ಬಳ್ಳಾರಿ ಜನರ ಶಾಪದಿಂದ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಜನಾರ್ದನ ರೆಡ್ಡಿ

By Girish Goudar  |  First Published Oct 3, 2024, 7:42 PM IST

ಸಿದ್ದರಾಮಯ್ಯ ಅವರ ಭಾಷೆಯಲ್ಲಿ ನಾನು ಮಾತನಾಡಲ್ಲ. ಸಿದ್ದರಾಮಯ್ಯ ಅವರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು ಇವತ್ತು ಅವರೇ ಅನುಭವಿಸುತ್ತಿದ್ದಾರೆ. ಬಳ್ಳಾರಿ ಅಭಿವೃದ್ಧಿ ಕನಸು ಕಂಡಿದ್ದೇ, ಸಿದ್ದರಾಮಯ್ಯ ಅದನ್ನು ನುಚ್ಚು ಮೂರು ಮಾಡಿದ್ರು, ನನ್ನನ್ನು ಖಳ ನಾಯಕನಂತೆ ಬಿಂಬಿಸಿದ್ರು. ಬಳ್ಳಾರಿ ಜನರ ಶಾಪದಿಂದ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಲ್ಮೀಕಿ ಹಗರಣ ನಾಗೇಂದ್ರ ಒಬ್ರೇ ಮಾಡಿಲ್ಲ. ಇದರ ಹಿಂದೆ ಕಾಂಗ್ರೆಸ್ ಪಕ್ಷವೇ ಇದೆ ಎಂದು ದೂರಿದ ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ 


ಬಳ್ಳಾರಿ(ಅ.03):  ಬಿಜೆಪಿಯ ಗ್ರಾಮ ಪಂಚಾಯತಿ ಸದಸ್ಯರೇ ಇಲ್ಲದೇ ಇರೋ ಬಳ್ಳಾರಿಯಲ್ಲಿ ಕಮಲ ಅರಳಿಸಿದ್ದೇನೆ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಬಿಜೆಪಿಗೆ ಬಳ್ಳಾರಿಯಲ್ಲಿ ಮರಳಿ ವೈಭವ ಬರುತ್ತದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.

13 ವರ್ಷಗಳ ಬಳಿಕ ಬಳ್ಳಾರಿ ಆಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಜನಾರ್ದನ ರೆಡ್ಡಿ ಅವರು, ಸಂಡೂರು ಉಪಚುನಾವಣೆ ಉಸ್ತುವಾರಿ ಮುಖ್ಯವಲ್ಲ ಪಕ್ಷ ಗೆಲ್ಲಿಸೋದು ಅಷ್ಟೇ ಮುಖ್ಯ ಎಂದು ತಿಳಿಸಿದ್ದಾರೆ. 
ಜನಾರ್ದನ ರೆಡ್ಡಿ ಸ್ವಾಗತಕ್ಕೆ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಬಾರದೆ‌ ಇರೋ ವಿಚಾರ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಸಹೋದರ, ಸ್ನೇಹಿತ ವಿಷಯ ಬರಲ್ಲ. ವೈಯಕ್ತಿಕ ಸಂಬಂಧಿಸಿದ ಮುಖ್ಯ ಅಲ್ಲ. ಪಕ್ಷ ಮುಖ್ಯ ಎಂದು ಹೇಳಿದ್ದಾರೆ. 

Latest Videos

undefined

ಭ್ರಷ್ಟ ಸಿಎಂ ಪ್ರಭಾವಕ್ಕೆ ಒಳಗಾಗಿ ಸೈಟು ಖಾತೆ ರದ್ದು: ಸಿದ್ದು ವಿರುದ್ಧ ಸಿಡಿದೆದ್ದ ವಿಜಯೇಂದ್ರ

ಸಿದ್ದರಾಮಯ್ಯ ಅವರ ಭಾಷೆಯಲ್ಲಿ ನಾನು ಮಾತನಾಡಲ್ಲ. ಸಿದ್ದರಾಮಯ್ಯ ಅವರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು ಇವತ್ತು ಅವರೇ ಅನುಭವಿಸುತ್ತಿದ್ದಾರೆ. ಬಳ್ಳಾರಿ ಅಭಿವೃದ್ಧಿ ಕನಸು ಕಂಡಿದ್ದೇ, ಸಿದ್ದರಾಮಯ್ಯ ಅದನ್ನು ನುಚ್ಚು ಮೂರು ಮಾಡಿದ್ರು, ನನ್ನನ್ನು ಖಳ ನಾಯಕನಂತೆ ಬಿಂಬಿಸಿದ್ರು. ಬಳ್ಳಾರಿ ಜನರ ಶಾಪದಿಂದ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಲ್ಮೀಕಿ ಹಗರಣ ನಾಗೇಂದ್ರ ಒಬ್ರೇ ಮಾಡಿಲ್ಲ. ಇದರ ಹಿಂದೆ ಕಾಂಗ್ರೆಸ್ ಪಕ್ಷವೇ ಇದೆ ಎಂದು ದೂರಿದ್ದಾರೆ. 

ಮುಡಾ ಸೈಟ್ ವಿಚಾರದಲ್ಲಿ ಯಾವ ತಪ್ಪು ಮಾಡಿಲ್ಲ ಅಂದ್ರು. ಜನಾರ್ದನ ರೆಡ್ಡಿ ಲಕ್ಷ ಕೋಟಿ ಅವ್ಯವಹಾರ ಮಾಡಿದ್ದಾರೆ ಅಂದ್ರು. ಆದ್ರೇ ನಾವು ಒಂದು ರೂಪಾಯಿ ಅವ್ಯವಹಾರ ಮಾಡಿಲ್ಲ. ನಮ್ಮ ಮೇಲೆ ಅರೋಪ ಮಾಡಿದ್ರು ಇವತ್ತು ಅವರೇ ಸಿಲುಕಿಕೊಂಡಿದ್ದಾರೆ. ಬೇನಾಮಿಯಾಗಿ ಐದು ಸಾವಿರ ಕೋಟಿ ಭೂಮಿ‌ ಕೊಳ್ಳೆ ಹೊಡೆದಿದ್ದಾರೆ. ಜನಾರ್ದನ ರೆಡ್ಡಿ ಆರೋಪ ಪ್ರೂ ಮಾಡಲು ಸಾಧ್ಯವಾಗಿಲ್ಲ. ತನಿಖೆಯಾದ್ರೇ ಸಿದ್ದರಾಮಯ್ಯ ತಪ್ಪು ಬಯಲಿಗೆ ಬರುತ್ತದೆ ಎಂದು ತಿಳಿಸಿದ್ದಾರೆ. 

ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಒಂದು ಫೋನ್ ಕಾಲ್‌ಗೆ ಯಡಿಯೂರಪ್ಪ ರಾಜೀನಾಮೆ ನೀಡಿದ್ರು. ಮಾನ ಮರ್ಯಾದೆ ನೀಚ ರಾಜಕಾರಣ ಎನ್ನುವ ಸಿದ್ದರಾಮಯ್ಯ ಅವೆಲ್ಲವನ್ನೂ ಮೀರಿದ್ದಾರೆ ಎಂದು ಟೀಕಿಸಿದ್ದಾರೆ. 

click me!