ಜಿಗ್ನೇಶ್ ಮೇವಾನಿ ಸೇರಿ 14 ಕಾಂಗ್ರೆಸ್ ಶಾಸಕರು ಅಮಾನತು, ಸದನದಲ್ಲಿ ಹೈಡ್ರಾಮ!

By Suvarna NewsFirst Published Sep 21, 2022, 4:09 PM IST
Highlights

ಅಶಿಸ್ತಿನ ನಡವಳಿ ತೋರಿದ ಜಿಗ್ನೇಶ್ ಮೇವಾನಿ ಸೇರಿದಂತೆ 14 ಕಾಂಗ್ರೆಸ್ ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿದೆ. ಗುಜರಾತ್ ವಿಧಾನಸಭೆಯಲ್ಲಿ ಭಾರಿ ಹೈಡ್ರಾಮವೇ ನಡೆದಿದೆ. ಸ್ಪೀಕರ್ ನಿರ್ಧಾರ ಇದೀಗ ಮತ್ತೊಂದು ಸುತ್ತಿನ ರಾಜಕೀಯ ಸಮರಕ್ಕೆ ವೇದಿಕೆಯಾಗಿದೆ.
 

ಗುಜರಾತ್(ಸೆ.21):  ಗುಜರಾತ್ ವಿಧಾನಸಭಾ ಕಲಾಪದಲ್ಲಿ ಭಾರಿ ಹೈಡ್ರಾಮ ನಡೆದಿದೆ. ಸರ್ಕಾರದ ವಿರುದ್ಧ ನಡೆಸುತ್ತಿರುವ ನಿರುದ್ಯೋಗಿಗಳ ಸಮರ, ಸರ್ಕಾರಿ ಉದ್ಯೋಗಿಗಳ ಪ್ರತಿಭಟನೆ ವಿಚಾರ ಮುಂದಿಟ್ಟು ಚರ್ಚೆಗೆ ಅವಕಾಶಕ್ಕೆ ಪಟ್ಟು ಹಿಡಿದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಕಾಂಗ್ರೆಸ್ ಶಾಸಕರು ಸದನ ಬಾವಿಗಿಳಿದಿದ್ದಾರೆ. ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿ ಸದನದ ಬಾವಿಯಲ್ಲಿ ಅಶಿಸ್ತಿನಿಂದ ನಡೆದುಕೊಂಡಿದ್ದಾರೆ. ಇದರಿಂದ ತಕ್ಷಣೆ ಸ್ಪೀಕರ್ ನಿಮಾಬೆನ್ ಆಚಾರ್ಯ, ಅಶಿಸ್ತಿನ ನಡವಳಿಕೆ ಕಾರಣ ಕಾಂಗ್ರೆಸ್‌ನ 14 ಶಾಸಕರು ಹಾಗೂ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿಯನ್ನು ಸದನದಿಂದ ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದಾರೆ. ಮಾರ್ಶಲ್‌ಗಳ ಮೂಲಕ ಶಾಸಕರನ್ನು ಸದನದಿಂದ ಹೊರಕ್ಕೆ ಹಾಕಲಾಯಿತು. 

ಉದ್ಯೋಗಳಿಗೆ ನ್ಯಾಯ ಕೋಡಿ, ಅರಣ್ಯ ಅಧಿಕಾರಿಗಳು ಹಾಗೂ ನೌಕಕರಿಗೆ ನ್ಯಾಯ ಕೊಡಿ, ನಿವೃತ್ತ ಅಧಿಕಾರಿಗಳ ಹೋರಾಟಕ್ಕೆ ಸ್ಪಂದನೆ ನೀಡಿ ಎಂದು ಶಾಸಕರು ಸದನ(Gujarat assembly) ಬಾವಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರದ ಹಲವು ವಿಭಾಗದ ನೌಕರರು ಸರ್ಕಾರದ ವಿರುದ್ದ ಪ್ರತಿಭಟನೆ(Protest) ಮಾಡುತ್ತಿದ್ದಾರೆ. ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ನ್ಯಾಯ ಕೊಡಿ ಎಂದು ಶಾಸಕರು ಸದನದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ವಿರೋಧ ಪಕ್ಷಗಳ ಶಾಸಕರು ತಮ್ಮ ತಮ್ಮ ಆಸನದಲ್ಲಿ ಕುಳಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್(Speaker) ಮನವಿ ಮಾಡಿ್ದ್ದಾರೆ.

