Congress Leader Ravi Naik: ಕಾಂಗ್ರೆಸ್‌ಗೆ ಬಿಗ್ ಶಾಕ್‌ : ಮಾಜಿ ಸಿಎಂ ಬಿಜೆಪಿಗೆ

By Kannadaprabha News  |  First Published Dec 8, 2021, 7:09 AM IST
  • ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ರವಿ ನಾಯಕ್‌ ರಾಜೀನಾಮೆ
  • ರವಿ ನಾಯಕ್‌ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ಸೇರ್ಪಡೆ

ಪಣಜಿ(ಡಿ.08): ಗೋವಾದ (Goa)  ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ರವಿ ನಾಯಕ್‌ (Ravi Naik) ತಮ್ಮ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ(bjp) ಸೇರಿದ್ದಾರೆ. ಇವರ ರಾಜೀನಾಮೆಯೊಂದಿಗೆ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸ್ಥಾನ 3ಕ್ಕೆ ಕುಸಿದಿದೆ.  ಇದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಲೂಜಿನ್ಹೋ ಫಲೆರಿಯೋ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಎಂಸಿಗೆ ಸೇರ್ಪಡೆಯಾಗಿದ್ದರು. ಪೋಂಡಾ ವಿಧಾನಸಭೆಯ ಶಾಸಕರಾಗಿದ್ದ ನಾಯಕ್‌ ಅವರು ತಮ್ಮ ಇಬ್ಬರು ಮಕ್ಕಳೂ ಕಳೆದ ವರ್ಷವೇ ಬಿಜೆಪಿಗೆ ಸೇರಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಗಿರೀಶ್‌ ಛೋಡಂಕರ್‌, ‘ಇವರೊಂದಿಗಿನ ಸಂಬಂಧವನ್ನು ಪಕ್ಷ ಈ ಹಿಂದೆಯೇ ಕಳೆದುಕೊಂಡಿತ್ತು, ಇವರನ್ನು ಮುಂದಿನ ಚುನಾವಣೆಗೆ ಪಕ್ಷದ ಅಭ್ಯರ್ಥಿ ಎಂದು ಕಾಂಗ್ರೆಸ್‌ ಪರಿಗಣಿಸಿರಲಿಲ್ಲ’ ಎಂದು ಹೇಳಿದ್ದಾರೆ

Tap to resize

Latest Videos

undefined

ಒಂದು ತಿಂಗಳಲ್ಲೇ ಪಕ್ಷ ತೊರೆದ ನಟಿ :  ಬಂಗಾಳಿ ನಟಿ- ರಾಜಕಾರಣಿ (actress and politician) ಶ್ರಾವಂತಿ ಚಟರ್ಜಿ (Sravathi Chatterjee) ಭಾರತೀಯ ಜನತಾ ಪಕ್ಷವನ್ನು(BJP) ತೊರೆಯುವುದಾಗಿ ಗುರುವಾರ ಘೋಷಿಸಿದ್ದಾರೆ. 

ನಾನು ಕಳೆದ ರಾಜ್ಯ ಚುನಾವಣೆಯಲ್ಲಿ (Election) ಪ್ರತಿನಿಧಿಸಿದ ಬಿಜೆಪಿಯೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ (west Bengal) ಬಿಜೆಪಿಯ ಕಾರ್ಯತತ್ಪರತೆ, ಪ್ರಾಮಾಣಿಕತೆಯ ಕೊರತೆಯಿಂದ ನಾನು ಪಕ್ಷ ತೊರೆಯುವ ನಿರ್ಣಯ ತೆಗೆದುಕೊಂಡಿದ್ದೇನೆ ಎಂದು  ಚಟರ್ಜಿ ಟ್ವೀಟ್‌ (tweet) ಮಾಡಿದ್ದಾರೆ. 

ಈ ವರ್ಷ ಮಾರ್ಚ್ ತಿಂಗಳಲ್ಲಿ ಶ್ರಾಬಂತಿ ಬಿಜೆಪಿ ಸೇರಿದ್ದರು. ಕೇವಲ 7 ತಿಂಗಳಲ್ಲೇ ನಟಿ ರಾಜೀನಾಮೆ ನೀಡಿದ್ದು, ಅವರು ಸದ್ಯದಲ್ಲೇ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (TMC) ಸೇರಲಿದ್ದಾರೆ ಎಂಬ ಊಹೆಗೆ ಎಡೆ ಮಾಡಿಕೊಟ್ಟಿದೆ.

