Vijayanagara: ಬಿಜೆಪಿ ಕಾರ್ಯಕಾರಿಣಿಗೆ ಹಂಪಿ ಗತ ವೈಭವದ ವೇದಿಕೆ: ಕೇಸರಿಮಯವಾದ ಹೊಸಪೇಟೆ

By Girish Goudar  |  First Published Apr 15, 2022, 3:30 PM IST

*  ಇಡೀ ವಿಜಯನಗರದ ನೆಲ ಕೇಸರಿಮಯ
*  ಎಲ್ಲೆಡೆ ಕಮಲದ ಬಾವುಟ ಹಾರಾಟ
*  ಜೆ.ಪಿ. ನಡ್ಡಾ, ಸಿಎಂ, ಬಿಎಸ್‌ವೈ ಸ್ವಾಗತಕ್ಕೆ ಸಜ್ಜು
 


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಏ.15): ವಿಜಯನಗರದ(Vijayanagara) ನೆಲ ಈಗ ಸಂಪೂರ್ಣ ಕೇಸರಿಮಯವಾಗಿದ್ದು, ಬಿಜೆಪಿಯ ರಾಜ್ಯ ವಿಶೇಷ ಕಾರ್ಯಕಾರಿಣಿಗೆ ಸಜ್ಜಾಗಿದೆ. ಏ. 16 ಮತ್ತು ಏ.17ರಂದು ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಕಾರ್ಯಕಾರಿಣಿ ನಡೆಯಲಿರುವುದರಿಂದ ಕೇಸರಿ ಬಣ್ಣದಲ್ಲಿ ಜಿಲ್ಲಾ ಕೇಂದ್ರ ನಳನಳಿಸುತ್ತಿದೆ. ಜತೆಗೆ ಹಂಪಿ ಗತವೈಭವ(Glory of Hampi) ಸಾರುವ ವೇದಿಕೆ ನಿರ್ಮಾಣ ಮಾಡಲಾಗಿದೆ.

Tap to resize

Latest Videos

undefined

ಬಿಜೆಪಿಯ(BJP) ರಾಜ್ಯ ಕಾರ್ಯಕಾರಿಣಿ ಏ.16 ಮತ್ತು 17ರಂದು ಹೊಸಪೇಟೆಯಲ್ಲಿ(Hosapete) ನಡೆಯಲಿದ್ದು, ಇದಕ್ಕಾಗಿ ವಿಜಯನಗರದ ನೆಲ ಕೇಸರಿಯಮವಾಗಿದೆ(Saffron). ನಗರ ಪ್ರವೇಶಿಸುವ ಎಲ್ಲ ದಿಕ್ಕುಗಳಲ್ಲಿರುವ ರಸ್ತೆಗಳಲ್ಲಿ ಕೇಸರಿ ಕಂಬದ ಮೇಲೆ ಬಿಜೆಪಿ ಬಾವುಟ ಹಾರಾಡುತ್ತಿದೆ.

ಸಂತೋಷ್‌ ಆತ್ಮಹತ್ಯೆ ಪ್ರಕರಣ ಹೆಬ್ಬಾಳ್ಕರ್‌ ತಲೆಗೆ ಸುತ್ತಿಕೊಳ್ಳಬಹುದು: ಹೊಸ ಬಾಂಬ್‌ ಸಿಡಿಸಿದ ಅಶ್ವತ್ಥ್‌

ಮರಿಯಮ್ಮನಹಳ್ಳಿ ಭಾಗದಿಂದ ಹೊಸಪೇಟೆ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ 50ರ ಸುರಂಗ ಮಾರ್ಗದಿಂದ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಸುರಂಗದಿಂದ ಆರಂಭಗೊಂಡ ಕೇಸರಿ ಬಾವುಟಗಳು ಕಮಲಾಪುರದ ಭುವನೇಶ್ವರಿ ಹೋಟೆಲ್‌ ಮಾರ್ಗದವರೆಗೂ ರಾರಾಜಿಸುತ್ತಿವೆ. ಇನ್ನೊಂದೆಡೆಯಲ್ಲಿ ಟಿಬಿ ಡ್ಯಾಂ, ಸಂಡೂರು ರಸ್ತೆ, ಬಳ್ಳಾರಿ ರಸ್ತೆಯಿಂದಲೂ ಕೇಸರಿಮಯವಾಗಿದೆ. ಇಡೀ ನಗರ ಕೇಸರಿಮಯವಾಗಿದೆ.

28 ಕಿಮೀ ಬಾವುಟ:

