ಬೆಳಗ್ಗೆ ಬಿಜೆಪಿ ಪಕ್ಷ ಸೇರಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಂಜೆ ಹೊತ್ತಿಗೆ ಮರಳಿ ಕಾಂಗ್ರೆಸ್ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಬಂಟ್ವಾಳ, (ಫೆ.07): ಬೆಳಗ್ಗೆ ಬಿಜೆಪಿ ಪಕ್ಷ ಸೇರಿದ್ದ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯರೊಬ್ಬರು ಸಂಜೆ ಮತ್ತೆ ತನ್ನ ಕಾಂಗ್ರೆಸ್ ಪಕ್ಷಕ್ಕೆ ಮರಳಿದ ಅಚ್ಚರಿ ಘಟನೆಯೊಂದು ಬಂಟ್ವಾಳದಲ್ಲಿ ನಡೆದಿದೆ .
ಹೌದು... ವೀರಕಂಭ ಗ್ರಾಮ ಪಂಚಾಯಿತಿ ಸದಸ್ಯೆ ಲಲಿತಾ ಅವರೇ ಬೆಳಗ್ಗೆ ಬಿಜೆಪಿ ಸೇರಿ ಸಂಜೆ ಕಾಂಗ್ರೆಸ್ ಗೆ ಮರಳಿದ್ದಾರೆ. ಕಾಂಗ್ರೆಸ್ ನ ಬೆಂಬಲಿತ ಸದಸ್ಯೆಯಾಗಿದ್ದ ವೀರಕಂಬ ಪಂಚಾಯತಿ ಸದಸ್ಯೆ ಲಲಿತಾ ಭಾನುವಾರ ಬಿಜೆಪಿ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಯುವ ಕಾಂಗ್ರೆಸ್ ಚುನಾವಣೆ ರಿಸಲ್ಟ್ ಬೆನ್ನಲ್ಲೇ ಪಕ್ಷದಲ್ಲಿ ಭಿನ್ನಮತ: ಡಿಕೆಶಿ ಹೇಳಿದ್ದು ಹೀಗೆ
ವೀರಕಂಬ ಪಂಚಾಯಿತಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಮಬಲವಾಗಿದ್ದರಿಂದ ಲಲಿತಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು, ನಂತರ ನಡೆದ ರಾಜಕೀಯ ಬೆಳವಣಿಯ ಮೂಲಕ ಮತ್ತೆ ಅವರು 'ಕೈ' ಮಾಜಿ ಸಚಿವ ರಮಾನಾಥ್ ರೈ ನೇತೃತ್ವದಲ್ಲಿ ಮತ್ತೆ ಲಲಿತಾ ಅವರು ಕಾಂಗ್ರೆಸ್ ಸೇರ್ಪಡೆಯಾದರು.