ಮೀಸಲಾತಿ ಜೇನುಗೂಡು ಎಂದಿದ್ದ ಕಾಂಗ್ರೆಸ್: ಜೇನುಗೂಡು ಬೇಧಿಸಿ ಸಿಹಿ ಹಂಚಿದ ಬಿಜೆಪಿ: ಹಾಲಪ್ಪ ಆಚಾರ

By Kannadaprabha News  |  First Published Apr 6, 2023, 8:51 AM IST

ಮೀಸಲಲಾತಿಯನ್ನು ಜೇನುಗೂಡೆಂದು ಜರೆದಿದ್ದ ಕಾಂಗ್ರೆಸ್. ಆದರೆ ಬಿಜೆಪಿ ಸರ್ಕಾರ ಅಂಥ ಜೇನುಗೂಡಿಗೆ ಕೈಹಾಕಿ ಮೀಸಲಾತಿಯ ಸಿಹಿ ಉಣಿಸಿದೆ.ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಹಾಲಪ್ಪ ಆಚಾರ


ಕುಕನೂರು (ಏ6) : ಸತತ ಹಲವಾರು  ವರ್ಷಗಳಿಂದ ಎಸ್ಸಿ, ಎಸ್ಟಿಸಮುದಾಯದ ಮೀಸಲಾತಿ ಹೋರಾಟವನ್ನು ಕಾಂಗ್ರೆಸ್‌ ಸರ್ಕಾರ ಕಡೆಗಣಿಸಿ, ಮೀಸಲಾತಿ ಎಂಬುದು ಜೇನುಗೂಡಿಗೆ ಕೈ ಹಾಕುವ ಕೆಲಸ ಎಂದು ಕೈ ಪಕ್ಷದವರು ಜರಿದಿದ್ದರು. ಆದರೆ ಸಿಎಂ ಬೊಮ್ಮಾಯಿ ಎರಡೆದೆ ಸಿಎಂ ಆಗಿದ್ದು, ಬಿಜೆಪಿ ಮೀಸಲಾತಿ ಜೇನುಗೂಡು ಬೇಧಿಸಿ ಶೋಷಿತ ವರ್ಗಕ್ಕೆ ಸಿಹಿ ಹಂಚಿದೆ.ಅಲ್ಲದೆ ಹತ್ತಾರು ವರ್ಷಗಳಿಂದ ಧೂಳು ಹಿಡಿದಿದ್ದ ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಸಚಿವ ಹಾಲಪ್ಪ ಆಚಾರ(Halappa Achar ) ಹೇಳಿದರು.

ತಾಲೂಕಿನ ಮಂಡ್ಲಿಗೇರಿ, ಚಿಕೇನಕೊಪ್ಪ,ಯರೇಹಂಚಿನಾಳ ನಾನಾ ಗ್ರಾಮದಲ್ಲಿ ಬಿಜೆಪಿ ಯಲಬುರ್ಗಾ ಮಂಡಲದಿಂದ ಜರುಗಿದ ಬಿಜೆಪಿ ಸಂಘಟನಾತ್ಮಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಶೋಷಿತ ವರ್ಗದ ಹಿತಕ್ಕೆ ಯಾವುದೇ ರೀತಿಯ ಕೆಲಸ ಮಾಡಿಲ್ಲ. ಬಿಜೆಪಿ(Karnataka BJP) ಆ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಟ್ಟಿದೆ.ಬಿಜೆಪಿ ಸರ್ಕಾರದ ಮೇಲೆ ಜನತೆ ವಿಶ್ವಾಸ,ನಂಬಿಕೆ ಇಟ್ಟಿದ್ದಾರೆ. ಬಿಜೆಪಿಯಿಂದ ಬದಲಾವಣೆ ಆಗಿದೆ. ಕಾಂಗ್ರೆಸ್‌ ಮೇಲೆ ಜನ ಭ್ರಮನಿರಸ ಆಗಿದ್ದಾರೆ.

