ಕೊಪ್ಪಳದಲ್ಲಿ ತಂದೆ ತಾಯಿ ಇಲ್ಲದ ಮಕ್ಕಳನ್ನು ದತ್ತು ಪಡೆದ ಗಾಲಿ ಜನಾರ್ಧನ ರೆಡ್ಡಿ!

By Gowthami KFirst Published Mar 19, 2023, 5:15 PM IST
Highlights

ಭರ್ಜರಿ ಚುನಾವಣಾ ಪ್ರಚಾರದಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಕೊಪ್ಪಳದಲ್ಲಿ ಇಬ್ಬರು ಬಡ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ.

ಕೊಪ್ಪಳ (ಮಾ.19): ಭರ್ಜರಿ ಚುನಾವಣಾ ಪ್ರಚಾರದಲ್ಲಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಕೊಪ್ಪಳದಲ್ಲಿ ಇಬ್ಬರು ಬಡ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ತಂದೆ- ತಾಯಿ ಇಲ್ಲದೇ ಇರುವ ಕೊಪ್ಪಳ ಜಿಲ್ಲೆಯ ಗಂಗಾವತಿಯ ವೀರುಪಾಪುರ ತಾಂಡದ  ಮಕ್ಕಳನ್ನು ದತ್ತು ಪಡೆದಿದ್ದಾರೆ. ಜ್ಯೂತಿ ಸ್ವರೂಪ್, ವೇಣು ಎಂಬ ಇಬ್ಬರು ಮಕ್ಕಳನ್ನು ದತ್ತು ಪಡೆದು, ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿ ಜನಾರ್ಧನರೆಡ್ಡಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿ ಮಕ್ಕಳನ್ನು ದತ್ತು ಪಡೆದ ಜನಾರ್ಧನರೆಡ್ಡಿ.

ಐದು ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿ:
ಇನ್ನು ಇದೇ ವೇಳೆ ಐದು ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿಯನ್ನ ಅಭಿವೃದ್ಧಿ ಮಾಡುತ್ತೇನೆ ಎಂದು ಗಂಗಾವತಿಯ ಪ್ರಚಾರದಲ್ಲಿ ಜನಾರ್ಧನ ರೆಡ್ಡಿ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಗಿಂತಲೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ. ನನ್ನನ್ನು ಶಾಸಕನನ್ನಾಗಿ ಮಾಡಿದ್ರೆ ಇಡೀ ದೇಶ ತಿರುಗಿ ನೋಡೋ ರೀತಿಯಲ್ಲಿ ಅಭಿವೃದ್ಧಿ ಮಾಡ್ತೇನೆ ಎಂದಿದ್ದಾರೆ. ಈ ಮೂಲಕ ತಮ್ಮ ಚುನಾವಣೆ ಭಾಷಣದಲ್ಲಿ ರೆಡ್ಡಿ ಜಿಲ್ಲೆಯ ಜನತೆಗೆ ಭರಪೂರ ಭರವಸೆ‌ ನೀಡಿದ್ದಾರೆ. ಮೊನ್ನೆಯಷ್ಟೆ ಅಂಜನಾದ್ರಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ ಮಾಡಿದ ಬೆನ್ನಲ್ಲೆ ರೆಡ್ಡಿಯಿಂದ ಹನುಮ ಜಪ ಆರಂಭವಾಗಿದೆ.

ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ

ಹಿಂದೂ ಮತ ಬ್ಯಾಂಕ್ ತಪ್ಪದಂತೆ ಭರವಸೆ ನೀಡಿದ ರೆಡ್ಡಿ:
ಪ್ರಾದೇಶಿಕ ಪಕ್ಷ ಕಟ್ಟಿದೋರು ಯಾರು ದೊಡ್ಡ ಪ್ರಮಾಣದಲ್ಲಿ ಸಕ್ಸಸ್ ಆಗಿಲ್ಲ ರೆಡ್ಡಿ ಏನ್ ಮಾಡ್ತಾರೆ ಅಂದ್ರು,  50 ಕ್ಷೇತ್ರದಲ್ಲಿ ಕೆಆರ್ ಪಿಪಿಯ ನಮ್ಮ ಅಭ್ಯರ್ಥಿಗಳು ಕೆಲಸ ಮಾಡ್ತಿದ್ದಾರೆ. 30 ಜನ‌ ಕೆ ಆರ್ ಪಿಪಿ ಯಿಂದ ಶಾಸಕರಾಗುತ್ತಾರೆ. ಸುಂದರ ಗಂಗಾವತಿ ನಿರ್ಮಾಣ ಮಾಡೋದೆ ನಮ್ಮ ಕೆಲಸ. ಯಾರೋ ರೆಡ್ಡಿ ಹೊರಗಡೆ ಬಂದಿದ್ದಾನೆ ಅಂತಿದ್ದಾರೆ.

ಗಣಿಧಣಿಗೆ ಹೊಸ ಟೆನ್ಷನ್: 'ಸ್ನೇಹ ಹಸ್ತ' ಚಿಹ್ನೆ ನೀಡಲು ಚು.ಆಯೋಗ ನಕಾರ

ಇಟಲಿಯಿಂದ ಇಂಡಿಯಾಗೆ ಬಂದು ಕರ್ನಾಟಕದ ಬಳ್ಳಾರಿಗೆ ಬಂದು ಏಲೆಕ್ಷನ್ ಗೆ ನಿಂತು ಗೆದ್ದಿದ್ರು (ಸೋನಿಯಾ ಗಾಂಧಿ). ಅಂತಹ ಪಕ್ಷದ ನಾಯಕ ನನ್ನ ಬಗ್ಗೆ ಮಾತನಾಡ್ತಾರೆ ಎಂದು ಪರೋಕ್ಷವಾಗಿ ಇಕ್ಬಾಲ್ ಅನ್ಸಾರಿಗೆ ರೆಡ್ಡಿ ಟಾಂಗ್ ನೀಡಿದ್ದಾರೆ. ನನ್ನ ಬಗ್ಗೆ ಅಪ್ರಚಾರ ಮಾಡ್ತಿದ್ದಾರೆ ಅದರ ಬಗ್ಗೆ ಯಾರು ಕಿವಿಗೊಡಬೇಡಿ‌ ಎಂದು ಜನಾರ್ಧನರೆಡ್ಡಿ ಇದೇ ವೇಳೆ ಹೇಳಿಕೆ ನೀಡಿದ್ದಾರೆ.

click me!