ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಕೋಲಾರದ ಸಮಗ್ರ ಅಭಿವೃದ್ದಿಗೆ ನೀಡಿದ್ದ ಭರವಸೆಗಳನ್ನು 2023-24 ಮತ್ತು 2024-25ನೇ ಸಾಲಿನ ಬಜೆಟ್‌ನಲ್ಲಿ ಈಡೇರಿಸುವಂತೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದಿದ್ದಾರೆ.
ಕೋಲಾರ (ಜೂ.30): ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಕೋಲಾರದ ಸಮಗ್ರ ಅಭಿವೃದ್ದಿಗೆ ನೀಡಿದ್ದ ಭರವಸೆಗಳನ್ನು 2023-24 ಮತ್ತು 2024-25ನೇ ಸಾಲಿನ ಬಜೆಟ್‌ನಲ್ಲಿ ಈಡೇರಿಸುವಂತೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಜಿಲ್ಲೆಯ ಅಗತ್ಯಗಳ ಕುರಿತು ಸಂಬಂಧಿಸಿದ ಸಚಿವರಿಗೆ ಬರೆದಿರುವ ಪತ್ರಗಳನ್ನು ಬಿಡುಗಡೆ ಮಾಡಿದ ಅವರು, ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಶಾಸಕ ಕೊತ್ತೂರು ಮಂಜುನಾಥ್, ಉಸ್ತುವಾರಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಎಂಎಲ್‌ಸಿ ಅನಿಲ್ ಕುಮಾರ್ ಸೇರಿದಂತೆ ಎಲ್ಲರೂ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಸಚಿವರ ಮೇಲೆ ಒತ್ತಡ ತಂದು ಸಿದ್ದರಾಮಯ್ಯ ಕೋಲಾರ ಜನತೆಗೆ ನೀಡಿದ್ದ ಭರವಸೆಗಳ ಈಡೇರಿಕೆಗೆ ಕ್ರಮವಹಿಸುವಂತೆ ಕೋರಿದ್ದಾರೆ.
ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ
ಅಂತರಗಂಗೆ ಉತ್ಸವಕ್ಕೆ ಪತ್ರ: ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಸಚಿವ ಹೆಚ್.ಕೆ.ಪಾಟೀಲ್‌ರಿಗೆ ಪತ್ರ ಬರೆದು ಶತಶೃಂಗ ಪರ್ವತದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ನೆಲೆವೀಡಾದ ಸಾಹಿತಿ ರಾಮಯ್ಯ ಮತ್ತು ಮುನಿಸ್ವಾಮಿ ಅವರ ಆದಿಮ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಅಂತರಗಂಗೆ ಉತ್ಸವ ನಡೆಸುವ ಮೂಲಕ ಪ್ರವಾಸಿ ತಾಣವಾಗಿಸಲು ಕ್ರಮ ಕೈಗೊಳ್ಳಲು ಕೋರಿದ್ದಾರೆ. ಲೋಕೋಪಯೋಗಿ ಸಚಿವ ಜಾರಕಿಹೋಳಿರಿಗೆ ಪತ್ರ ಬರೆದು ಕೋಲಾರ ವರ್ತುಲ ರಸ್ತೆ, 2015-17 ರಲ್ಲಿ ಮಂಜೂರಾದರೂ ನೆನೆಗುದಿಗೆ ಬಿದ್ದಿರುವ ಕೋಲಾರ-ವೇಮಗಲ್-ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 4 ಪಥದ ರಸ್ತೆ, ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ವೇಮಗಲ್-ನರಸಾಪುರ-ಮಾಲೂರು ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮಾರ್ಪಡಿಸಿ ಅಭಿವೃದ್ದಿಗೆ ಕ್ರಮವಹಿಸಲು ಮನವಿ ಮಾಡಿದ್ದಾರೆ.
ನಗರಾಭಿವೃದ್ದಿ ಸಚಿವ ಬಿ.ಎಸ್.ಸುರೇಶ್‌ರಿಗೆ ಪತ್ರ ಬರೆದು ಕೋಲಾರ ಬೆಂಗಳೂರಿಗೆ ಸಮೀಪವಿದ್ದು, ಕೋಲಾರ ನಗರಸಭೆಯನ್ನು ನಗರಪಾಲಿಕೆಯನ್ನಾಗಿ ಪರಿವರ್ತಿಸಲು ಮತ್ತು ಅಗತ್ಯ ಮೂಲಸೌಲಭ್ಯ ಒದಗಿಸಲು ಮನವಿ ಮಾಡಿದ್ದಾರೆ. ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಹಾಗೂ ಕೃಷಿ ಮಾರುಕಟ್ಟೆಸಚಿವ ಶಿವಾನಂದ ಪಾಟೀಲ್‌ರಿಗೆ ಬರೆದಿರುವ ಪತ್ರದಲ್ಲಿ ಕೋಲಾರ ಎಪಿಎಂಸಿಗೆ ಅಗತ್ಯವಾದ ಜಮೀನು ಗುರುತಿಸಿದ್ದು, ಶೀಘ್ರ ಮಂಜೂರು ಮಾಡಿಕೊಡುವಂತೆ ಕೋರಿದ್ದಾರೆ.