Latest Videos

undefined

ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್

ನಾನು ಒಬ್ಬ ರೈತ, ರೈತನ ಮಗ.ಆ ನಿಟ್ಟಿನಲ್ಲಿ ಕೆರೆಗಳ ಜೀರ್ಣೋದ್ಧಾರ,ಗ್ರಾಮೀಣ ಒಳಭಾಗದ ರಸ್ತೆ ನಿರ್ಮಾಣ,ಹಳ್ಳದಾಟಲು ಬ್ರೀv್ಜ… ನಿರ್ಮಾಣ ಮಾಡಿದ್ದೇನೆ.ನೀರಾವರಿ,ಶಿಕ್ಷಣಕ್ಕೆ ಆದ್ಯತೆ ನೀಡಿದ್ದæ್ದೕನೆ. ಮಾಜಿ ಸಚಿವ ರಾಯರೆಡ್ಡಿ ಅವರ ಹಾಗೆ ಧಾರವಾಡ, ಬೆಂಗಳೂರಿನಲ್ಲಿ ವಾಸ ಇದ್ದು, ಕ್ಷೇತ್ರ ಹಾಗು ಕ್ಷೇತ್ರದ ಜನತೆ ಕಡೆಗಣಿಸಿಲ್ಲ. ಕ್ಷೇತ್ರವನ್ನು ದುಬೈ,ಸಿಂಗಾಪುರ ಮಾಡುತ್ತೇನೆ ಎಂದು ಮಾಜಿ ಸಚಿವರು ರೈತ ವರ್ಗಕ್ಕೆ ಶೂನ್ಯ ಕೊಡುಗೆ ನೀಡಿದ್ದಾರೆ. ಆದರೆ ನಾನು ರೈತ ಕಷ್ಟರ ನೀಗಲಿ ಎಂದು ಕೃಷ್ಣೆಯ ನೀರು ತಂದಿದ್ದೇನೆ. ಇಂದಿಗೂ ಜನತೆ ಜೊತೆ ಬೇರೆಯುತ್ತಿದ್ದೇನೆ. ಪಡಸಾಲೆ ಮನೆಯಲ್ಲೆ ಇರುತ್ತೇನೆ ಎಂದರು.

ಕಳೆದ ಚುನಾವಣೆಯಲ್ಲಿ ನನಗೆ ನೀವು ಮತ ನೀಡಿದ ಫಲವಾಗಿ ರಾಜ್ಯ ಸಚಿವ ಸಂಪುಟ ಸ್ಥಾನ ಸಿಕ್ಕಿತು. ಕ್ಷೇತ್ರದ ಮತದಾರ ಬಾಂಧವರ ಋುಣ ತೀರಿಸಲು ಸಾಧ್ಯವಿಲ್ಲ. ಇಂದು ಅನೇಕ ರಾಷ್ಟ್ರಗಳು ದಿವಾಳಿ ಆಗುತ್ತಿವೆ.ಆದರೆ ಭಾರತ ಪ್ರಧಾನಿ ಮೋದಿ ಆಡಳಿತದಿಂದ ಸಮೃದ್ಧ ಆಗಿದೆ. ಹಿಂದೆ ಮಕ್ಕಳಿಗೆ ನೀಡುವ ದಡಾರ,ಪೊಲೀಯೋ ಲಸಿಕೆ ಸಹ ವಿದೇಶಗಳ ಮುಂದೆ ಕೈ ಒಡ್ಡುವ ಸ್ಥಿತಿ ಇತ್ತು.ಆದರೆ ಮೋದಿ ಅವರು ಭಾರತದಲ್ಲೇ ಆತ್ಮ ನಿರ್ಭರ ಭಾರತ ಮೂಲಕ ಲಸಿಕೆ ತಯಾರಿಸಿ ನೀಡಿದ್ದಾರೆ.ಕæೂರæೂೕನಾ ಲಸಿಕೆ ಸಹ ಭಾರತೀಯರಿಗೆ ಉಚಿತವಾಗಿ ನೀಡಿ, ವಿದೇಶಗಳಿಗೂ ಸಹ ನೀಡಿದ್ದಾರೆ. ಭಾರತೀಯರ ಜೊತೆ ವಿದೇಶಿಗರ ಜೀವ ಉಳಿಸಿದ್ದಾರೆ. ಮೋದಿ ರಷ್ಯಾ, ಉಕ್ರೇನ್‌ ಯುದ್ಧ(Russia-Ukrain) ನಿಲ್ಲಿಸಿ ಭಾರತೀಯರ ಜತೆ ವಿದೇಶಿ ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದಾರೆ. ಬಿಜೆಪಿ ಡಬಲ್‌ ಇಂಜಿನ್‌ ಸರ್ಕಾರದಿಂದ ಅಭಿವೃದ್ಧಿ ದಾಪುಗಾಲು ಆಗಿದೆ ಎಂದರು.

ಡಾ. ಬಿ.ಆರ್‌. ಅಂಬೇಡ್ಕರ್‌(BR Ambedkar) ಅವರು ಬರೆದ ಸಂವಿಧಾನದಿಂದ ಭಾರತ ಸಮೃದ್ಧ ಆಗಿದೆ. ಅಲ್ಲದೆ ಪ್ರಧಾನಿ ಮೋದಿ ಆಡಳಿತದಿಂದ ಭಾರತ ನಂ.1ಆಗಿ ವಿಶ್ವಗುರು ಆಗುತ್ತಿದೆ. ರಾಜ್ಯ ಸಹ ಅಭಿವೃದ್ಧಿ ಆಗಿದೆ ಎಂದರು.