ನಟಿ ಶ್ರಬಂತಿ ಬಗ್ಗೆ ಒಂದಷ್ಟು :   ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಇಲ್ಲಿನ ಖ್ಯಾತ ನಟಿ ಶ್ರಬಂತಿ ಚಟರ್ಜಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸೋಮವಾರ ಅಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಇವರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆಂದೂ ಹೇಳಲಾಗಿದೆ. ಇವರು ಬಂಗಾಳಿಗರಿಗೆ ಹೊಸಬರಲ್ಲ. ಬಂಗಾಳದ ಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದಾರೆ. 13 ಆಗಸ್ಟ್ 1987ರಲ್ಲಿ ಜನಿಸಿದ, 33 ವರ್ಷದ ಈ ನಟಿ  23 ವರ್ಷದ ಹಿಂದೆ 1997ರಲ್ಲಿ ತಮ್ಮ ಮೊದಲ ಬಂಗಾಳಿ ಸಿನಿಮಾ ಮಾಡಿದ್ದರು. ಅಂದು ಅವರು ಕೇವಲ 10 ವರ್ಷದವರಾಗಿದ್ದರು. ಸಿನಿಮಾದಲ್ಲಿ ಅವರೆಷ್ಟು ಗ್ಲಾಮರಸ್ ಆಗಿದ್ದಾರೋ, ರಿಯಲ್ ಲೈಫ್‌ನಲ್ಲೂ ಅವರು ಅಷ್ಟೇ ಬೋಲ್ಡ್ ಆಗಿದ್ದಾರೆ.

ಶ್ರಬಂತಿ ಮಾಯರ್ ಬಾದೊನ್ ಚಿತ್ರದಲ್ಲಿ ಬಾಲ ನಟಿಯಾಗಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು ಇದಾದ ಬಳಿಕ 2003 ರಲ್ಲಿ ತೆರೆ ಕಂಡ ಚಾಂಪಿಯನ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು.

ಶ್ರಬಂತಿ ಓರ್ವ ಅದ್ಭುತ ಮನಟಿ ಮಾತ್ರವಲ್ಲ, ಓರ್ವ ಅತ್ಯುತ್ತಮ ಡಾನ್ಸರ್ ಕೂಡಾ ಆಗಿದ್ದಾರೆ. ಈವರೆಗೆ ಸುಮಾರು 15 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಬಿಡುಗಡೆಯಾಗಲಿರುವ ವೆಬ್ ಸರಣಿಯಲ್ಲೂ ಶ್ರಬಂತಿ ಕೆಲಸ ಮಾಡಿದ್ದಾರೆ.

ಈವರೆಗೆ ಮೂರು ಮದುವೆಯಾಗಿರುವ ಶ್ರಬಂತಿ, ಈ ಮೂವರಿಂದಲೂ ಡೈವೋರ್ಸ್ ಪಡೆದಿದ್ದಾರೆ. 16 ನೇ ವಯಸ್ಸಿನಲ್ಲೇ ಮದುವೆಯಾಗಲು ನಿರ್ಧರಿಸಿದ ನಟಿ ಇವರು. 2003 ರಲ್ಲಿ ಬಂಗಾಳಿ ಸಿನಿಮಾ ನಿರ್ದೇಶಕರಾದ ರಾಜೀವ್ ಕುಮಾರ್ ಬಿಸ್ವಾಸ್‌ರನ್ನು ಮದುವೆಯಾಗಿದ್ದರು. ಹದಿಮೂರು ವರ್ಷ ಇವರಿಬ್ಬರು ಜೊತೆಯಾಗಿ ಸಂಸಾರ ನಡೆಸಿದ್ದರು. ಆದರೆ 2016ರಲ್ಲಿ ಅವರು ವಿಚ್ಛೇದನ ಪಡೆದರು.

ಇದಾದ ಬಳಿಕ 2016ರಲ್ಲೇ ಅವರು ಕೃಷ್ಣನ್ ವ್ರಾಜ್ ಅವರನ್ನು ವಿವಾಹವಾದರು. ಇದಾದ ಬಳಿಕ ಕೃಷ್ಣನ್ ಜೊತೆಯೂ ಮನಸ್ತಾಪ ಮೂಡಿ ಡೈವೋರ್ಸ್‌ ಪಡೆದರು. ತದ ನಂತರ ರೋಶನ್ ಸಿಂಗ್ ರನ್ನು ಶ್ರಬಂತಿ ಮದುವೆಯಾದರು. ಆದರೆ ಇದೂ ಹೆಚ್ಚು ಕಾಲ ಬಾಳಲಿಲ್ಲ, 2020 ರಲ್ಲಿ, ಶ್ರಬಂತಿ ಮೂರನೇ ಬಾರಿಗೆ ವಿಚ್ಛೇದನ ಪಡೆದರು.

ಶ್ರಬಂತಿ ಒಂದು ಮಗುವಿನ ತಾಯಿಯಾಗಿದ್ದಾರೆ. ಅವರ ಮಗನ ಹೆಸರು ಅಭಿಮನ್ಯು ಚಟರ್ಜಿ. ಶ್ರಬಂತಿ ಸೋಶಿಯಲ್ ಮೀಡಿಯಾದಲ್ಲೂ ಬಹಳ ಆಕ್ಟಿವ್ ಆಗಿದ್ದಾರೆ. ಸಾಮಾಣ್ಯವಾಗಿ ಇವರು ತಮ್ಮ ಖಾತೆಗಳಲ್ಲಿ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕೇವಲ ಇನ್ಸ್ಟಾಗ್ರಾಂನಲ್ಲೇ ಅವರು 2.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. 

ಶ್ರಬಂತಿ ಚಟರ್ಜಿ ಬಾಲಿವುಡ್‌ನ ಕಿಂಗ್ ಖಾನ್, ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ. ಶಾರುಖ್ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

click me!