪ್ರಜ್ವಲ್ ಇದುವರೆಗೆ ಪ್ರಯಾಣದ ಬಗ್ಗೆ  ಯಾವುದೇ ಖಚಿತ ಪಡಿಸಿಲ್ಲ. ಹೀಗಾಗಿ ಭಾರತಕ್ಕೆ ಬರುವುದು ಇಂದು ಸಹ ಅನುಮಾನ ಎನ್ನಲಾಗಿದೆ.

Tap to resize

Latest Videos

ಪೆನ್​ಡ್ರೈವ್​, ರೇಪ್ & ದೇವರಾಜೇಗೌಡ: ಹೋರಾಟಗಾರನೇ ಕಂಬಿ ಹಿಂದೆ..!

ಪ್ರಜ್ವಲ್ ರೇವಣ್ಣ ಬಂಧನಕ್ಕೆ  ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದೆ. ಪ್ರಜ್ವಲ್ ರೇವಣ್ಣ ಈಗ ಬರಬಹುದು ನಾಳೆ ಬರಬಹುದು ಎಂದು ಪೊಲೀಸರು ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್‌ ಮಾತ್ರ ಈವರೆಗೆ ಪತ್ತೆಯಾಗದೆ ನಾಪತ್ತೆಯಾಗುದ್ದಾರೆ.

ಮೇ 3 ರಂದು ಕೂಡ ವಿಮಾನ ಟಿಕೆಟ್‌ ಬುಕ್ ಮಾಡಿದ್ದ ಪ್ರಜ್ವಲ್ ರೇವಣ್ಣ ಅಂದು ಕೂಡ ಬರದೆ ವಿದೇಶದಲ್ಲೇ ಉಳಿದುಕೊಂಡಿದ್ದರು. ಅದೇ ರೀತಿ ಇಂದು ಮತ್ತು ಮೇ.15 ರಂದು ಟಿಕೆಟ್ ಬುಕ್ ಮಾಡಿರುವ ಪ್ರಜ್ವಲ್ ರೇವಣ್ಣ ಇನ್ನೂ ಕೂಡ ಬರುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಪ್ರಕರಣ ಸಂಬಂಧ ಈಗಾಗಲೇ ಪ್ರಜ್ವಲ್ ವಿರುದ್ದ ಮೂರು ಎಫ್ಐಆರ್ ದಾಖಲು ಮಾಡಲಾಗಿದೆ. ಈ ಹಿನ್ನೆಲೆ ಪ್ರಜ್ವಲ್ ವಿದೇಶದಿಂದ ಬಂದ ತಕ್ಷಣ ಆರೆಸ್ಟ್ ಮಾಡಲು ತಯಾರಿ ನಡೆದಿದೆ. ವಿದೇಶದಿಂದ ಬರುವ ಪ್ರತಿ ವಿಮಾನವನ್ನು ಪೊಲೀಸರು ಚೆಕ್ ಮಾಡುತ್ತಿದ್ದಾರೆ.

ದೇಶದ ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬಂದ್ರೆ ಅಲ್ಲೇ ಆರೆಸ್ಟ್ ಆಗೋದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ವಿದೇಶದಿಂದ ಆಗಮಿಸಲು ಪ್ರಜ್ವಲ್  ಹಿಂದೇಟು ಹಾಕುತ್ತಿದ್ದಾರೆ.

Prajwal Revanna Case: ಎಸ್‌ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ಯಾ?: ನಿಖಿಲ್ ಕುಮಾರಸ್ವಾಮಿ

ಇನ್ನೊಂದೆಡೆ ಪ್ರಜ್ವಲ್‌ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ಕೇಂದ್ರ ಸರ್ಕಾರ ಏಕೆ ರದ್ದುಪಡಿಸುತ್ತಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.  ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಪ್ರಜ್ವಲ್‌ ರೇವಣ್ಣ ಪರಾರಿಯಾಗಲು ಬಿಟ್ಟಿದ್ದಾದರೂ ಹೇಗೆ? ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ಅನ್ನು ರದ್ದು ಮಾಡುವಂತೆ ಪ್ರಧಾನಿಯನ್ನು ತಡೆಯುತ್ತಿರುವ ಅಂಶವಾದರೂ ಏನು? ವಿಜಯ್ ಮಲ್ಯ, ನೀರವ್‌ ಮೋದಿ, ಮೇಹುಲ್‌ ಚೋಕ್ಸಿ ರೀತಿಯಲ್ಲಿ ಹೇಗೆ ಮತ್ತು ಏಕೆ ಪ್ರಜ್ವಲ್‌ ರೇವಣ್ಣ ದೇಶ ಬಿಟ್ಟು ಹೋಗಲು ಅವಕಾಶ ನೀಡಲಾಯ್ತು’ ಎಂದು ಪ್ರಶ್ನಿಸಿದ್ದಾರೆ.

ಇದೆಲ್ಲದರ ನಡುವೆ ಪ್ರಜ್ವಲ್ ಹುಡುಕಿಕೊಟ್ಟವರಿಗೆ 1ಲಕ್ಷ ರೂ. ಬಹುಮಾನ ಎಂದು ಜನತಾ ಪಕ್ಷ ಘೋಷಿಸಿದೆ. ಆರೋಪಿ ಪ್ರಜ್ವಲ್ ರೇವಣ್ಣ ಹುಡುಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಆರೋಪಿ ಪ್ರಜ್ವಲ್ ರೇವಣ್ಣ ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಕೊಡೋದಾಗಿ ಜನತಾ ಪಕ್ಷ ಪೋಸ್ಟರ್ ಅಂಟಿಸಿದೆ. ಶಿವಾನಂದ್ ಸರ್ಕಲ್ ಸೇರಿ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗೇಶ್ ನೇತೃತ್ವದಲ್ಲಿ  ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ. 

click me!