
ಶಿಮ್ಲಾ (ನ.05): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದೆ. ಅಧಿಕಾರ ಹಿಡಿಯಲು ಈ ಬಾರಿ ಕಾಂಗ್ರೆಸ್ ಹಲವು ಭರವಸೆ ನೀಡಿದೆ. ನವೆಂಬಂರ್ 12 ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಇದೀಗ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. 1 ಲಕ್ಷ ಉದ್ಯೋಗ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರೂಪಾಯಿ ಮಾಸಾಶನ, 30 ಯುನಿಟ್ ಉಚಿತ ವಿದ್ಯುತ್, 10 ಕೋಟಿ ರೂಪಾಯಿ ಸ್ಟಾರ್ಟ್ ಅಪ್ ಫಂಡ್ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಶಿಮ್ಲಾದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಚತ್ತೀಸಘಡ ಮುಖ್ಯಮಂತ್ರಿ ಭೂಫೇಶ್ ಬಾಘೆಲ್, ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುಕ್ವಿಂದರ್ ಸಿಂಗ್ ಸುಕ್ಕು ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಹಿಮಾಚಲ ಪ್ರದೇಶಕ್ಕೆ(Himachal Pradesh Election) ಇಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಬೇಟಿ ನೀಡುತ್ತಿದ್ದಾರೆ. ಸೋಲನ್ ಹಾಗೂ ಸುಂದರ್ ನಗರದಲ್ಲಿ ಅತೀ ದೊಡ್ಡ ರ್ಯಾಲಿ(Political Rally) ಆಯೋಜಿಸಲಾಗಿದೆ. ಇದಕ್ಕೂ ಮೊದಲೇ ಕಾಂಗ್ರೆಸ್ ಪ್ರಣಾಳಿಕೆ(Congress manifest) ಬಿಡುಗಡೆ ಮಾಡಿ ಭಾರಿ ಸಂಚನಲ ಸೃಷ್ಟಿಸಿಲು ಯತ್ನಿಸಿದೆ. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರಿಗೆ ಎನೆಲ್ಲಾ ನೀಡಲಿದ್ದೇವೆ ಅನ್ನೋ ದೊಡ್ಡ ಪಟ್ಟಿಯನ್ನೇ ನೀಡಿದೆ. ಇದರಲ್ಲಿ ಹಲವು ಉಚಿತ(freebies) ಘೋಷಣೆಗಳು ಒಳಗೊಂಡಿದೆ. ಹಳೇ ಪಿಂಚಣಿ ಯೋಜನೆಯನ್ನು ಮತ್ತೆ ತರುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ.
Assembly Elections 2022 ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಘೋಷಣೆ, ನ.12ಕ್ಕೆ ಎಲೆಕ್ಷನ್!
ಇದು ಕೇವಲ ಚುನಾವಣಾ ಪ್ರಣಾಳಿಕೆ ಮಾತ್ರವಲ್ಲ, ಹಿಮಾಚಲ ಪ್ರದೇಶದ ಜನರ ಅಭಿವೃದ್ಧಿಗೆ ತಯಾರಿಸಿರುವ ನೀಲನಕ್ಷೆ ಎಂದು ಹಿಮಾಲಚಲ ಪ್ರದೇಶ ಕಾಂಗ್ರೆಸ್ ಹೇಳಿದೆ. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಪಡೆಯಲು ಕಾಂಗ್ರೆಸ್ ಭಾರಿ ಕಸರತ್ತು ನಡೆಸುತ್ತಿದೆ.
ಹಿಮಾಚಲ ಪ್ರದೇಶ ಚುನಾವಣೆ
ನ.12ರಂದು ಒಂದು ಹಂತದ ಚುನಾವಣೆ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಹಿಮಾಚಲಪ್ರದೇಶ ವಿಧಾನಸಭೆಯಲ್ಲಿ 68 ವಿಧಾನಸಭಾ ಕ್ಷೇತ್ರಗಳು ಇವೆ. 55 ಲಕ್ಷ ಮತದಾರರು 68 ಕ್ಷೇತ್ರಗಳ ನೂತನ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ. 1.86 ಲಕ್ಷ ನವ ಮತದಾರರು, 1.22 ಲಕ್ಷ 80 ವರ್ಷದ ದಾಟಿದವರು ಹಾಗೂ 1184 ಮಂದಿ 100 ವರ್ಷ ಮೀರಿದ ಮತದಾರರು ಹಿಮಾಚಲದಲ್ಲಿದ್ದಾರೆ.
ಶೇರ್ ಆಯಾ ಶೇರ್ ಆಯಾ, ಹಿಮಾಚಲ ಪ್ರದೇಶದಲ್ಲಿ ಮೊಳಗಿತು ಮೋದಿಗೆ ಭರ್ಜರಿ ಜಯಘೋಷದ ಸ್ವಾಗತ!
ಹಿಮಾಚಲ ಪ್ರದೇಶದಲ್ಲಿ 1993ರಿಂದಲೂ ಬಿಜೆಪಿಗೆ ಪ್ರಬಲ ಟಕ್ಕರ್ ಕೊಡುತ್ತಿದ್ದ ಹಿರಿಯ ನಾಯಕ ವೀರಭದ್ರ ಸಿಂಗ್ ಅವರು 2021ರಲ್ಲಿ ಕಾಲವಾದ ನಂತರ ಅವರ ಪತ್ನಿ ಪ್ರತಿಭಾ ಸಿಂಗ್ ಅವರು ಕಾಂಗ್ರೆಸ್ಸಿನ ನೊಗ ಹೊತ್ತಿದ್ದಾರೆ. ಆದರೆ ವೀರಭದ್ರ ಅವರ ಅತ್ಯಾಪ್ತರಾಗಿದ್ದ ಹರ್ಷ ಮಹಾಜನ್ ಅವರು ಪಕ್ಷ ತೊರೆದಿರುವುದು ಹಿನ್ನಡೆಯಾಗಿದೆ. 1993ರಿಂದಲೂ ಹಿಮಾಚಲ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಯಾವುದೇ ಪಕ್ಷವೂ ಆಯ್ಕೆಯಾಗಿಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಹಿಮಾಚಲ ಜನರು ಸರ್ಕಾರ ಬದಲಾಯಿಸುತ್ತಾ ಬಂದಿದ್ದಾರೆ. ಈ ಸಂಪ್ರದಾಯವನ್ನು ಮುಂದುವರೆಸಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ಬರಲು ಖರ್ಗೆಯವರು ಪಕ್ಷವನ್ನು ಮರುಸಂಘಟಿಸಬೇಕಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.