ಸಿದ್ದರಾಮಯ್ಯ ತಪ್ಪು ಮಾಡಿದ್ದಕ್ಕೆ ಮುಖ ಎತ್ಕೊಂಡು ಓಡಾಡೋಕ್ಕೆ ಆಗ್ತಿಲ್ಲ: ರವಿಕುಮಾರ್ ವಾಗ್ದಾಳಿ

By Girish Goudar  |  First Published Oct 3, 2024, 5:33 PM IST

ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿರೋದಕ್ಕೆ ರಾಜ್ಯದಲ್ಲಿ ಮುಖ ಎತ್ತಿಕೊಂಡು ಓಡಾಡೋದಕ್ಕೆ ಆಗ್ತಿಲ್ಲ. ನ್ಯಾಯಲಯಕ್ಕಿಂತ ಆತ್ಮಸಾಕ್ಷಿ ದೊಡ್ಡದು ಅಂತಾ ಹೇಳಿರುವ ಸಿಎಂಗೆ ನಾನು ಕೇಳ್ತೆನೆ ನ್ಯಾಯಾಲಯ ಕೊಟ್ಟಿರುವ ತೀರ್ಪು ತಪ್ಪಾ?. ನ್ಯಾಯಲಯದ ತೀರ್ಪು ನೀವು ಒಪ್ಪೋದಿಲ್ವಾ ಸಿಎಂ ಸಿದ್ದರಾಮಯ್ಯನವರೆ? ಎಂದು ಪ್ರಶ್ನಿಸಿದ ಬಿಜೆಪಿ ವಿಧಾನ‌ ಪರಿಷತ್ ಸದಸ್ಯ ಎನ್‌. ರವಿಕುಮಾರ್ 
 


ಕಲಬುರಗಿ(ಅ.03):  ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಿದ್ದ ಸಿಎಂ ಸಿದ್ದರಾಮಯ್ಯ ಇವತ್ತು ಸಂವಿಧಾನ ಮತ್ತು ನ್ಯಾಯಲಯಕ್ಕೆ ಅಪಮಾನ ಮಾಡ್ತಿದ್ದಾರೆ. ಸಿಎಂ ನಿನ್ನೆ ಆತ್ಮ ಸಾಕ್ಷಿಯ ಬಗ್ಗೆ ಮಾತಾನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಿಗೆ ಆತ್ಮಸಾಕ್ಷಿ ಇದೇಯಾ?. ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ಸಿಎಂ ಕುಟುಂಬ ತಪ್ಪು ಮಾಡಿದ್ದಾರೆ ಅಂತಾ ತೀರ್ಪು ಕೊಟ್ಟಿದೆ. ತನಿಖೆಗೆ ಸೂಕ್ತ ಅಂತ ನ್ಯಾಯಾಲಯ ಹೇಳಿ ಎಫ್‌ಐಆರ್ ಮಾಡಿಸಿದೆ. ಇಷ್ಟೆಲ್ಲಾ ಆದ್ರೂ ನಾನೇನು ತಪ್ಪು ಮಾಡಿದ್ದಿನಾ? ಅಂತಾ ಪ್ರಶ್ನೆ ಮಾಡ್ತಿದ್ದಾರೆ?. ತಪ್ಪು ಮಾಡಿರೋದಕ್ಕೆ ಅಲ್ವಾ 14 ಸೈಟ್ ವಾಪಸ್ ಕೊಟ್ಟಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯಗೆ ಆತ್ಮಸಾಕ್ಷಿ ಇದ್ದರೆ ಮೊದಲು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ವಿಧಾನ‌ ಪರಿಷತ್ ಸದಸ್ಯ ಎನ್‌. ರವಿಕುಮಾರ್ ಒತ್ತಾಯಿಸಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ‌ ಪರಿಷತ್ ಸದಸ್ಯ ರವಿಕುಮಾರ್ ಅವರು, ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿರೋದಕ್ಕೆ ರಾಜ್ಯದಲ್ಲಿ ಮುಖ ಎತ್ತಿಕೊಂಡು ಓಡಾಡೋದಕ್ಕೆ ಆಗ್ತಿಲ್ಲ. ನ್ಯಾಯಲಯಕ್ಕಿಂತ ಆತ್ಮಸಾಕ್ಷಿ ದೊಡ್ಡದು ಅಂತಾ ಹೇಳಿರುವ ಸಿಎಂಗೆ ನಾನು ಕೇಳ್ತೆನೆ ನ್ಯಾಯಾಲಯ ಕೊಟ್ಟಿರುವ ತೀರ್ಪು ತಪ್ಪಾ?. ನ್ಯಾಯಲಯದ ತೀರ್ಪು ನೀವು ಒಪ್ಪೋದಿಲ್ವಾ ಸಿಎಂ ಸಿದ್ದರಾಮಯ್ಯನವರೆ? ಎಂದು ಪ್ರಶ್ನಿಸಿದ್ದಾರೆ. 
ತಪ್ಪು ಮಾಡಿಲ್ಲ ಅಂತಾನೆ ಹೇಳ್ತಾ ಹೂಬ್ಲೆಟ್ ವಾಚ್ ವಾಪಸ್ ಕೊಟ್ಟರು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನ 89 ಕೋಟಿ ಹಗರಣ ಅಂತ ಒಪ್ಪಿಕೊಂಡರು. ತಪ್ಪೆ ಮಾಡಿಲ್ಲ ಅಂತಾ ಹೇಳುವ ಸಿದ್ದರಾಮಯ್ಯ ಅವರ ಪತ್ನಿ 14 ಸೈಟ್ ವಾಪಸ್ ಕೊಟ್ಟರು. ಎಷ್ಟು ಪೇಶೆನ್ಸ್ ನಿಂದ ಪತ್ರ ಬರೆದು ಅವರ ಮಗನ ಮುಖಾಂತರ ವಾಪಸ್ ಕೊಟ್ಟರು ಎಂದು ಸಿದ್ದರಾಮಯ್ಯ ವಿರುದ್ಧ ರವಿಕುಮಾರ್‌ ಕಿಡಿ ಕಾರಿದ್ದಾರೆ. 

