ಬಿಜೆಪಿಗೆ ಸೇರಲು ರಮೇಶ್ ಮತ್ತು ತಂಡ ಮುಂದಿಟ್ಟಿದ್ದ ಆ ಒಂದೇ ಒಂದು ಕಂಡಿಶನ್!

By Web Desk  |  First Published Nov 15, 2019, 5:42 PM IST

ಆಪರೇಶನ್ ಕಮಲದ ಗುಟ್ಟು ರಟ್ಟು ಮಾಡಿದ ರಮೇಶ್ ಜಾರಕಿಹೊಳಿ/ ಗೋಕಾಕ್ ಬಿಜೆಪಿ ಸಭೆಯಲ್ಲಿ ಭಾಷಣ/ ಅಮಿತ್ ಶಾ ಭೇಟಿ ಮಾಡಿದ ಕತೆ ಹೇಳಿದ ಬೆಳಗಾವಿ ಸಾಹುಕಾರ


ಬೆಳಗಾವಿ(ನ. 15)  ಗೋಕಾಕ್ ಬಿಜೆಪಿ ಸ್ವಾಗತ ಸಮಾರಂಭದಲ್ಲಿ ರಮೇಶ್ ಭಾಷಣ ಮಾಡಿದ್ದಾರೆ. ಹದಿನಾಲ್ಕು ತಿಂಗಳ ಹಿಂದೆ ನಾನು ಯಡಿಯೂರಪ್ಪ ಭೇಟಿಯಾಗಿದ್ದೆ ಆ ನಂತರ ಹೈದರಾಬಾದ್ ನಲ್ಲಿ ಅಮಿತ್ ಶಾ ಭೇಟಿಯಾದೆ. ಮುರಳೀಧರರಾವ್ ಜೊತೆ ಅಮಿತ್ ಶಾ ಭೇಟಿಯಾಗಿದ್ದೆ.  ಬಿಎಸ್‌ವೈ ಸಿಎಂ ಮಾಡಿದ್ರೆ ಪಕ್ಷಕ್ಕೆ ಬರ್ತೀವಿ ಅಂತಾ ಅಮಿತ್ ಶಾ ಅವರಿಗೆ ಹೇಳಿದ್ದೆ ಎಂದು ಹದಿನಾಲ್ಕು ತಿಂಗಳ ಹಿಂದಿನ ರಹಸ್ಯ ಹೊರಹಾಕಿದರು.

ಕಾಂಗ್ರೆಸ್ ಪಕ್ಷದ ದುರಂಹಕಾರಿ ಮನೋಭಾವನೆಯಿಂದ ಸರ್ಕಾರ ಬಿದ್ದಿದೆ. ಡಿಕೆಶಿ ಭ್ರಷ್ಟಾಚಾರದಿಂದ ಸರ್ಕಾರ ಬಿದ್ದಿದೆ. ಸಿದ್ದರಾಮಯ್ಯ ಅವರ ದುರಾಡಳಿತದಿಂದ ಸರ್ಕಾರ ಬಿದ್ದಿದೆ . ಅನಿವಾರ್ಯವಾಗಿ ಬಿಜೆಪಿಗೆ ಹೋಗಬೇಕಿತ್ತು ಹೋಗಿದ್ದೇವೆ. 2018ರ‌ ವಿಧಾನಸಭೆ ರಿಸಲ್ಟ್ ಬಂದ ಕೂಡಲೇ ಗೆದ್ದ ಎಲ್ಲರೂ ಬೆಂಗಳೂರಿಗೆ ಹೋಗಿದ್ದರು. ಸಿದ್ದರಾಮಯ್ಯ ನಂಬಿ ನಾವೆಲ್ಲ ರಾಜಕಾರಣ ಮಾಡಿದ್ದೇವು ಸಿದ್ದರಾಮಯ್ಯ ಅಂದು ಸೈಡ್ ಲೈನ್ ಆಗಿದ್ದರು. ಅಂದು ಡಿಕೆ ಶಿವಕುಮಾರ್ ಕೈಯಲ್ಲಿ ಕಾಂಗ್ರೆಸ್ ಇದ್ದ ಹಾಗೇ ಮಾಡಲಾಯಿತು ಎಂದರು.

Tap to resize

Latest Videos

ರಮೇಶ್ ಜಾರಕಿಹೊಳಿ ನೇತೃತ್ವದ ಸರ್ಕಾರ ಬಂತಾ!?

