ಮೇಯರ್‌ ಚುನಾವಣೆ ವಿಳಂಬ: ಬಿಜೆಪಿ ಶಾಸಕರಿಗೆ ಗೌನ್‌ ಉಡುಗೊರೆ, ಜಾರಕಿಹೊಳಿ

Published : Aug 07, 2022, 10:51 PM IST
ಮೇಯರ್‌ ಚುನಾವಣೆ ವಿಳಂಬ: ಬಿಜೆಪಿ ಶಾಸಕರಿಗೆ ಗೌನ್‌ ಉಡುಗೊರೆ, ಜಾರಕಿಹೊಳಿ

ಸಾರಾಂಶ

ಮೇಯರ್‌, ಉಪ ಮೇಯರ್‌ ಮಾಡದ್ದಕ್ಕೆ ಬಿಜೆಪಿಯಲ್ಲೆ ಅಸಮಾಧಾನ: ಸತೀಶ ಜಾರಕಿಹೊಳಿ

ಬೆಳಗಾವಿ(ಆ.07):  ಬೆಳಗಾವಿ ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಚುನಾವಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕರಿಗೆ ಆ.9ರಂದು ಕಾಂಗ್ರೆಸ್‌ನಿಂದ ಗೌನ್‌ ಉಡುಗೊರೆ ನೀಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಚುನಾವಣೆ ಮುಗಿಯುವವರೆಗೂ ಮೇಯರ್‌, ಉಪಮೇಯರ್‌ ಆಯ್ಕೆಯಾಗುವುದಿಲ್ಲ. ಈಗಾಗಲೇ ಅನಧಿಕೃತವಾಗಿ ಬೆಳಗಾವಿಯ ಸ್ಥಳೀಯ ಶಾಸಕರು ಮೇಯರ್‌, ಉಪಮೇಯರ್‌ ಆಗಿದ್ದಾರೆ. ಅವರಿಗೆ ಆ.9ರಂದು ಬೆಳಗಾವಿಗೆ ಬರುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರ್ಯಕ್ರಮದಲ್ಲಿ ಮೇಯರ್‌, ಉಪಮೇಯರ್‌ ಗೌನ್‌ ಉಡುಗೊರೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ಪಾಲಿಕೆಯ ಬಿಜೆಪಿ ಸದಸ್ಯರೇ ಮೇಯರ್‌, ಉಪಮೇಯರ್‌ ಆಯ್ಕೆಯಾಗದಿದ್ದಕ್ಕೆ ಅಸಮಾಧಾನ ಇದ್ದಾರೆ ಎನ್ನುವ ಮಾಹಿತಿ ಇದೆ. ಪಾಲಿಕೆಯ ಬಿಜೆಪಿ ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತೇವೆ ಎಂದು ನಮ್ಮ ಬಳಿ ಬಂದಿಲ್ಲ. ಅವರು ಚರ್ಚೆ ನಡೆಸಿರುವ ಮಾಹಿತಿ ಇದೆ ಎಂದರು.

ಮಹದಾಯಿ ಯೋಜನೆ: ಡಿಸೆಂಬರ್ ವೇಳೆಗೆ ಸಿಹಿ ಸುದ್ದಿ ಕೊಡ್ತೀವಿ ಎಂದ ಕಾರಜೋಳ

ಬಿಜೆಪಿ ನಾಯಕರೇ ವಾಹನ ಕಳುಹಿಸಿಕೊಟ್ಟಿದ್ದಾರೆ:

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ್‌ ಮಹೋತ್ಸವ ಕಾರ್ಯಕ್ರಮ ಕಾಂಗ್ರೆಸ್‌ಗೆ ಶಕ್ತಿ ನೀಡಿದೆ. ಅದೊಂದು ಐತಿಹಾಸಿಕ ಸಮಾವೇಶ. ಇದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ಬಿಜೆಪಿ ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ಬಿಜೆಪಿ ನಾಯಕರೇ ವಾಹನ ಕಳುಹಿಸಿಕೊಟ್ಟಿದ್ದಾರೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್‌ನಲ್ಲಿ ಎಷ್ಟೇ ಪ್ರಭಾವಿ ನಾಯಕರಿದ್ದರೂ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕಮಾಂಡ ಸಂದೇಶ ನೀಡಿದೆ. ಈಗಾಗಲೇ ರಾಜ್ಯಾದ್ಯಂತ ಪಾದಯಾತ್ರೆ ನಡೆದಿದೆ. ಆ.9ರಂದು ಕಾಂಗ್ರೆಸ್‌ ಭವನದಲ್ಲಿ ಸಮಾರೋಪ ಸಮಾವೇಶ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಹೈಕಮಾಂಡ್‌ ಜೊತೆ ಚುನಾವಣೆ ಚರ್ಚೆ:

ಹೈಕಮಾಂಡ್‌ ನಾಯಕರ ಜತೆ ಮುಂದಿನ ಚುನಾವಣೆ ಬಗ್ಗೆ ಸ್ವಲ್ಪ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಪ್ರಭಾವ ನಾಯಕರು ಜನಪರ ನಾಯಕರೂ ಹೌದು. ಹೀಗಾಗಿ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ, ಇದರಲ್ಲಿ ಶೇ 90ರಷ್ಟುಸಿದ್ದರಾಮಯ್ಯನವರ ಅಭಿಮಾನಿಗಳು ಭಾಗಿಯಾಗಿದ್ದರು.