ಮುಖಂಡರಾದ ಹಂಚ್ಯಾಳಪ್ಪ ತಳವಾರ, ಬಸವರಾಜ ಗೂಳರೆಡ್ಡಿ, ಈಶಪ್ಪ ಆರೇರ ಮಾತನಾಡಿ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಜನತೆಗೆ ಗೋಲಗುಂಬಜ್‌ ಕಟ್ಟಿಸುತ್ತೇನೆ ಎಂಬ ಆಸೆ ಹಚ್ಚುತ್ತಾರೆ.ಚುನಾವಣೆ ಮುಗಿದ ಮೇಲೆ ಕೈಗೆ ಸಿಗುವುದಿಲ್ಲ.ಆದರೆ ಸಚಿವ ಹಾಲಪ್ಪ ಆಚಾರ ಅವರಿಂದ ಕ್ಷೇತ್ರ ನೀರಾವರಿ ಆಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿ ಹೊಂದಿದೆ. ಸಚಿವ ಹಾಲಪ್ಪ ಆಚಾರ ಅವರು ಸರಳ, ಸ್ಪಷ್ಟ,ಸ್ವಚ್ಛ, ಸಜ್ಜನಿಕೆಯ ವ್ಯಕ್ತಿ ಎಂದರು.

ಮಂಡಲದ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ,ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಿವಲೀಲಾ ದಳವಾಯಿ,ಶಿವಣ್ಣ ಭಾನಾಪೂರ, ವೀರಪ್ಪ ಬೀಸನಳ್ಳಿ, ಗ್ರಾಪಂ ಅಧ್ಯಕ್ಷ ಮಹೇಶ ದೊಡ್ಮನಿ,ಬಸನಗೌಡ ತೊಂಡಿಹಾಳ, ಶಂಭು ಜೋಳದ, ಈಶಪ್ಪ ವಕ್ಕಳದ ಇತರರಿದ್ದರು.

ಬಿಜೆಪಿ ಸೇರ್ಪಡೆ ಆದ ಜನರು.

ವಿವಿಧ ಗ್ರಾಮಗಳಲ್ಲಿ ಜರುಗಿದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಹಲವಾರು ಜನರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದರು. ಸಚಿವ ಹಾಲಪ್ಪ ಆಚಾರ ಅವರು ಬಿಜೆಪಿ ಶಾಲು ಹೊದಿಸಿ ಪಕ್ಷಕ್ಕೆ ಸ್ವಾಗತಿಸಿಕೊಂಡರು.ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ಬಿಜೆಪಿಯತ್ತ ಜನ ಪಕ್ಷಕ್ಕೆ ಸೇರುತ್ತಿರುವುದು ಜನರು ಬಿಜೆಪಿ ಮೇಲಿಟ್ಟಿರುವ ಅಪಾರ ನಂಬಿಕೆ ಹಾಗು ಕಾಂಗ್ರೆಸ್‌ ಮೇಲೆ ಜನ ಭ್ರಮನಿರಸ ಆಗಿರುವುದು ಆಗಿದೆ. ಮಹಿಳಾ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಗೆ ಮಹಿಳೆಯರ ಕಷ್ಟತಿಳಿಲಿಲ್ಲ. ಮೋದಿ ಉಚಿತ ಗ್ಯಾಸ್‌, ಸಿಲಿಂಡರ್‌ ನೀಡಿದ್ದಾರೆ. ಹಾಗೆ ಬೊಮ್ಮಾಯಿ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.

ಹಾಲಪ್ಪ ಆಚಾರ್‌ಗೆ ಮತ್ತೊಮ್ಮೆ ಟಿಕೆಟ್: ಅಶೀರ್ವಾದ ಮಾಡುವಂತೆ ಮತದಾರರಿಗೆ ಮನವಿ ಮಾಡಿದ ಕಾರಜೋಳ

ಗ್ಯಾರಂಟಿ ಅಲ್ಲ ಕೈ ಕೊಡುವ ಕೈ ಪಕ್ಷ

ಕಾಂಗ್ರೆಸ್‌ ಪಕ್ಷದವರು ಗ್ಯಾರಂಟಿ ಕಾರ್ಡ್‌ ವಿತರಣೆ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ದಿವಾಳಿ ಆಗಿದೆ.ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಈ ಸಲವು ಇಲ್ಲಿ ಆ ಉಸಿರು ನಿಲ್ಲುತ್ತದೆ. ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರಲ್ಲ,ಅವರಿಗೆ ಗ್ಯಾರಂಟಿ ಕೊಡುವುದು ಗೊತ್ತಿಲ್ಲ ಕೈ ಕೊಡುತ್ತಾರೆ. ಕಾಂಗ್ರೆಸ್‌ ಕಾಲದಲ್ಲಿ ಪರಿಹಾರ ಜನರಿಗೆ ಸಹ ಮುಟ್ಟುತ್ತಿರಲಿಲ್ಲ. ಈಗ ನೇರ ಅಕೌಂಟಿಗೆ ಬರುತ್ತದೆ.ಕಿಸಾನ್‌ ಸಮ್ಮಾನ್‌ ಹಣದಿಂದ ರೈತ ಸ್ವಾಭಿಮಾನಿ ಆಗಿದ್ದಾನೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.

click me!