ಉತ್ತರ ಕರ್ನಾಟಕ ಸಮಸ್ಯೆ ಕುರಿತು ಯಾರೇ ಚರ್ಚಿಸಿದರೂ ಸ್ಪಂದಿಸಲು ಸರ್ಕಾರ ಬದ್ಧ: ಡಿಕೆಶಿ

By Kannadaprabha News  |  First Published Dec 12, 2023, 1:00 AM IST

ಉತ್ತರ ಕರ್ನಾಟಕದ ಸಮಸ್ಯೆಯ ಕುರಿತು ಯಾರೇ ಶಾಸಕರು ಚರ್ಚಿಸಿದರೂ ಅದಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. 


ಬೆಳಗಾವಿ (ಡಿ.11): ಉತ್ತರ ಕರ್ನಾಟಕದ ಸಮಸ್ಯೆಯ ಕುರಿತು ಯಾರೇ ಶಾಸಕರು ಚರ್ಚಿಸಿದರೂ ಅದಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತಿದೆ. ಈ ಭಾಗದ ಸಮಸ್ಯೆಯ ಬಗ್ಗೆ ಯಾರೇ ಶಾಸಕರು ಚರ್ಚೆ ನಡೆಸಿದರೇ ಅದಕ್ಕೆ ಉತ್ತರ ಕೊಡಲು ಸರ್ಕಾರ ಬದ್ಧವಾಗಿದೆ ಎಂದರು.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಸಮಗ್ರ ಕರ್ನಾಟಕ ನಮ್ಮದು. ವಿಧಾನಸಭೆಯಲ್ಲಿ ಸಹಕಾರ ಕೊಡಲು ನಾವು ಸಿದ್ಧ. ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾವನೆ ಬರಲಿ ಖಂಡಿತವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು. ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ತೆರವು ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹತ್ತಿರ ಮಾತನಾಡಿ ಎಂದರು. ಪಾರ್ಲಿಮೆಂಟ್ ಅಫೆರ್ಸ್, ಸ್ಪೀಕರ್ ಅವರ ಸ್ವತ್ತು ಅದು. ಕಲಾಪದಲ್ಲಿ ಬಿಜೆಪಿ ನಾಯಕರ ಮಧ್ಯೆ ಒಮ್ಮತ ಮೂಡದ ವಿಚಾರಕ್ಕೆ ಉತ್ತರಿಸಿ, ಅವರ ಪಕ್ಷದ ವಿಚಾರ ಅವರಿಗೆ ನಮಗೆ ಬೇಡ ಎಂದರು.

Tap to resize

Latest Videos

ಲೋಕಸಭೆಗೆ ಸ್ಪರ್ಧಿಸಿ: ‘ಬಣ್ಣ ಹಚ್ಚಿ, ನಟಿಸಿ ಜನರನ್ನು ರಂಜಿಸುವುದಷ್ಟೇ ನಮ್ಮ ತಂದೆಯಿಂದ ನಮಗೆ ಬಂದಿರುವ ಬಳುವಳಿ. ಹೀಗಾಗಿ ರಾಜಕಾರಣ ನನ್ನ ಕ್ಷೇತ್ರವಲ್ಲ. ಆದರೆ, ಪತ್ನಿ ಗೀತಾ ಅವರಿಗೆ ರಾಜಕೀಯ ಆಸಕ್ತಿ ಇದ್ದು, ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ.’ ಹೀಗೆ ಹೇಳುವ ಮೂಲಕ ‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್‌ ಅವರು ತಮ್ಮ ಪತ್ನಿ ಗೀತಾ ಶಿವರಾಜಕುಮಾರ್‌ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯ ಸುಳಿವು ನೀಡಿದರು.

ಕೊಬ್ಬರಿಗೆ ಬೆಂಬಲ ಬೆಲೆಗಾಗಿ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ: ಎಚ್‌ಡಿಕೆ

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಬಹಿರಂಗ ಆಹ್ವಾನ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ತಮಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ನಟನೆಯಷ್ಟೇ ತಂದೆಯಿಂದ ಬಂದಿರುವ ಬಳುವಳಿ ಎಂದು ಸ್ಪಷ್ಟಪಡಿಸಿದರು. ಜತೆಗೆ, ಪತ್ನಿ ಗೀತಾಗೆ ರಾಜಕೀಯ ಆಸಕ್ತಿ ಇದೆ. ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಮನೆಯವರು ಆಸೆ ಪಟ್ಟಾಗ ನೆರವೇರಿಸಬೇಕು. ಒಳ್ಳೆಯ ಕೆಲಸ ಯಾರಿಂದ ಆದರೆ ತಪ್ಪೇನಿದೆ? ರಾಜಕೀಯಕ್ಕೆ ನಾನು ಬೇಡ. ಪತ್ನಿ ಮುಂದುವರೆಯಲಿ ಎಂದು ಹೇಳಿದರು.

click me!