
ಬೆಂಗಳೂರು (ಮಾ.28): ಬೆಂಗಳೂರು ಯಶವಂತಪುರ ಕ್ಷೇತ್ರದಲ್ಲಿ ಎರಡು ದಿನಗಳ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ. ಇಲ್ಲಿ ನಾವು ಕಳೆದ ಮೂರು ಸಲ ಕಡಿಮೆ ಅಂತರದಲ್ಲಿ ಸೋತಿದ್ದೆವು. ಈ ಸಲ ಗೆಲ್ಲಲೇ ಬೇಕು ಅಂತಾ ಹೊರಟಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಹಾಸನ ಟಿಕೆಟ್ ವಿಚಾರವಾಗಿ ಗೊಂದಲ ಇರೋದು ನಿಜ. ಎಲ್ಲರಿಗೂ ಚುನಾವಣೆಗೆ ಸ್ಪರ್ಧೆ ಮಾಡಲು ಆಸೆ ಇದೆ. ಆದರೆ ಇವತ್ತಿನ ಸೂಕ್ಷ್ಮವಾಗಿ ಪರಿಸ್ಥಿತಿ ಬಗ್ಗೆ ಕುಟುಂಬದಲ್ಲಿ ಚರ್ಚೆ ಮಾಡಿದ್ದೇವೆ. ಅದರ ಬಗ್ಗೆ ನಿಧಾನವಾಗಿ ಚರ್ಚೆ ಮಾಡ್ತೀವಿ. ದೇವೇಗೌಡರ ಆರೋಗ್ಯ ದಲ್ಲಿ ಸ್ವಲ್ಪ ಚೇತರಿಕೆ ಆಗಿದೆ. ದೇವೇಗೌಡರು ಜನರ ನಡುವೆ ಬಂದರೆ ಪಕ್ಷಕ್ಕೆ ಲಾಭ ಆಗಲಿದೆ. ಅವರ ಶಕ್ತಿಯನ್ನು ಬಳಸಿಕೊಳ್ಳುವ ಬಗ್ಗೆ ಚಿಂತಿಸುತ್ತೇವೆ ಎಂದು ಇದೇ ವೇಳೆ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಕುಮಾರಸ್ವಾಮಿ, ರಾಮದೇವರ ಬೆಟ್ಟದ ವಿಚಾರವಾಗಿ ಅರಣ್ಯ ಇಲಾಖೆಯ ಸಮಸ್ಯೆ ಇದೆ. ಈಗ ಅದನ್ನು ಮಾಡಲು ಸಾದ್ಯವಿಲ್ಲ. ಸರ್ಕಾರ ತೋರ್ಪಡಿಕೆಗೆ, ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಶಂಕುಸ್ಥಾಪನೆ ಮಾಡಿದ್ದಾರೆ. ಇದು ಮುಂದೆ ಬರುವ ಸರ್ಕಾರದ ಜವಾಬ್ದಾರಿ ಆಗಲಿದೆ. ತರಾತುರಿಯಲ್ಲಿ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಬರೀ ಘೋಷಣೆ ಮಾಡಿಕೊಂಡು ಹೋದ್ರು. ಆದ್ರೆ ಯೋಜನೆಗಳಿಗೆ ಹಣ ಮೀಸಲು ಇಡಲಿಲ್ಲ. ಅದೇ ತಪ್ಪನ್ನು ಈಗ ಇವರು ಕೂಡಾ ಮಾಡ್ತಾ ಇದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ಚಿಟ್ ಚಾಟ್ ನಲ್ಲಿ ಮಾತನಾಡಿದ್ದಾರೆ.
50 ಸ್ಥಾನ ಗೆಲ್ಲೋದಲ್ಲ, ಸ್ಪಷ್ಟಬಹುಮತ ನಮ್ಮ ಗುರಿ, ಏ.10 ರವರೆಗೆ ಪಂಚರತ್ನ ಯಾತ್ರೆ ಮುಂದುವರಿಕೆ, ಎಚ್‌ಡಿಕೆ
ಇನ್ನು ಪಂಚರತ್ನ ರಥಯಾತ್ರೆ ನಡೆಸುತ್ತಿರುವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಜನತೆ ಕ್ಯಾಪ್ಸಿಕಂ ಹಾರ ಹಾಕುವುದರ ಮೂಲಕ ವಿಶೇಷವಾಗಿ ಬರಮಾಡಿಕೊಂಡರು.
ಕರ್ನಾಟಕ ರಾಜಕಾರಣದ ರಾಜಬೀದಿಯಲ್ಲಿ ಪಂಚರತ್ನ ಯಾತ್ರೆ ಸಾಗಿಬಂದ ಹಾದಿ.!
ಏ.10 ರವರೆಗೆ ಯಾತ್ರೆ ಮುಂಉವರಿಕೆ: ಈವರೆಗೆ 90 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ನಡೆಸಲಾಗಿದೆ. ಇನ್ನೂ ಏ.10 ರವರೆಗೆ ಯಾತ್ರೆ ಮುಂದುವರೆಯಲಿದೆ. ಮಾ.28ರಂದು ಬೆಂಗಳೂರಿನ ಯಶವಂತಪುರ, ಗೋವಿಂದರಾಜ ನಗರ, ಬಸವನಗುಡಿ, ಯಲಹಂಕ, ಏ.3ರಂದು ಕೊಳ್ಳೇಗಾಲ, 4-5ರಂದು ಹನೂರು, 6ರಂದು ಪಿರಿಯಾಪಟ್ಟಣ, 7 ರಂದು ಕೆ.ಆರ್.ನಗರದಲ್ಲಿ ಯಾತ್ರೆ ನಡೆಯಲಿದೆ. ಉಳಿದಂತೆ ಗುಂಡ್ಲುಪೇಟೆ. ಎಚ್.ಡಿ.ಕೋಟೆ, ಚಾಮುಂಡೇಶ್ವರಿ, ಹುಣಸೂರಿನಲ್ಲಿಯೂ ಯಾತ್ರೆ ನಡೆಸಲಾಗು ವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.