ಬಿಟ್ ಕಾಯಿನ್... ಯಾವ ಬಿಟ್ , ನನಗೆ ಪೊಲೀಸ್ ಬೀಟ್ ಮಾತ್ರ ಗೊತ್ತು!

By Suvarna NewsFirst Published Nov 2, 2021, 4:34 PM IST
Highlights

* ಕರ್ನಾಟಕ ಉಪಚುನಾವಣಾ ಫಲಿತಾಂಶ
* ಎರಡು ಕ್ಷೇತ್ರ ಗೆಲ್ಲುವ ತವಕದಲ್ಲಿ ಇದ್ವಿ ಎಂದ ಸೋಮಣ್ಣ
*  ದೇಶದ, ರಾಜ್ಯದ ಯಾವುದೇ ಪ್ರಚಲಿತ ವಿದ್ಯಮಾನಕ್ಕೆ ಅನುಗುಣವಾಗಿ ಜನ ಮತದಾನ ಮಾಡಿಲ್ಲ
*  ಎಲ್ಲಾರೂ ಒಟ್ಟಾಗಿ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದೇವೆ

ಬೆಂಗಳೂರು (ನ. 02) ಉಪಚುನಾವಣೆಯಲ್ಲಿ (Karnataka By Poll) ಎರಡು ಕ್ಷೇತ್ರ ಗೆಲ್ಲುವ ತವಕದಲ್ಲಿ ಇದ್ದಿದ್ದೆವು. ಆದರೆ ಹಾನಗಲ್ಲಿ ಸಣ್ಣ ಪ್ರಮಾಣದಲ್ಲಿ ಸೋಲಾಗಿದೆ. ದೇಶದ, ರಾಜ್ಯದ ಯಾವುದೇ ಪ್ರಚಲಿತ ವಿದ್ಯಮಾನಕ್ಕೆ ಅನುಗುಣವಾಗಿ ಜನ ಮತದಾನ ಮಾಡಿಲ್ಲ. ಎಲ್ಲಾರೂ ಒಟ್ಟಾಗಿ ಒಗ್ಗಟ್ಟಾಗಿ ಪ್ರಚಾರ ಮಾಡಿದ್ದೇವೆ. ಸಿಂಧಗಿಯಲ್ಲಿ ಅಭೂತಪೂರ್ವ ಗೆಲವು ನೀಡಿದ್ದಾರೆ. ಎಂಟನೇ ತಾರೀಖಿನ ಬಳಿಕ ಸಿಂಧಗಿಗೆ ಹೋಗ್ತೇವೆ ಎಂದು ಸಚಿವ (V Somanna) ವಿ ಸೋಮಣ್ಣ ಹೇಳಿದ್ದಾರೆ.

ಹಾನಗಲ್ ಲ್ಲಿ ಉದಾಸಿಯವರು ಶಾಸಕ ಆದ ಮೇಲೆ ಅನಾರೋಗ್ಯ ಕಾರಣಕ್ಕೆ ಹೆಚ್ಚು ಓಡಾಟ ಮಾಡೋಕೆ ಆಗಿರಲಿಲ್ಲ . ಹೀಗಾಗಿ ಮಾನೆ ಈಗ ಗೆದ್ದಿದ್ದಾರೆ. ಇದು ಮಾನೆ ವೈಯಕ್ತಿಕ ವರ್ಚಸ್ಸಿನ ಗೆಲುವು. ಹಾನಗಲ್ ಗೆಲುವು ಕಾಂಗ್ರೆಸ್ ಗೆಲುವಲ್ಲ . ಹಾನಗಲ್(Hangal) ಲ್ಲಿ ಬಿಜೆಪಿ (BJP) ವೋಟ್ ಎಲ್ಲೂ ಹೋಗಿಲ್ಲ. ನಮ್ಮ ಮತ ನಮ್ಮಲ್ಲೇ ಇದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಬರುತ್ತೇವೆ ಎಂದು ಹೇಳಿದರು.

'ಏನಿದು ಬಿಟ್ ಕಾಯಿನ್ ದಂಧೆ.. ಕರ್ನಾಟಕಕ್ಕೆ ಸುತ್ತಿಕೊಂಡಿದ್ದು ಹೇಗೆ?

ನಾವು ಸಾಮೂಹಿಕ ಚುನಾವಣೆ ಎದುರಿಸಿದ್ದೇವೆ. ಸಿಂಧಗಿಯಲ್ಲಿ ಮುಸ್ಲಿಮರು ಅತಿ ಹೆಚ್ಚು ಮತ ಹಾಕಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಅಂತ ಅಮಿತ್ ಶಾ ಹೇಳಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸ್ತೇವೆ ಎಂದರು.

ಬಿಟ್ ಕಾಯಿನ್(Bitcoin) ಪ್ರಕರಣ; ಯಾವ ಬಿಟ್ , ನನಗೆ ಪೊಲೀಸ್ ಬೀಟ್ ಮಾತ್ರ ಗೊತ್ತು! ಸಿದ್ದರಾಮಯ್ಯ ವಿಪಕ್ಷ ನಾಯಕರು ಆ ಪುಣ್ಯಾತ್ಮಗೆ ಹೇಳಿ ಎಂದ ಸೋಮಣ್ಣ.. ಬೊಮ್ಮಾಯಿ ಗೆ ಒಳ್ಳೆಯ ಇತಿಹಾಸ ಇದೆ. ಒಳ್ಳೆಯ ಕುಟುಂಬದಿಂದ ಬಂದವರು. ನಿಖರತೆ ಇಟ್ಟು ಸಿದ್ದರಾಮಯ್ಯ ಮಾತಾಡಲಿ ಎಂದು ಸೋಮಣ್ಣ ಸಲಹೆ ನೀಡಿದರು.

ಆರು ಸಾವಿರದಿಂದ ಗೆದ್ದಿರೋದಕ್ಕೆ ಸಿದ್ದರಾಮಯ್ಯ ಜಂಬ ಕೊಚ್ಚಿಕೊಂಡ್ರೆ. 32 ಸಾವಿರ ಮತಗಳಿಂದ ಗೆದ್ದ ನಾವು ಎಷ್ಟು ಜಂಬ ತೋರಬೇಕು? ಪಂಚಮಸಾಲಿ ಮತ ಕೂಡ ಒಡೆದು ಹೋಗಿಲ್ಲ. ಯಡಿಯೂರಪ್ಪರು, ವಿಜಯೇಂದ್ರ ಎಲ್ಲಾರೂ ಪ್ರಚಾರ ಮಾಡಿದ್ದಾರೆ. ಬಿಟ್ ಕಾಯಿನ್ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಸಚಿವ ಸಿಸಿ ಪಾಟೀಲ್ ಹೇಳಿದರು.

click me!