ಯಮಕನಮರಡಿ ಮತಕ್ಷೇತ್ರದಲ್ಲಿ ಸಚಿವ ಉಮೇಶ ಕತ್ತಿ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಉಸ್ತುವಾರಿ ಕೊಟ್ಟಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಧಾನಸಭಾ ಚುನಾವಣೆ ಇನ್ನೂ 7-8 ತಿಂಗಳೂ ಬಾಕಿ ಇದೆ. ಯಮಕನಮರಡಿ ಕ್ಷೇತ್ರದ ಮೇಲೆ ಹದ್ದಿನ ಕಣ್ಣು ಇದೆ, ಫೈಟ್‌ ಮಾಡಲಿ ನಾವು ಸಜ್ಜಾಗಿದ್ದೇವೆ ಎಂದು ಬಿಜೆಪಿಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದರು.

ಒಗ್ಗಟ್ಟಾಗದಿದ್ದರೆ ಇನ್ನೂ 25 ವರ್ಷ ಕಾಂಗ್ರೆಸ್‌ ಸ್ಥಿತಿ ಬದಲಾಗದು: ಫಿರೋಜ್‌ ಸೇಠ್‌

ಫಿರೋಜ್‌ ಸೇಠ ಹಾಗೂ ಸತೀಶ ಜಾರಕಿಹೊಳಿ ವೈಮನಸ್ಸಿನ ಪ್ರಶ್ನೆಗೆ ಉತ್ತರಿಸಿದ ಅವರು, ಅಸಮಾಧಾನ ಸರ್ವೆ ಸಾಮಾನ್ಯ ಚುನಾವಣೆ ಬರಲಿ ಇವಾಗ ಹೇಳಿಕೆ ನೀಡುವುದು ಸರಿಯಲ್ಲ ಎಂದರು. ಬೆಲೆ ಏರಿಕೆ ಬಗ್ಗೆ ಬಿಜೆಪಿಗರು ಮಾತು ಕೇಳುತ್ತಿಲ್ಲ ಚಿರತೆ ಮಾತನಾದರೂ ಕೇಳುತ್ತಾರೆ ಎಂದರು. ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾಲವಗಟ್ಟಿ, ಸುನೀಲ ಹನ್ನಮ್ಮನವರ, ಸಿದ್ದಿಕ್‌ ಅಂಕಲಗಿ, ಮಂಜು ಕಾಂಬಳೆ ಇತರರು ಇದ್ದರು.

ಮತ್ತೆ ನವೆಂಬರ್‌ನಲ್ಲಿ ಪಾದಯಾತ್ರೆ

ಮೇಕೆದಾಟು ಯೋಜನೆ ಈಗಾಗಲೇ ಅರ್ಧದಷ್ಟುಮುಗಿದಿದೆ. ಸರ್ಕಾರ ವಿಳಂಬ ನೀತಿ ಸರಿಯಲ್ಲ, ಅನಿರ್ವಾಯತೆ ಎದುರಾದರೆ ರಾಜ್ಯದ ಜನತೆಗಾಗಿ ಮತ್ತೆ ಪಾದಯಾತ್ರೆ ಮಾಡಿ ಸರ್ಕಾರ ಗಮನ ಸೆಳೆಯಲಾಗುವುದು. ನವೆಂಬರ್‌ ಮತ್ತೆ ಪಾದಯಾತ್ರೆ ಮಾಡುವ ಸಾಧ್ಯತೆ ಇದೆ ಎಂದರು.ವಿಪಕ್ಷ ನಾಯಕ ಸಿದ್ದರಾಮಯ್ಯನವರ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಜವಾಬ್ದಾರಿಯುತ್ತವಾಗಿ ನಿವಾಯಿಸಿದ್ದೇವೆ. ಅದಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ಪಕ್ಷದ ನಾಯಕನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಅದರಲ್ಲಿ ಏನು ಮುಚ್ಚು ಮರೇ ಇಲ್ಲ, ಮಾಧ್ಯಮಗಳಲ್ಲಿ ಬೇರೆ ರೀತಿ ವೈರಲ್‌ ಆಗಿದೆ ಸತೀಶ ಜಾರಕಿಹೊಳಿ ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