Latest Videos

undefined

ಮುಡಾ ಹಗರಣ: ರಾಜೀನಾಮೆ ನೀಡಿ, ತನಿಖೆ ಎದುರಿಸಿ ಶುದ್ಧರಾಮಯ್ಯ ಆಗಿ: ಮಾಜಿ ಸಂಸದ ಮುನಿಸ್ವಾಮಿ

ರಘನಂದನ್ ಎಂಬ ಕಮಿಷನರ್ ಬಹಳ ಫಾಸ್ಟ್ ಆಗಿ ಸೈಟ್ ಕ್ಯಾನ್ಸಲ್ ಮಾಡಿ ಅಕ್ಸೆಪ್ಟ್ ಮಾಡಿದ್ದಾರೆ. ಈ ಸರ್ಕಾರದಲ್ಲಿ ಅತ್ಯಂತ ವೇಗವಾಗಿ ಆಗಿರುವಂತಹ ಕೆಲಸ ಇದು. ರಘುನಂದನ್ ಎಂಬ ಕಮಿಷನರ್‌ನನ್ನ ತಕ್ಷಣವೇ ಅಮಾನತ್ತು ಮಾಡಬೇಕು. ಕೋರ್ಟ್ ನಲ್ಲಿರುವ ವಿಚಾರ ಹೇಗೆ ತೆಗೆದುಕೊಂಡು ವಾಪಸ್ ಪಡೆದ್ರು. ರಘುನಂದನ್ ಅವರು ಹೇಗೆ ವಾಪಸ್ ತೆಗೆದುಕೊಂಡರು?. ರಾಜ್ಯದ ಜನ ಅಭಿವೃದ್ಧಿ ಇಲ್ಲದೆ ಪರಿತಪಿಸೋದಕ್ಕೆ‌ ಮುಂದಾಗಿದ್ದಾರೆ. ಅಷ್ಟೆ ಯಾಕೆ ಕಾಂಗ್ರೆಸ್ ನ ಶಾಸಕರೇ ಅಭಿವೃದ್ಧಿ ಆಗ್ತಿಲ್ಲ ಅಂತಾ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಸರ್ಕಾರದ ರವಿಕುಮಾರ್ ಹರಿಹಾಯ್ದಿದ್ದಾರೆ. 

click me!