ನೂತನ ಜಿಲ್ಲೆ ವಿಜಯನಗರದಲ್ಲಿ ಮೊದಲ ಬಾರಿ ಕಾರ್ಯಕಾರಿಣಿ ನಡೆಯುತ್ತಿದ್ದು, ನಗರದ ಹೊರವಲಯ ಸಂಪೂರ್ಣವಾಗಿ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ಹೊಸಪೇಟೆ ನಗರ ಪ್ರವೇಶಿಸುತ್ತಿದ್ದಂತೆ ಹೆದ್ದಾರಿ ಸುರಂಗ ಹಾಗೂ ಇತರೆ ರಸ್ತೆಗಳು ಸೇರಿ ಸುಮಾರು 28 ಕಿಮೀಗೂ ಹೆಚ್ಚು ಕಡೆಗಳಲ್ಲಿ ಬಿಜೆಪಿ ಬಾವುಟಗಳು ಹಾರಾಡುತ್ತಿವೆ. ಕಂಬಗಳಿಗೆ ಕೇಸರಿ ಬಟ್ಟೆ ಸುತ್ತಲಾಗುತ್ತಿದೆ. ಅದರ ತುದಿಗೆ ಬಾವುಟ ಕಟ್ಟಲಾಗಿದೆ. ಪ್ರತಿ ಹತ್ತು ಅಡಿಗೊಂದು ಕಂಬ ಹಾಕಲಾಗಿದೆ.
ಹರಿಹರ ರಸ್ತೆಯಲ್ಲಿ ಗುಂಡಾ ಸಸ್ಯೋದ್ಯಾನದ ಸಮೀಪದಿಂದ ನಗರದ ಮಧ್ಯಭಾಗದವರೆಗೂ ಹೆದ್ದಾರಿ ಮೂಲಕ ನೇರ ಕಾರ್ಯಕಾರಿಣಿ ವೇದಿಕೆ ಸ್ಥಳದವರೆಗೆ, ಕಮಲಾಪುರ, ಬಳ್ಳಾರಿ ರಸ್ತೆಯಲ್ಲಿ ಸಂಕ್ಲಾಪುರದವರೆಗೆ, ಹೊಸೂರು-ಮಾಗಾಣಿ ರಸ್ತೆ, ಕೊಪ್ಪಳ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಕಂಬಗಳ ಮೇಲೆ ಬಿಜೆಪಿ ಧ್ವಜ ಹಾರಾಡುತ್ತಿದೆ. ನಗರದಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್‌ಗಳು ಕಂಗೊಳಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಈಗಾಗಲೇ ಉತ್ಸಾಹದಲ್ಲಿ ತೇಲಾಡುತ್ತಿದ್ದಾರೆ.

ವೇದಿಕೆ ನಿರ್ಮಾಣ:

ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇಗುಲದ ಬಯಲು ಸ್ಥಳದಲ್ಲಿ ಕಳೆದ ಮಾ. 28ರಂದು ವೇದಿಕೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ವಿಜಯನಗರದ ನೆಲದಲ್ಲಿ ಏ.16 ಮತ್ತು 17ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಹಂಪಿ ಗತ ವೈಭವ ಸಾರುವ ಭವ್ಯ ವೇದಿಕೆ ನಿರ್ಮಾಣಗೊಂಡಿದೆ. ವೇದಿಕೆಯಲ್ಲಿ ಹಂಪಿಯ ವಾಸ್ತು ಶಿಲ್ಪ ಅನಾವರಣಗೊಂಡಿದ್ದು, ಬಿಜೆಪಿಯ ಕಮಲದ ಚಿಹ್ನೆ ರಾರಾಜಿಸುತ್ತಿದೆ. ಬಯಲು ಜಾಗದಲ್ಲಿ ಹವಾನಿಯಂತ್ರಿತ ಜರ್ಮನ್‌ ಟೆಂಟ್‌(German Tent) ನಿರ್ಮಿಸುತ್ತಿದ್ದು, ಟೆಂಟ್‌ನಲ್ಲಿ 750 ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾರ್ಯಕಾರಿಣಿಗಾಗಿ 80 ಅಡಿ ಉದ್ದ ಮತ್ತು 40 ಅಡಿ ಅಗಲದ ವೇದಿಕೆ ನಿರ್ಮಾಣಗೊಂಡಿದೆ.

2023ಕ್ಕೆ ಬಿಜೆಪಿ ತಯಾರಿ, ರಾಜ್ಯ, ರಾಷ್ಟ್ರೀಯ ನಾಯಕರ ಸಮಾಗಮ ಚುನಾವಣೆ ರಣಕಹಳೆ

ವಸ್ತು ಪ್ರದರ್ಶನ:

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ವಸ್ತುಪ್ರದರ್ಶನ(Exhibition) ಪ್ರದರ್ಶಿಸಲಾಗುವುದು. ಇಲಾಖೆಗಳ ಸಾಧನೆ ಮಾಹಿತಿಯನ್ನು ಪ್ರದರ್ಶಿಸಲಾಗುವುದು ಇದರಿಂದ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಯೂ ಕಾರ್ಯಕರ್ತರಿಗೆ ತಿಳಿಯಲಿದೆ. ಇದನ್ನು ಕಂಡು ಕಾರ್ಯಕರ್ತರು ಮನೆ ಮನೆಗೆ ತಲುಪಿಸಲಿದ್ದಾರೆ.

ವಿಜಯನಗರದಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯುತ್ತಿದ್ದು, ಕಾರ್ಯಕಾರಿಣಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಕಾರಿಣಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ ಅಂತ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ತಿಳಿಸಿದ್ದಾರೆ.  

ವಿಜಯನಗರದಲ್ಲಿ ರಾಜ್ಯ ಕಾರ್ಯಕಾರಿಣಿ ಏ.16 ಮತ್ತು 17ರಂದು ನಡೆಯಲಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಕಾರ್ಯಕಾರಿಣಿ ದಿಕ್ಸೂಚಿಯಾಗಲಿದೆ ಅಂತ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ(Shashikala Jolle) ಹೇಳಿದ್ದಾರೆ.  
 

click me!