ನಮ್ಮ ರಕ್ಷಣೆಗೆ ಸರ್ಕಾರ ಬರುವುದಿಲ್ಲ, ನಾವೇ ಡೈರೆಕ್ಟ್ ಆಕ್ಷನ್‌ಗೆ ಹೋಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರು (ಜೂ.17): ಬಿಜೆಪಿ ಅಧಿಕಾರದ ಅವಧಿಯಲ್ಲಿ ತಿದ್ದುಪಡಿ ಮಾಡಲಾಗಿದ್ದ ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಂಡಿಸಿದ್ದಾರೆ. ಜತೆಗೆ, ನಮ್ಮ ರಕ್ಷಣೆಗೆ ಸರ್ಕಾರ ಬರುವುದಿಲ್ಲ, ನಾವೇ ನೇರ ಆ್ಯಕ್ಷನ್‌ಗೆ ಇಳಿಯಬೇಕು ಎಂದು ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ವರಕ್ಷಣೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ನಾವು ಯೋಚನೆ ಮಾಡಬೇಕು. ಸ್ವರಕ್ಷಣೆಗೆ ಕೆಲವರು ದೊಣ್ಣೆ, ಇನ್ನೂ ಕೆಲವರು ಪರವಾನಗಿ ಇರುವ ಪಿಸ್ತೂಲ್ ಇಟ್ಟುಕೊಂಡಿರುತ್ತಾರೆ ಎಂದು ಸೂಚ್ಯವಾಗಿ ತಿಳಿಸಿದರು.
ನಾವು ಈ ಮತಾಂತರದಿಂದ ನಮ್ಮ ಸಮಾಜವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವ ಕುರಿತು ಮಠಾಧೀಶರು ಚರ್ಚಿಸಬೇಕು. ಸಾಮ, ದಾನ, ಭೇದ, ದಂಡ ನಾಲ್ಕನ್ನೂ ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು ಎಂದು ಹೇಳಿದರು. ಈ ಸರ್ಕಾರ ನಮ್ಮ ಪರವಾಗಿಲ್ಲ, ಕಳ್ಳರ ಪರ, ಮತಾಂತರದ ಪರವಾಗಿದೆ. ನಮ್ಮ ಸಮಾಜ, ಸಮುದಾಯವನ್ನು ರಕ್ಷಣೆ ಮಾಡಿಕೊಳ್ಳಲು ನಾವೇ ಸ್ವತಃ ಕ್ರಮ ಕೈಗೊಳ್ಳಬೇಕು. ನಾವೇ ನಮ್ಮ ಆತ್ಮರಕ್ಷಣೆಗೆ ಮುಂದಾಗಲೇಬೇಕಾದ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ಸಿಗರು ಮತಾಂತರ ಮಾಡುವ ನೀತಿ ಪರವಾಗಿದ್ದಾರೆ ಎಂದು ಆರೋಪಿಸಿದರು. ಮನೆಗೆ ಬೀಗ ಹಾಕಿ ಕಳ್ಳರಿಂದ ರಕ್ಷಣೆ ಪಡೆಯುತ್ತೇವೆ.