LG ಮೆಡಿಕಲ್ ಕಾಲೇಜು ಇನ್ಮುಂದೆ ಪ್ರಧಾನಿ Narendra Modi ಕಾಲೇಜು, ಮರುನಾಮಕರಣದ ಹಿಂದಿದೆ ರೋಚಕ ಕಾರಣ!

ಸ್ಪೀಕರ್ ಮನವಿಗೆ ಕ್ಯಾರೇ ಅನ್ನದ ವಿಪಕ್ಷಗಳ ಶಾಸಕರು ಪ್ರತಿಭಟನೆ ಮುಂದುವರಿಸಿದ್ದಾರೆ. ಬ್ಯಾನರ್, ಪ್ಲೇಕಾರ್ಡ್ ಹಿಡಿದು ಘೋಷಣೆಗಳನ್ನು ಕೂಗಿ್ದ್ದಾರೆ. ಸದನದ ಶಿಸ್ತು ಮೀರಿ ನಡೆದುಕೊಂಡ ಕಾರಣಕ್ಕೆ ಸ್ವೀಕರ್ ಒಟ್ಟು 15 ಶಾಸಕರನ್ನು(Jignesh mevani and 14 MLA) ಅಮಾನತು ಮಾಡಿದ್ದಾರೆ. ಧ್ವನಿಮತದ ಮೂಲಕ 15 ಶಾಸಕರನ್ನು ಅಮಾನತು ಮಾಡಿದ್ದಾರೆ. 

ಗುಜರಾತ್ ವಿಧಾನಸಭಾ ಚುನಾವಣೆ(Gujarat Assembly Election) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಹೋರಾಟ, ಪ್ರತಿಭಟನೆ, ಕೂಗಾಟ ಹೆಚ್ಚಾಗಿದೆ. ಆರೋಪ ಪ್ರತ್ಯರೋಪಗಳು ತೀವ್ರಗೊಂಡಿದೆ. ಈ ಬಾರಿ ಆಮ್ ಆದ್ಮಿ ಪಾರ್ಟಿ(AAP) ಗುಜರಾತ್ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಇತ್ತ ಆಡಳಿತರೂಡ ಬಿಜೆಪಿ(BJP) ತನ್ನ ಭದ್ರಕೋಟೆ ಉಳಿಸಿಕೊಳ್ಳುವ ತಯಾರಿಯಲ್ಲಿದ್ದರೆ, ಬಿಜೆಪಿ ಹಾಗೂ ಆಪ್ ಹೋರಾಟದಲ್ಲಿ ಲಾಭ ಮಾಡಿಕೊಳ್ಳಲು ಕಾಂಗ್ರೆಸ್(Congress) ತುದಿಗಾಲಲ್ಲಿ ನಿಂತಿದೆ.

ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ತನಿಖೆ ನಡೆಸಿದ್ದ ಐಪಿಎಸ್‌ ಅಧಿಕಾರಿ ಸತೀಶ್‌ ವರ್ಮ ಸೇವೆಯಿಂದ ವಜಾ!

ಗುಜರಾತ್‌ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ ಆಯೋಗ
ವರ್ಷಾಂತ್ಯಕ್ಕೆ ನಡೆಯಬೇಕಿರುವ ಗುಜರಾತ್‌ ವಿಧಾನ ಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕೇಂದ್ರ ಚುನಾವಣಾ ಆಯೋಗ, ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ನಿಯೋಗವು, ಗುಜರಾತ್‌ ಪೋಲಿಸ್‌ ನಿರ್ದೇಶಕರು, ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಆಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದೆ. ಚುನಾವಣಾ ಆಯೋಗ ನೇಮಕಗೊಳಿಸಿದ 9 ಜನರ ತಂಡ ಶುಕ್ರವಾರದಿಂದ ಭಾನುವಾರದವರೆಗೆ 3 ದಿನಗಳ ಕಾಲ ಅಹಮದಾಬಾದ್‌ಗೆ ಭೇಟಿ ನೀಡಿ, ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದೆ. ಇವಿಎಂ ಮೆಷಿನ್‌, ಮತಗಟ್ಟೆಗಳಲ್ಲಿನ ಸೌಲಭ್ಯ, ಸಿಬ್ಬಂದಿಗಳು, ಸಂಪರ್ಕ ವ್ಯವಸ್ಥೆ, ಕಾನೂನು ಸುವ್ಯವಸ್ಥೆ, ತರಬೇತಿ ಮುಂತಾದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದೆ.
 

click me!