ಕೆಸಿ ವ್ಯಾಲಿ 3ನೇ ಹಂತದ ಶುದ್ದೀಕರಣ: ಸಣ್ಣ ನೀರಾವರಿ ಸಚಿವ ಬೋಸರಾಜುರಿಗೆ ಬರೆದಿರುವ ಪತ್ರದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ವೃದ್ದಿಯಿಂದ ಕೆಸಿವ್ಯಾಲಿ, ಹೆಚ್.ಎನ್.ವ್ಯಾಲಿ ನೀಡಿದ್ದರೂ, ಇಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ 3ನೇ ಹಂತದ ಶುದ್ದೀಕರಣದ ಜನರ ಬೇಡಿಕೆ ಈಡೇರಿಸಲು ಮನವಿ ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್‌ರಿಗೆ ಬರೆದಿರುವ ಪತ್ರದಲ್ಲಿ ಕೋಲಾರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆಯೂ, ಒಂದು ಸರ್ಕಾರಿ ಐಟಿಐ ಕೋಲಾರ ನಗರದಲ್ಲಿ ಸ್ಥಾಪಿಸುವಂತೆಯೂ ಮನವಿ ಮಾಡಿದ್ದಾರೆ.
ವೇಮಗಲ್‌ನನ್ನು ತಾಲೂಕು ಕೇಂದ್ರವಾಗಿಸಿ: ಸಚಿವ ಕೃಷ್ಣಬೈರೇಗೌಡರಿಗೆ ಬರೆದಿರುವ ಪತ್ರದಲ್ಲಿ ವೇಮಗಲ್‌ಅನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸಲು ಕೋರಿದ್ದು, ವಸತಿ ಸಚಿವ ಜಮೀರ್ ಅಹಮದ್‌ರಿಗೆ ಬರೆದಿರುವ ಪತ್ರದಲ್ಲಿ ಕೋಲಾರ ನಗರ, ತಾಲ್ಲೂಕಿನ 21 ಗ್ರಾ.ಪಂ, ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡವರಿಗೆ 25 ಸಾವಿರ ಮನೆಗಳನ್ನು ಮಂಜೂರು ಮಾಡಲು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಬರೆದಿರುವ ಪತ್ರದಲ್ಲಿ ವಕ್ಕಲೇರಿ ಹೋಬಳಿ ಕೇಂದ್ರದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಮನವಿ ಮಾಡಿದ್ದಾರೆ. ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಶೀಘ್ರ ನಡೆಸುವಂತೆಯೂ, ಕೈಗಾರಿಕಾ ಪ್ರದೇಶವಾಗಿರುವ ಇಲ್ಲಿ ಕೆಯುಡಬ್ಲೂತ್ರ್ಯಎಸ್‌ಎಸ್‌ಪಿ ಇಂದ ಕುಡಿಯುವ ನೀರಿನ ಯೋಜನೆ, ಯುಜಿಡಿ ರಸ್ತೆಗಳ ಅಭಿವೃದ್ದಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಪೌರಾಡಳಿತ ಸಚಿವ ರಹೀಂಖಾನ್‌ರಲ್ಲಿ ಮನವಿ ಮಾಡಿದ್ದಾರೆ.
ಗೃಹ ಸಚಿವ ಡಾ.ಪರಮೇಶ್ವರ್‌ಗೆ ಬರೆದಿರುವ ಪತ್ರದಲ್ಲಿ ನರಸಾಪುರದಲ್ಲಿ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಲು ಮನವಿ ಮಾಡಿದ್ದು, ಚಿಂತಾಮಣಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ನನ್ನು ಮೇಲ್ದರ್ಜೆಗೇರಿಸಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ರಲ್ಲಿ ಮನವಿ ಮಾಡಿದ್ದು, ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ರಿಗೆ ಮಾಡಿರುವ ಮನವಿಯಲ್ಲಿ ನರಸಾಪುರದ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವಾಗಿ ಪರಿವರ್ತಿಸಲು ಆದೇಶಿಸಿ, ಕೋಲಾರ ಜಿಲ್ಲೆಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸಲು ಕೋರಿರುವ ಅವರು, ಸಚಿವ ಸಂತೋಷ್‌ಲಾಡ್‌ರಿಗೆ ಬರೆದಿರುವ ಪತ್ರದಲ್ಲಿ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಇಎಸ್‌ಐ ಆಸ್ಪತ್ರೆ ಆರಂಭಿಸಲು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ
ಕೆಎಸ್‌ಸಿಎ ಅಡಿ ಕ್ರಿಕೆಟ್ ಸ್ಟೇಡಿಯಂ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸುದರ್ಶನ್, ಸಿದ್ದರಾಮಯ್ಯ ಸರ್ಕಾರ ಕಂದಾಯ ಇಲಾಖೆ ಮೂಲಕ ಹುತ್ತೂರು ಹೋಬಳಿಯಲ್ಲಿ ಕೆಎಸ್‌ಸಿಎ ಅಡಿ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆಗೆ ಜಮೀನು ಮಂಜೂರು ಮಾಡಿದ್ದು, ತಾವು ಕೆಎಸ್‌ಸಿಎ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಹ್ವಾನಿಸಿ ಅವರೊಂದಿಗೆ ಚರ್ಚಿಸಿ ಕೂಡಲೇ ಕ್ರೀಡಾಂಗಣ ಕಾಮಗಾರಿ ಆರಂಭಕ್ಕೆ ಕ್ರಮವಹಿಸಲು ಮನವಿ ಮಾಡಿದ್ದಾರೆ.