undefined
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ತರಾಟೆ
ನಾವು ಹಾಕಿದ ಮತಾಂತರ ನಿಷೇಧದ ಕಾಯ್ದೆಯ ಬೀಗವನ್ನು ಕಾಂಗ್ರೆಸ್ಸಿಗರು ತೆಗೆದಿದ್ದಾರೆ. ಹೀಗಾಗಿ ಮನೆಯ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಮನೆಯ ಯಜಮಾನನದ್ದು. ಇಂದು ವಿವಿಧ ಸಮುದಾಯದ ಮುಖಂಡರು, ಮಠಾಧೀಶರು ಕುಳಿತು ಆಲೋಚನೆ ಮಾಡಬೇಕು. ದೇಶ, ಹಿಂದೂ ಸಮಾಜ ಉಳಿಸಿಕೊಳ್ಳಲು ಮಠಾಧೀಶರು, ಸಮಾಜದ ಮುಖಂಡರು, ಜಗದ್ಗುರುಗಳು, ಸನ್ಯಾಸಿಗಳ ಮಹಾಪಂಚಾಯತ್ ಕರೆಯಬೇಕು ಎಂದರು. ವಿವಿಧ ಸಮಾಜದ ಮಠಾಧೀಶರು ಮರು ಮತಾಂತರಕ್ಕೆ ಮುಂದಾಗಬೇಕು. ಬೇರೆ, ಬೇರೆ ಕಾರಣಕ್ಕೆ ಹಿಂದೂ ಸಮಾಜದಿಂದ ದೂರ ಹೋದವರನ್ನು ಮರಳಿ ಕರೆತರಬೇಕು ಎಂದು ಆಗ್ರಹಿಸಿದ ಅವರು, ಹೇಗಿದ್ದರೂ ಮತಾಂತರಕ್ಕೆ ಮುಕ್ತವಾದ ಅವಕಾಶವನ್ನು ಸರ್ಕಾರ ನೀಡಿದೆ. ಹಿಂದೂ ಧರ್ಮಕ್ಕೆ ಮರು ಮತಾಂತರಕ್ಕೆ ಮುಂದಾಗಬೇಕು ಎಂದು ಹೇಳಿದರು.
ಅನ್ನಭಾಗ್ಯಕ್ಕೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ: ಕುರುಬೂರು ಶಾಂತಕುಮಾರ್
ದಲ್ಲಾಳಿಗಳ ಕಪಿಮುಷ್ಠಿ: ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ರೈತ ಸಿಲುಕಿ ಒದ್ದಾಡಬೇಕೆಂಬುದು ಕಾಂಗ್ರೆಸ್ ಉದ್ದೇಶ. ರೈತರನ್ನ ಹೇಗೆ ದಿಕ್ಕು ತಪ್ಪಿಸುತ್ತಿದ್ದಾರೆ. ಸುಳ್ಳನ್ನೇ ಹೇಳುತ್ತಿದ್ದಾರೆ ಎಂದು ರೈತರಿಗೆ ಅರಿವಾಗುತ್ತೆ. ರೈತರಿಗೆ ಸತ್ಯದ ಅರಿವಾಗುವ ಕಾಲ ದೂರ ಇಲ್ಲ, ರೈತರು ಉದ್ದಿಮೆದಾರರಾಗುವ ಅವಕಾಶವನ್ನು ಇದು ತಪ್ಪಿಸುತ್ತೆ. ಇದರ ಅಡ್ಡ ಪರಿಣಾಮ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ, ಕಾಂಗ್ರೆಸ್ ಕೂಡ ಅಡ್ಡಡ್ಡ ಮಲಗುತ್ತದೆ ಎಂದರು. ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದತಿಗೆ ಮುಂದಾದ ತನ್ನ ಬೆಳೆಗೆ ಎಲ್ಲಿ ಹೆಚ್ಚು ಬೆಲೆ ಸಿಗುತ್ತೋ ರೈತ ಅಲ್ಲೇ ಮಾರಬಹುದಿತ್ತು, ಮುಕ್ತ ಮಾರಾಟಕ್ಕೆ ಎಪಿಎಂಸಿ ಕಾಯ್ದೆ ತಿದ್ದುಪಡಿಯಲ್ಲಿ ಅವಕಾಶವಿತ್ತು, ಬಿಜೆಪಿ, ರೈತರನ್ನ ದಲ್ಲಾಳಿಗಳಿಂದ ಮುಕ್ತ ಮಾಡಿತ್ತು, ಕಾಂಗ್ರೆಸ್ ದಲ್ಲಾಳಿಗಳ ಕಪಿಮುಷ್ಟಿಗೆ ಕೊಡುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡಿದರೆ ರೈತರು ಪರವಾನಿಗೆ ಪಡೆದಿರುವ ದಲ್ಲಾಳಿಗಳಿಗೆ ಮಾರಬೇಕು. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ, ಇಂದಲ್ಲ ನಾಳೆ ರೈತರಿಗೆ ಸತ್ಯದ ಅರಿವಾಗುತ್ತೆ ಎಂದು ಹೇಳಿದರು.