ಕ್ಷೇತ್ರದ ಎಲ್ಲ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಶಿಫಾರಸು ಪತ್ರ ಕೇಳಿಕೊಂಡು ಹೋಗಬೇಡಿ: ಪ್ರೀತಂಗೌಡ
ಹಾಸನ(ನ.01): ನಮ್ಮ ತಂದೆ, ತಾಯಿ ಹುಟ್ಟುವ ಮುಂಚೆ ನೂರು ಎಕರೆ ಖಾತೆದಾರರಾಗಿದ್ದವರು. ಸಾಲಿಗ್ರಾಮಕ್ಕೆ ಹೋಗಿ ಅಕ್ಕ ಅವರ ಮನೆಯಲ್ಲಿ ಎಷ್ಟು ಗುಂಟೆ ಜಾಗ ಇತ್ತು ಅಂತ ಕೇಳಿ, ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಅವರ ಮನೆಯ ಪರಿಸ್ಥಿತಿ ಏನು ಅಂತ ಅವರಿಗೆ, ಇದರ ಅವರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮೈಸೂರು ಮಹಾರಾಜರು ಏನಾದ್ರು ಸಾಲ ಕೊಟ್ಟು ಅವರಿಗೆ ಆಗರ್ಭ ಶ್ರೀಮಂತರಾಗಿದ್ದರಾ ಭವಾನಿ ಅಕ್ಕ?, ಮಾತನಾಡೋ ಶೈಲಿ ನೋಡಿದ್ರೆ ಅವರು ಆಗರ್ಭ ಶ್ರೀಮಂತರು ಅನ್ಸುತ್ತೆ, ಅಲ್ಕೋಮೀಟರ್ ಇಟ್ಕಂಡಿರಿ, ನೆಕ್ಸ್ಟ್ ಪ್ರೆಸ್‌ಮೀಟ್ ಬಂದಾಗ ಚೆಕ್‌ಮಾಡಿ ಏನಾದರೂ ನಶೆ ಇದ್ದರೆ ಇರಬಹುದು. 30, 60 ಅಲ್ಲ ಎರಡು ಬಾಟ್ಲು ಕುಡಿತಾರೆ, ತಾಯಿ, ಮಗ ಇಬ್ಬರೂ ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡಿರುತ್ತಾರೆ. ಬೆಳಗ್ಗೆ ಬಂದು ಏನ್ ಮಾತಾಡ್ತಿವಿ ಅಂತ ಗೊತ್ತಾಗಲ್ಲ. ರೇವಣ್ಣ ಅವರು ಮಾತಾಡಲ್ಲ, ಅವರು ನಶೆ ಏರಿಸಿಕೊಳ್ಳಲ್ಲ. ಭವಾನಿ ಅಕ್ಕ, ಎಂಪಿ ನಶೆ ಮೇಲೆ ಮಾತಾಡಿದ್ದಾರೆ ಅಂತ ಹೇಳುವ ಮೂಲಕ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಅವರನ್ನು ಕುಡುಕರು ಅಂತ ಬಿಜೆಪಿ ಶಾಸಕ ಪ್ರೀತಂಗೌಡ ಜರಿದಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರೀತಂಗೌಡ ಅವರು, ಹಾಸನ ಕ್ಷೇತ್ರದ ಜನ ಹಾಗೂಇಡೀ ರಾಜ್ಯದ ಜನರು ಮಾತನಾಡುತ್ತಿದ್ದಾರೆ. ರೇವಣ್ಣ ಈ ನಶೆಯರ ಮಧ್ಯೆ ಸಿಲುಕಿಕೊಂಡು ನರಳಿ ಹೋಗಿದ್ದಾರೆ. ನಮ್ಮ ತಾಯಿ ಬಿಎ, ನಮ್ಮ ತಂದೆ ಬಿಇ ಓದಿದ್ದಾರೆ ಹಾಗಾಗಿ ನಮಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಅಂತ ರೇವಣ್ಣ ಕುಟುಂಬದ ವಿರುದ್ಧ ಹರಿಹಯ್ದಿದ್ದಾರೆ.
ನಮ್ಮ ಉಸಾಬರಿ ಅವರಿಗೆ ಬೇಡ, ಶಾಸಕ ಪ್ರೀತಂಗೌಡಗೆ ಟಾಂಗ್ ಕೊಟ್ಟ ಭವಾನಿ ರೇವಣ್ಣ
ಕ್ಷೇತ್ರದ ಎಲ್ಲ ಅಧಿಕಾರಿಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಆ ಕುಟುಂಬದ ಹತ್ತಿರ ಶಿಫಾರಸು ಪತ್ರ ಕೇಳಿಕೊಂಡು ಹೋಗಬೇಡಿ. ಸಹಾಯ ಪಡೆಯದಿರೋ ಶಾಸಕರ ತಂದೆ ಬಗ್ಗೆನೆ ಮಾತನಾಡುತ್ತಾರೆ ಎಂದರೆ ಸಾಮಾನ್ಯ ನೌಕರರ ಪಾಡು ಏನಾಗಬೇಕು?. ಅಪ್ಪಿ ತಪ್ಪಿ ಅವರ ಮನ ಬಾಗಿಲಿಗೆ ಹೋಗಬೇಡಿ, ಯಾವುದು ಶಿಫಾರಸ್ಸು ತಗೋಬೇಡಿ. ನಿಮ್ಮ ಜೀವನ ನಡಿತಿರೋದೇ ಅವರಿಂದ ಅಂತಾರೆ, ಬಹಳ ಎಚ್ಚರಿಕೆಯಿಂದ ಇರಿ. ಸರ್ಕಾರಿ ನೌಕರರು ಬಹಳ ಸ್ವಾಭಿಮಾನಿಗಳೂ, ಅನಿತಕ್ಕ ಬಂದರು ಆ ಅಕ್ಕನನ್ನು ನೋಡಿದ್ರೆ ಎರಡು ಕೈ ಮುಗಿದು ಬನ್ನಿ ಅಕ್ಕ ಅಂತ ಕರಿಬೇಕು ಅನ್ಸುತ್ತೆ, ತುಂಬಿದ ಕೊಡ ತುಳುಕುವುದಿಲ್ಲ, ಅನಿತಕ್ಕನ ಬಗ್ಗೆ ಮಾತನಾಡಲು ಆಗುತ್ತಾ, ಅನಿತಕ್ಕ ಸಂಸ್ಕಾರವಂತರಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಸೊಸೆ ನಾನೇ ಮಾಜಿ ಪ್ರಧಾನಿ ಅಂತ ತಲೇಲಿ ಇಟ್ಕಂಡಿದ್ದಾರೆ. ಅವರ ಮೊಮ್ಮಗ ಬರಿ ಎಂಪಿ ನಾನೇ ಮಾ ಜಿಪ್ರಧಾನಿ ಅನ್ನೋ ನಿಟ್ಟಿನಲ್ಲಿ ಮಾತಾಡ್ತಾರೆ ಅಂತ ಕಿಡಿಕಾರಿದ್ದಾರೆ.