ಮೇ.15‌ರಂದು ಅದನ್ನ‌ ನೋಡಿ ಸರ್ಕಾರ ಕೆಡವಲು ತೀರ್ಮಾನ ಮಾಡಿದ್ದೇವು. ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ‌ ಜಗಳ ಬಂದಿದ್ದಕ್ಕೆ ಅನಿವಾರ್ಯವಾಗಿ ನನ್ನ ಸಚಿವ ಮಾಡಿದ್ದರು. ಜಾರಕಿಹೊಳಿ‌ ಕುಟುಂಬ ಮುಗಿಸುವ ಉದ್ದೇಶ ಸಿದ್ದರಾಮಯ್ಯ ಅವರದ್ದಾಗಿತ್ತು. ನಾನು ಹುಂಬ ಇದ್ದೆ ಅನ್ನೋ ಕಾರಣಕ್ಕೆ ಮೂರು ತಿಂಗಳು ಸಚಿವ ಮಾಡಿ ನಂತರ ಕೆಳಗಿಳಿಸುವ ಪ್ಲಾನ್ ಮಾಡಿದ್ದರು. ರಮೇಶ್ ಜಾರಕಿಹೊಳಿ‌ಯನ್ನು ಯಾಕೆ ಸಚಿವನನ್ನಾಗಿ ಮಾಡಿದೆ ಅನ್ನೋದು ಸಿದ್ದರಾಮಯ್ಯ ತಲೆಯಲ್ಲಿ ಬಂತು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳಗಾವಿಯಲ್ಲಿ ಪಕ್ಷ ಸಂಘಟನೆ ಮಾಡಿದೆ. ಇದನ್ನ ನೋಡಿ ನನ್ನನ್ನು ಮುಗಿಸುವ ಉದ್ದೇಶದಿಂದಲೇ ಸತೀಶ್ ಅವರಿಗೆ ಪಟ್ಟ ಕಟ್ಟಲಾಯಿತು ಎಂದು ಆರೋಪ ಮಾಡಿದರು.

ರಾಣೇಬೆನ್ನೂರಿಗೆ ಬಿಜೆಯಿಂದ ಅಚ್ಚರಿ ಅಭ್ಯರ್ಥಿ

ಸತೀಶ್ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನವೇ ಸರ್ಕಾರ ಬೀಳಿಸುವ ನಿರ್ಣಯ ಮಾಡಿದ್ದೇವು. ಶಂಕರ್ ಮತ್ತು ನಾನು ನಿರ್ಣಯ ಮಾಡಿದ್ದೇವು. ನಾನು ಯಡಿಯೂರಪ್ಪ ಭೇಟಿಯಾದಾಗ ರಮೇಶ್ ನಿಮ್ಮನ್ನ ನಾನು ನಂಬಬಹುದಾ ಅಂದರು. ಎನೋ ಕುತಂತ್ರ ಇದೆ ಎಂದು ಯಡಿಯೂರಪ್ಪ ಅಂದುಕೊಂಡಿದ್ದರು. ಆ ನಂತರ ಹೈದ್ರಾಬಾದ್ ನಲ್ಲಿ ಅಮಿತ್ ಶಾ ಜತೆಗೆ ಮೀಟಿಂಗ್ ಮಾಡಿದರು. ಯಡಿಯೂರಪ್ಪ ಅವರನ್ನ ಸಿಎಂ ಮಾಡಿದ್ರೆ ನಾವು ಬಿಜೆಪಿ ಬರ್ತೇವಿ‌ ಅಂದೆ. ಅದಕ್ಕೆ ಅಮಿತ್ ಶಾ ಗೋ ಅಹೆಡ್ ಅಂದರು. ಆಗ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬೇಡಾ ವಾಪಸ್ ಹೋಗಿ ಅಂದರು. ಆದರೂ ಬಿಡದೆ ನಾವು ಯಶಸ್ವಿಯಾದೆವು ಎಂದು ಆಪರೇಶನ್ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ನನ್ನದು ಇದೇ ಕೊನೆಯ ಪಕ್ಷ ಮುಂದೆ ಯಾವ ಪಕ್ಷಕ್ಕೂ ನಾನು ಹೋಗಲ್ಲ ಎಂಬ ವಾಗ್ದಾನವನ್ನು ರಮೇಶ್ ಇದೇ ಸಂದರ್ಭದಲ್ಲಿ ನೀಡಿದರು.

 

click me!